By Village Missionary Movement
Saturday, 13-Dec-2025ಧೈನಂದಿನ ಧ್ಯಾನ(Kannada) – 13.12.2025
ಆತ್ಮ
"ಎಷ್ಟೋ ದೊಡ್ಡ ಈ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿ ಕೊಳ್ಳುವದು ಹೇಗೆ? ..." - ಇಬ್ರಿಯ 2:4
ಅಮೆರಿಕದ ಅತ್ಯಂತ ಪ್ರಸಿದ್ಧ ವರ್ಣಚಿತ್ರಕಾರರಲ್ಲಿ ಒಬ್ಬರಾದ ಬರ್ಟನ್ ಎಂಬವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಈ ಸಂದೇಶವನ್ನು ಬರೆದಿಟ್ಟು ಹೋದರು. ನಾನು ನನ್ನ ಪಾಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಒಂದು ಹೆಂಡತಿಯಿಂದ ಇನ್ನೊಬ್ಬ ಹೆಂಡತಿಯ ಬಳಿಗೂ, ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಓಡಿದೆ. ಹಾಗೆ ಮಾಡಿದ್ದರಿಂದ, ನನ್ನೊಂದಿಗೆ ವಾಸಿಸುತ್ತಿದ್ದವರಿಗೆ ನಾನು ದೊಡ್ಡ ನೋವನ್ನುಂಟುಮಾಡಿದ್ದೇನೆ. ಇದೆಲ್ಲದಕ್ಕೂ ಕಾರಣ ನಾನೇ ಹೊರತು ಬೇರೆ ಯಾರೂ ಅಲ್ಲ. ಪ್ರತಿದಿನವೂ 24 ಗಂಟೆಗಳನ್ನು ಕಳೆಯಲು ನಾನು ಮಾಡಿದ ಪ್ರಯತ್ನಗಳಲ್ಲಿ ಸೋಲನ್ನು ಕಂಡದ್ದರಿಂದ ನನ್ನ ಜೀವನವನ್ನು ಮುಗಿಸುತ್ತಿದ್ದೇನೆ ಎಂದು ಕರುಣಾಜನಕವಾಗಿ ಹೇಳಿ ಸತ್ತರು. ಅವರು ಖ್ಯಾತಿ, ಸಂಪತ್ತು ಮತ್ತು ಪದವಿಯನ್ನು ಗಳಿಸಿದ್ದರೂ, ಅವರು ತನ್ನ ಆತ್ಮವನ್ನು ರಕ್ಷಿಸಿಕೊಳ್ಳಲು ತಪ್ಪಿಹೋದದ್ದರಿಂದ ಜೀವನದಲ್ಲಿ ವಿಫಲರಾದರು. ಬರ್ಟನ್ ತನ್ನ ಆತ್ಮವನ್ನು ನಷ್ಟಪಡಿಸಿಕೊಂಡವರಾಗಿ ತನ್ನ ಜೀವನವನ್ನು ಮುಗಿಸಿದರು.
ಸತ್ಯವೇದದಲ್ಲಿ, ಅರಸನಾದ ಸೊಲೊಮೋನನ ಬಳಿ ಕರ್ತನು, "ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಮುಂಚೆ ಇರಲಿಲ್ಲ; ಮುಂದೆಯೂ ಇರುವದಿಲ್ಲ" ಎಂದರು. ದೇವರು ಅವರನ್ನು ಅಂತಹ ಉನ್ನತ ಸ್ಥಾನದಲ್ಲಿ ಇರಿಸಿದ್ದರು. ಆದರೆ ಅವರು ದೇವರ ಆಜ್ಞೆಗೆ ವಿಧೇಯರಾಗಲಿಲ್ಲ. ದೇವರು ಅವರಿಗೆ ಹಲವು ಬಾರಿ ಎಚ್ಚರಿಸಿದರು, ಆದರೆ ಅವರು ಕೇಳಲಿಲ್ಲ. ಆದ್ದರಿಂದ ಅವರ ಅಂತ್ಯವು ಪರಿತಾಪವಾಗಿ ತನ್ನ ಆತ್ಮವನ್ನು ನಷ್ಟಪಡಿಸಿದ್ದಾಗಿಯೇ ಮುಗಿಯಿತು.
ನನಗೆ ಪ್ರಿಯವಾದವರೇ, ದೇವರು ನಮಗೆ ಎಷ್ಟು ದೊಡ್ಡ ರಕ್ಷಣೆಯನ್ನು ನೀಡಿದ್ದಾರೆ. ದೇವರು ನಮ್ಮ ಬಳಿ ಹಲವು ಬಾರಿ ಪಾಪದ ಕುರಿತು ಗದರಿಸಿದರೂ ವಿಧೇಯರಾಗುವ ಮನಸ್ಸಿಲ್ಲದೇ ಇದ್ದೇವಾ? ನಾವು ಜೀವಿಸುವುದು ಒಂದೇ ಒಂದು ಜೀವನ. ಅದನ್ನು ದೇವರಿಗಾಗಿ ಜೀವಿಸೋಣ. ನಾವು ಕಣ್ಣುಗಳನ್ನು ಮುಚ್ಚುವಾಗ, ನಮ್ಮ ಆತ್ಮವು ಪರಲೋಕದಲ್ಲಿ ದೇವರ ಸನ್ನಿಧಿಯಲ್ಲಿ ಇರಬೇಕೆಂಬುದೇ ನಮ್ಮ ಬಯಕೆಯಾಗಿರಲಿ. ನಮ್ಮ ಆತ್ಮದ ಮೌಲ್ಯವು ಅಮೂಲ್ಯವಾದುದು. ಅದನ್ನು ಕಳೆದುಕೊಳ್ಳದೆ ಕಾದುಕೊಳ್ಳೋಣ.
- Mrs. ಅನಿತಾ ಅಳಗರಸ್ವಾಮಿ
ಪ್ರಾರ್ಥನಾ ಅಂಶ:
ಅರ್ಥಪೂರ್ಣ ಕ್ರಿಸ್‌ಮಸ್ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸ್ವಯಂಸೇವಕರನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482