Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.12.2025
Share:

By Village Missionary Movement

Wednesday, 10-Dec-2025

ಧೈನಂದಿನ ಧ್ಯಾನ(Kannada) – 10.12.2025

 

ಜೀವವನ್ನು ವಿಮೋಚಿಸಿದ ಪೂರ್ಣತೆ 

 

“...ಯೆಹೋವನ ಪ್ರೀತಿಪಾತ್ರನು ಬಾಬೆಲಿನಲ್ಲಿ ಆತನ ಇಷ್ಟವನ್ನು ನೆರವೇರಿಸುವನು,..." - ಯೆಶಾಯ 48:14

 

ತನ್ನ ಹೆಗಲ ಮೇಲೆ ಒಂದು ಮಗುವನ್ನು ಹೊತ್ತುಕೊಂಡು ಓಡುತ್ತಿರುವ ಒಬ್ಬ ಮನುಷ್ಯನ ಯೋಚನೆಯೆಲ್ಲಾ ಹೇಗಾದರೂ ಆ ಮಗುವನ್ನು ಕಾಪಾಡಲೇ ಬೇಕು ಎಂಬುದು ಮಾತ್ರವೇ. ಈಗಾಗಲೇ ಒಂದೂವರೆ ಕಿಲೋಮೀಟರ್ ಓಡಿ ಆಗಿದೆ. ಇನ್ನೂ ಒಂದೂವರೆ ಕಿಲೋಮೀಟರ್ ಓಡಬೇಕಾಗಿದೆ. ಸಾರಿಗೆ ಸೌಲಭ್ಯಗಳಿಲ್ಲದ ಹಳ್ಳಿ. ಎಲ್ಲಿಗೆ ಹೋಗಬೇಕಾದರೂ ಕಾಲುನಡಿಗೆಯಲ್ಲೇ ಹೋಗುವುದರಲ್ಲಿ ಸ್ವಲ್ಪವೂ ಬೇಸರಗೊಳ್ಳದ ಗ್ರಾಮಸ್ಥರು. ಓಡುತ್ತಿರುವ ಆ ವ್ಯಕ್ತಿಯನ್ನು ಕಂಡು, ಮಗುವನ್ನು ಕೊಡಿ, ನಾನು ಎತ್ತಿಕೊಂಡು ಬರುತ್ತೇನೆ ಎಂದು ಹೇಳುವವರಿಗೂ ಕೂಡ, ನಿಂತು ಉತ್ತರ ಹೇಳದೇ ಆ ವ್ಯಕ್ತಿ ವೇಗವಾಗಿ ಬೆವರು ಸುರಿಸುತ್ತಾ ಓಡುತ್ತಿದ್ದಾರೆ. ಪಕ್ಕದ ಹಳ್ಳಿಯಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಣಿವರಿಯಿಲ್ಲದೆ ಓಡಿ, ಆ ಚಿಕ್ಕ ಹುಡುಗನನ್ನು ಚಿಕಿತ್ಸೆಗೆ ಕಳುಹಿಸಿದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಆ ಮಗುವಿಗೆ ತೀವ್ರ ಚಿಕಿತ್ಸೆ ನೀಡಿದರು. ಒಂದು ಗಂಟೆಯ ನಂತರ ಎಚ್ಚರಗೊಂಡ ಹುಡುಗ, ತನ್ನನ್ನು ಉಳಿಸಿದ ವ್ಯಕ್ತಿಯನ್ನು ವಿಸ್ಮಯದಿಂದ ನೋಡಿದನು. ವೈದ್ಯರು ಆ ವ್ಯಕ್ತಿಯನ್ನು ಕರೆದು, ನಿಮ್ಮ ಮಗ ಬದುಕಿಬಿಟ್ಟ. ನೀವು ಅವನನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆತಂದಿದ್ದೀರಿ ಎಂದು ಹೇಳಿದರು. ಆ ವ್ಯಕ್ತಿ ಮುಗುಳ್ನಗುತ್ತಾ, ಅಯ್ಯಾ, ಅವನು ನನ್ನ ಮಗುವಲ್ಲ. ದಾರಿಯಲ್ಲಿ ಮೂರ್ಛೆ ಹೋಗಿದ್ದನು, ನಾನು ತಕ್ಷಣ ಅವನನ್ನು ಎತ್ತಿಕೊಂಡು ನಡೆಯಲು ಪ್ರಾರಂಭಿಸಿದೆ. ಇವನನ್ನು ಹೇಗಾದರೂ ಕಾಪಾಡಬೇಕೆಂಬ ದೃಢಸಂಕಲ್ಪದಿಂದ ಬಂದುಬಿಟ್ಟೆ ಸಾರ್ ಎಂದರು. 

 

ಇದು ಸಾಧ್ಯವಾ? ತನಗೆ ಸಂಪೂರ್ಣವಾಗಿ ಸಂಬಂಧವೇ ಇಲ್ಲದ ಒಂದು ಮಗುವನ್ನು, ರಸ್ತೆಯಲ್ಲಿ ಮೂರ್ಛೆ ಹೋಗಿದ್ದವನನ್ನು ಹೊತ್ತುಕೊಂಡು ಹೋಗಿ, ಆ ಹುಡುಗನ ಜೀವವನ್ನು ಉಳಿಸಿದ್ದು ನಮಗೆ ಆಶ್ಚರ್ಯವಾಗಿ ಇದೆ ಅಲ್ಲವೇ? ಇದು ಜೀವವನ್ನು ಉಳಿಸಿದ ಉನ್ನತವಾದ ಕಾರ್ಯವಲ್ಲವೇ? ತಾನು ಕೈಗೊಂಡ ಈ ಕಾರ್ಯದಲ್ಲಿ, ಹೆಗಲ ಮೇಲೆ ಹೊತ್ತುಕೊಂಡ ಹುಡುಗನೊಂದಿಗೆ ಓಟ ಮತ್ತು ನಡಿಗೆಯೊಂದಿಗೆ ಎಲ್ಲಿಯೂ ವಿಶ್ರಾಂತಿ ಪಡೆಯದೆ, ಯಾರೊಂದಿಗೂ ಒಂದು ಕ್ಷಣವೂ ಮಾತನಾಡಲು ನಿಲ್ಲದೆ, ಯಾವುದೇ ವಾಹನಕ್ಕಾಗಿ ಕಾಯದೆ, ಅವನ ಜೀವ ಉಳಿಸಬೇಕೆಂಬ ಏಕೈಕ ಉದ್ದೇಶದಿಂದ, ಅವನನ್ನು ಮೂರು ಕಿ.ಮೀ ದೂರ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹಳ್ಳ ದಿಣ್ಣೆಗಳಂತಹ‌ ಮಾರ್ಗಗಳಲ್ಲಿ ಸ್ವಲ್ಪವೂ ತವಕಪಡದೆ ಹೋದರು. ಆ ಹುಡುಗನ ಜೀವವನ್ನು ಉಳಿಸಿ ತನ್ನ ಉದ್ದೇಶದಲ್ಲಿ ಯಶಸ್ವಿಯನ್ನು ಕಂಡರು. ಊರಲ್ಲ, ಕುಟುಂಬವಲ್ಲ, ಜನಾಂಗವಲ್ಲ, ಅವರ ಸ್ವಂತ ಜನರು ಕೂಡ ಅಲ್ಲ. ಒಂದೇ ಆಲೋಚನೆ, ಒಂದೇ ವೈರಾಗ್ಯ, ಒಂದೇ ಕ್ರಿಯೆಯ ವೇಗ, ಹಿಂದರಿಯದ ವಿಜಯದ ಪ್ರಯಾಣ ಜೀವವನ್ನು ಉಳಿಸಿದ ಪೂರ್ಣತೆ! 

 

ಪ್ರಿಯರೇ, ಇಂತಹ ಸವಾಲನ್ನು ನಿಮ್ಮ ಮುಂದೆ ನೀಡಲಾಗಿದೆ.

 

ನಾಶವಾಗುತ್ತಿರುವ ಆತ್ಮಗಳಿಗೆ ಪ್ರೀತಿಯ ಯೇಸುವನ್ನು ಘೋಷಿಸುವ ಕೆಲಸದಲ್ಲಿ ನೀವು ಸಹ ಇದೇ ಸಮರ್ಪಣೆಯೊಂದಿಗೆ ಕಾಣಲ್ಪಡುತ್ತೀರಾ? "ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಕರ್ತನ ನುಡಿಗೆ, ನನ್ನನ್ನು ಕಳುಹಿಸು ಎಂದು ಅರ್ಪಿಸಿಕೊಳ್ಳೋಣವಾ? 

- Mrs.ಎಮೀಮಾ ಸೌಂದರರಾಜನ್

 

ಪ್ರಾರ್ಥನಾ ಅಂಶ:

ಅನೇಕ ಪ್ರಾಂತ್ಯಗಳಲ್ಲಿ ಅರ್ಥಪೂರ್ಣ ಕ್ರಿಸ್‌ಮಸ್ ಕಾರ್ಯಕ್ರಮಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş