By Village Missionary Movement
Thursday, 11-Dec-2025ಧೈನಂದಿನ ಧ್ಯಾನ(Kannada) – 11.12.2025
ರಕ್ಷಕ
"ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು." - ಮತ್ತಾಯ. 1:21
ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ಜನನದಿಂದಾಗಿ ಕ್ರಿಸ್‌ಮಸ್ ಎಂಬ ಸಂತೋಷದಾಯಕ ದಿನವು ಉಂಟಾಯಿತು. ಯೇಸು ಈ ಲೋಕಕ್ಕೆ ಏತಕ್ಕಾಗಿ ಬಂದರು?
"ತನ್ನ ಜನರ ಪಾಪಗಳನ್ನು ನೀಗಿಸಿ ರಕ್ಷಿಸಲು ಬಂದರು. ರೋಗದಲ್ಲಿ ಸಾಯುವ ಜನರಿಗಿಂತ ಪಾಪದಲ್ಲಿ ಸಾಯುವ ಜನರೇ ಹೆಚ್ಚು. ಅನಾರೋಗ್ಯಕ್ಕೆ ಒಳಗಾದರೆ, ಮಾತ್ರೆ ಔಷಧಿಗಳಿಂದ ಹೇಗಾದರೂ ಅವರನ್ನು ಕಾಪಾಡಬಹುದು. ಪಾಪದ ಕಾಯಿಲೆಗೆ ಯಾವ ಔಷಧಿಯೂ ಇಲ್ಲ. ಆದರೆ ಒಬ್ಬರ ಬಳಿ ಮಾತ್ರ ನಮ್ಮನ್ನು ಪಾಪದಿಂದ ಕಾಪಾಡಲು ಔಷಧಿ ಇದೆ. ಆ ವೈದ್ಯರು ಯಾರೆಂದರೆ ಕರ್ತನಾದ ಯೇಸು ಕ್ರಿಸ್ತನೇ.
ಹಾಗಾದರೆ ಪಾಪವು ಅಷ್ಟು ಮೋಸವಾದದ್ದಾ? ಹೌದು! ಸತ್ಯವೇದವು ಹೇಳುತ್ತದೆ, "ಪಾಪದ ಸಂಬಳ ಮರಣ". ಯಾವ ಕೆಲಸ ಮಾಡಿದರೂ, ಸಂಬಳ ಹಣ ಸಿಗುತ್ತದೆ. ಆದರೆ ಪಾಪ ಎಂಬ ಕೆಲಸದಲ್ಲಿ ತೊಡಗಿರುವವರಿಗೆ ಸಿಗುವ ಸಂಬಳ ಮರಣ. "ಪಾಪ ಮಾಡುವ ಆತ್ಮವು ಸಾಯುತ್ತದೆ" (ಯೆಹೆಜ್ಕೇಲ 18:20). ಕೆಲವೊಮ್ಮೆ ಪಾಪವು ದೇಹಕ್ಕೆ ಅನಾರೋಗ್ಯವನ್ನು ತರುತ್ತದೆ. ಪಾಪವು ಜನರಿಗೆ ಶಾಪಗಳನ್ನು ತರುತ್ತದೆ. ಶಾಪಗಳು ಕುಟುಂಬಗಳನ್ನು ನಾಶಮಾಡಿ ನಿರ್ಮೂಲಮಾಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದು ನಮ್ಮನ್ನು ಆಶೀರ್ವದಿಸುವ ಮತ್ತು ರಕ್ಷಿಸುವ ದೇವರಿಂದ ನಮ್ಮನ್ನು ದೂರ ಮಾಡುತ್ತದೆ. ಅದು ಯೇಸು ಕ್ರಿಸ್ತನ ಕರುಣೆಯನ್ನು ಪಡೆಯುವುದನ್ನು ತಡೆಯುತ್ತದೆ. ಯೆಶಾಯ 59:2 "... ನಿಮ್ಮ ಪಾಪಗಳೇ ಆತನು ಕೇಳಲಾರದಂತೆ ಆತನ ಮುಖಕ್ಕೆ ಅಡ್ಡವಾಗಿವೆ."
ಈ ಸಂದೇಶವನ್ನು ಓದುತ್ತಿರುವ ನೀವು ಯಾರೇ ಆಗಿದ್ದರೂ ಯೇಸುವನ್ನು ಅರಿತವರಾಗಿದ್ದರೂ ಅರಿಯದವರಾಗಿದ್ದರೂ ಪಾಪದ ಭೀಕರತೆ ತುಂಬಾ ಮೋಸವಾದದ್ದೊಂದು . ಅದಕ್ಕಾಗಿಯೇ 2000 ವರ್ಷಗಳ ಹಿಂದೆ, "ಯೇಸು ಕ್ರಿಸ್ತನು" ಎಂಬ ಹೆಸರಿನೊಂದಿಗೆ ಈ ಭೂಮಿಯ ಮೇಲೆ ಮಾನವ ರೂಪದಲ್ಲಿ ಕಾಣಿಸಿಕೊಂಡರು. ಹಾಗೆ ಅವರು ಮಾನವ ರೂಪದಲ್ಲಿ ಕಾಣಿಸಿಕೊಂಡ ಉದ್ದೇಶ, ಪಾಪದಿಂದ ಉಂಟಾಗುವ ಎಲ್ಲಾ ವಿನಾಶದಿಂದ ತಾವು ಸೃಷ್ಟಿಸಿದ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿಯೇ! ಯೇಸು ನಮ್ಮನ್ನು ಪಾಪದಿಂದ ಬಿಡಿಸಲು ಈ ಲೋಕಕ್ಕೆ ಬಂದರು.
ಪ್ರಿಯ ಜನರೇ! ಯೇಸುವನ್ನು ಅಂಗೀಕರಿಸಿರುವ ನಾವು, ಅವರನ್ನು ಅರಿಯದ ಜನರ ನಡುವೆ ಹೋಗಿ ಯೇಸುವೇ ನಮ್ಮನ್ನು ಪಾಪದಿಂದ ರಕ್ಷಿಸಲು ಬಂದ ದೇವರು. ಪಾಪವು ಬಹಳ ಮೋಸವಾದದ್ದು ಎಂದು ಹೇಳಿ, ಅವರೊಂದಿಗೆ ಕ್ರಿಸ್‌ಮಸ್ ಅನ್ನು ಸಂತೋಷವಾಗಿ ಆಚರಿಸೋಣ. ಇದೇ ನಿಜವಾದ ಕ್ರಿಸ್‌ಮಸ್.
ಆಮೆನ್! ಹಲ್ಲೆಲೂಯಾ!
- Mrs. ಹೆಪ್ಸಿಬಾ ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಅನೇಕ ಸ್ಥಳಗಳಲ್ಲಿ ಅರ್ಥಪೂರ್ಣ ಕ್ರಿಸ್‌ಮಸ್ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ವಯಂಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482