By Village Missionary Movement
Friday, 12-Dec-2025ಧೈನಂದಿನ ಧ್ಯಾನ(Kannada) – 12.12.2025
ಒಳ್ಳೆಯ ಕುರುಬ
"ನಾನೇ ಒಳ್ಳೇ ಕುರುಬನು;..." - ಯೋಹಾನ 10:11
ದಿನಗೂಲಿ ಕೆಲಸ ಮಾಡುತ್ತಿದ್ದ ಒಬ್ಬ ತಾಯಿ ತನ್ನ ಮನೆಯ ಹತ್ತಿರದ ಆಲಯಕ್ಕೆ ಹೋಗಿ ದಿನನಿತ್ಯ ಪ್ರಾರ್ಥಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅವರಿಗೆ ಆಲಯದಿಂದ ಒಂದು ಕುರಿಯನ್ನು ಆರೈಕೆ ಮಾಡಲು ನೀಡಲಾಯಿತು. ಆ ತಾಯಿ ಅದನ್ನು ಸಂತೋಷವಾಗಿ ಸ್ವೀಕರಿಸಿ ಅದನ್ನು ಮನೆಯಲ್ಲಿ ಬೆಳೆಸುತ್ತಿದ್ದರು. ಆ ಕುರಿಗೆ ನೀರು ಇಡುವುದು, ಎಲೆಗಳನ್ನು ಹಾಕುವಂತಹ ಕೆಲಸಗಳನ್ನೆಲ್ಲ ಮಾಡಿದ ನಂತರ, ತಾಯಿ ತನ್ನ ಕೆಲಸಕ್ಕೆ ಹೋಗಿಬಿಡುತ್ತಿದ್ದರು. ಒಂದು ದಿನ ಎಂದಿನಂತೆ ತಾಯಿ ಕೆಲಸಕ್ಕೆ ಹೋಗಿಬಿಟ್ಟು, ಮನೆಗೆ ಹಿಂದಿರುಗುವಾಗ, ಅವರ ಮನೆಯ ಅಂಗಳದಲ್ಲಿ ಕಟ್ಟಲಾಗಿದ್ದ ಕುರಿ ಕಾಣೆಯಾಗಿತ್ತು. ಆ ತಾಯಿ ಅಳುತ್ತಾ ಕುರಿಯನ್ನು ಅನೇಕ ಸ್ಥಳಗಳಲ್ಲಿ ಹುಡುಕಿದರು. ಬಹಳ ಸಮಯದಿಂದ ಕುರಿಯನ್ನು ಹುಡುಕಿ ಸುಸ್ತಾಗಿದ್ದ ಅವರು ಹತ್ತಿರದ ಆಲಯಕ್ಕೆ ಹೋಗಿ ಪ್ರಾರ್ಥಿಸಿದರು. ಎಂತಹ ಆಶ್ಚರ್ಯ! ಕೊನೆಗೆ ಕುರಿಯೇ ಮನೆಯ ಕಡೆಗೆ ಬರುತ್ತಿರುವುದನ್ನು ನೋಡಿ ಸಂತೋಷಪಟ್ಟರು.
ಯೋಹಾನ 10 ನೇ ಅಧ್ಯಾಯದಲ್ಲಿ, ಒಳ್ಳೆಯ ಕುರುಬನ ಕಥೆಯನ್ನು ನಾವು ಓದುತ್ತೇವೆ. ಕುರಿಗಳು ಕುರುಬನ ಶಬ್ದವನ್ನು ತಿಳಿದಿರುತ್ತವೆ. ಆದ್ದರಿಂದ ಅವು ಅವನ ಶಬ್ದಕ್ಕೆ ಕಿವಿಗೊಡುತ್ತವೆ. ಅವನು ತನ್ನ ಕುರಿಗಳನ್ನು ಹೆಸರು ಹೇಳಿ ಕರೆದು, ಅವುಗಳನ್ನು ಹೊರಗೆ ಕರೆದುಕೊಂಡು ಹೋಗುತ್ತಾನೆ. ಕುರುಬನು ತನ್ನ ಕುರಿಗಳನ್ನು ಹೊರಗೆ ಬಿಟ್ಟ ನಂತರ ಅವುಗಳ ಮುಂದೆ ನಡೆದುಕೊಂಡು ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ. ಅವುಗಳಿಗೆ ಅಪರಿಚಿತರ ಧ್ವನಿ ತಿಳಿಯದಿರುವುದರಿಂದ, ಅವು ಅಪರಿಚಿತನನ್ನು ಹಿಂಬಾಲಿಸದೇ ಅವನನ್ನು ಬಿಟ್ಟು ಓಡಿಹೋಗುತ್ತವೆ.
ಹೌದು, ಪ್ರಿಯರೇ, ಆ ಕುರುಬನೇ ನಮ್ಮ ಯೇಸು ಕ್ರಿಸ್ತನು. ನಾವೇ ಆ ಕುರಿಗಳು. ಪಾಪ ಮತ್ತು ಶಾಪದ ಮಾರ್ಗದಿಂದ ದಾರಿ ತಪ್ಪಿದ ನಮ್ಮನ್ನು ವಿಮೋಚಿಸಲು ಅವರು ತನ್ನ ಪ್ರಾಣವನ್ನೇ ಕೊಟ್ಟು, ಅವರ ರಕ್ತದಿಂದ ನಮ್ಮನ್ನು ತೊಳೆದು ನಮ್ಮನ್ನು ಬಿಡಿಸಿಕೊಂಡರು. ನಾವು ಮಾತ್ರ ಬಿಡುಗಡೆ ಹೊಂದಿದರೆ ಸಾಕಾಗುವುದಿಲ್ಲ. ಈ ಲೋಕದಲ್ಲಿ, ಸೈತಾನನು ಯೌವನಸ್ಥರನ್ನು ಕುಡಿತ, ಮಾದಕ ವ್ಯಸನ ಮತ್ತು ಸಲಿಂಗಕಾಮದ ಮೂಲಕ ದಾರಿ ತಪ್ಪಿಸುತ್ತಿದ್ದಾನೆ. ಕರ್ತನು ನಮಗಾಗಿ ಅಳುತ್ತಿದ್ದಾರೆ. ಯೇಸುವಿನ ಪ್ರೀತಿಯನ್ನು ಅರಿಯದ ಯೌವನಸ್ಥರನ್ನು ಸೈತಾನನು ಬೇಗನೆ ಗುಲಾಮರನ್ನಾಗಿ ಮಾಡಿ ಬಿಡುತ್ತಾನೆ. ಆತನ ರಕ್ತದಿಂದ ಅವರೆಲ್ಲರೂ ಬಿಡುಗಡೆ ಹೊಂದುವಂತೆ ನಾವು ಜಾಗರೂಕರಾಗಿದ್ದು, ಆತ್ಮಭಾರವುಳ್ಳವರಾಗಿ ಯೇಸುವಿನ ಪ್ರೀತಿಯನ್ನು ಈ ಲೋಕವೆಲ್ಲಾ ಎತ್ತಿ ಹೇಳಲು ಶ್ರಮಿಸೋಣ. ಅಲೆದಾಡುತ್ತಿರುವ ಕುರಿಗಳನ್ನು ದೇವರ ಹಿಂಡಿನಲ್ಲಿ ಸೇರಿಸೋಣ.
- J. ಸಿಂಧು
ಪ್ರಾರ್ಥನಾ ಅಂಶ:
ಈ ಅರ್ಥಪೂರ್ಣ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಹೃದಯದಲ್ಲಿ ಕ್ರಿಸ್ತನು ಜನಿಸುವಂತೆ ಪ್ರಾರ್ಥಿಸಿರಿ .
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482