Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.06.2021
Share:

By Village Missionary Movement

Wednesday, 09-Jun-2021

ಧೈನಂದಿನ ಧ್ಯಾನ(Kannada) – 09.06.2021

 

ಸಾಧ್ಯವಾ? ಸಾಧ್ಯ

 

“ನಿಮ್ಮ ವೈರಿಗಳನ್ನು ಪ್ರೀತಿಸಿರಿ;...." - ಮತ್ತಾಯ 5:44

 

ಪ್ರಖ್ಯಾತಿಗೊಂಡ ಸೇವಕರೊಬ್ಬರು ಆಗಾಗ್ಗೆ ಸೇವೆಗಾಗಿ ಕಲ್ಕತ್ತಾಗೆ ಹೋಗುತ್ತಿದ್ದರು. ರೈಲಿನಿಂದ ಇಳಿದು ಆಟೋ ಮತ್ತು ಟ್ಯಾಕ್ಸಿ ಚಾಲಕರು ಎಲ್ಲಿಗೆ ಹೋಗಬೇಕು ಎಂದು ಲಗೇಜನ್ನು ಎತ್ತಿಕೊಳ್ಳುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಇನ್ನೊಂದು ಕಡೆ ಭಿಕ್ಷುಕರು ಕಿರುಕುಳ ಕೊಡುತ್ತಲೇ ಇರುತ್ತಾರೆ. ಆದ್ದರಿಂದ ಈ ಎರಡು ಗುಂಪಿನ ಜನರನ್ನು ಕಂಡರೇನೆ ಇವರಿಗೆ ಆತಂಕವಾಗುತ್ತಿತ್ತು.

 

ಒಮ್ಮೆ ಅವರು ಎಂದಿನಂತೆ ರೈಲಿನಿಂದ ಇಳಿದು ಬಂದಾಗ ಟ್ಯಾಕ್ಸಿ ಡ್ರೈವರ್ ಬಂದು ಎಲ್ಲಿಗೆ ಹೋಗಬೇಕೆಂದು ಕೇಳಿ ಅವರ ಕೈಚೀಲವನ್ನು ಹಿಡಿದುಕೊಂಡರು. ಅವರು ಕೋಪದಿಂದ ಕೈ ಒದರಿಬಿಟ್ಟು ನಡೆಯಲು ಪ್ರಾರಂಭಿಸಿದರು. ಅವರು ಕೆಲವೇ ಅಡಿಗಳಷ್ಟೇ ನಡೆದು ಹೋಗಿರುತ್ತಾರೆ. ಅಷ್ಟರಲ್ಲಿ ಕಾಲು ಎಡವಿ ಬಿದ್ದು ನಾಡಿಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಲು ಪ್ರಾರಂಭಿಸಿತು, ಇದರಿಂದಾಗಿ ಬಟ್ಟೆಯೆಲ್ಲಾ ರಕ್ತವಾಯಿತು. ಒಬ್ಬ ಹುಡುಗ ಎಲ್ಲಿಂದಲೋ ಓಡಿ ಬಂದು ಅವನ ಬಾಟಲಿಯಿಂದ ನೀರು ಕೊಟ್ಟು ಗಾಯಗಳನ್ನು ತೊಳೆದುಕೊಳ್ಳುವಂತೆ ಹೇಳಿದನು. ಗಾಯವನ್ನು, ಬಟ್ಟೆಗಳನ್ನು ತೊಳೆದುಕೊಂಡ ನಂತರವೇ ಅವನು ಭಿಕ್ಷುಕ ಹುಡುಗ ಎಂದು ನೋಡಿದರು! ಆ ಸೇವಕರಿಗೆ ಮುಜುಗರವಾಯಿತು. ಬೇಡ ಎಂದು ಹೇಳಿದ ಟ್ಯಾಕ್ಸಿ ಡ್ರೈವರ್ ಓಡಿಬಂದು ಅವರನ್ನು ಎತ್ತಿಕೊಂಡು ರಕ್ತವನ್ನು ಒರೆಸಿದರು, ಅವರ ಕೈಚೀಲವನ್ನು ತೆಗೆದುಕೊಂಡು ತನ್ನ ಟ್ಯಾಕ್ಸಿಯಲ್ಲಿ ಹತ್ತಿಸಿಕೊಂಡರು. ಅವರು ಹೋಗಬೇಕಾದ ಸ್ಥಳ ತಲುಪುವ ಮೊದಲು, "ಸರ್ ಹೆಚ್ಚು ನೋವಾಗುತ್ತಿದೆಯಾ?" ಎಂದು ಕೇಳುತ್ತಲೇ ಇದ್ದರು. ಅವರ ಹೆಂಡತಿ ಕೂಡ ಇಷ್ಟು ಬಾರಿ ಕೇಳುತ್ತಿರಲಿಲ್ಲ. ಹೆಸರು, ಊರು ತಿಳಿಯದ ವ್ಯಕ್ತಿ ಇಷ್ಟೊಂದು ವಿಚಾರಿಸುತ್ತಿದ್ದಾರೆ ಎಂದು ನೆನೆಸಿ ಸೇವಕರ ಕಣ್ಣಿನಲ್ಲಿ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಅಂದಿನಿಂದ ಸೇವಕರು ಕಲ್ಕತ್ತಾ ಆಟೋ, ಟ್ಯಾಕ್ಸಿ ಚಾಲಕರು ಮತ್ತು ಭಿಕ್ಷುಕರಿಗಾಗಿ ಪ್ರಾರ್ಥನೆ ಮಾಡಲು ಮರೆಯಲೇ ಇಲ್ಲ.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ! ನಮ್ಮ ವೈಯಕ್ತಿಕ ಜೀವನದಲ್ಲಿಯೂ, ಸೇವಕರಾಗಿರುವ ನಮ್ಮ ಸೇವೆಯ ಹಾದಿಯಲ್ಲಿಯೂ ಕೆಲವರ ಬಗ್ಗೆ ನಾವು ಕಹಿ, ದ್ವೇಷದ ಮನೋಭಾವದಿಂದ ಬದುಕುತ್ತಿರಬಹುದು. ನಮ್ಮ ದೃಷ್ಟಿಯಲ್ಲಿ ಇದು ನ್ಯಾಯಯುತವೆಂದು ತೋರುತ್ತದೆ. "ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ಸಹೋದರನನ್ನು ಪ್ರೀತಿಸಬೇಕು" ಎಂಬ ದೇವರ ಆಜ್ಞೆಯಲ್ಲಿ ನೀವು, ನಾನು ತಿರಸ್ಕರಿಸಿದ ಸ್ನೇಹಿತರು ಸೇರಿಕೊಳ್ಳುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

 

ಸತ್ಯವೇದದಲ್ಲಿ ಅಬೀಮೆಲೆಕನು ಇಸಾಕನನ್ನು, ಅವನ ಕುಟುಂಬವನ್ನು, ಅವನ ಜನರನ್ನು, ಹಿಂಡುಗಳನ್ನು ತಮ್ಮ ಸ್ಥಳದಿಂದ ಓಡಿಸಿದಾಗಲೂ (ಆದಿ. 26:16) ಅಬೀಮೆಲೆಕನು ಅವನ ಮಂತ್ರಿಗಳೂ ಇಸಾಕನ ಬಳಿಗೆ ಬಂದಾಗ ಔತಣವನ್ನು ಮಾಡಿಸಿದನು (ಆದಿಕಾಂಡ 26:30 ). ಎಂದು ಓದುತ್ತೇವೆ. ಅವನನ್ನು ಓಡಿಸಿದವರಿಗೇ ಇಸಾಕನು ಔತಣ ಮಾಡಿಸಿದಾಗ, ನಮ್ಮನ್ನು ನೋಯಿಸುವವರನ್ನು, ಕಠಿಣವಾಗಿ ಮಾತನಾಡುವವರನ್ನು, ಕಣ್ಣೀರು ಸುರಿಸಲು ಕಾರಣವಾಗಿರುವವರನ್ನು ನಾವು ಕೂಡ ಕ್ಷಮಿಸಿ ಸ್ವೀಕರಿಸಬಹುದೇ. “ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿರಿ" ಎಂದು ಹೇಳಿ ಕ್ರಿಯೆಗಳಿಂದ ಬದುಕಿ ತೋರಿಸಿದ ನಮ್ಮ ಪರಲೋಕ ತಂದೆಯ ಮಾತುಗಳಿಗೆ ವಿಧೇಯರಾಗೋಣ. ಅವರಂತೆ ಅನೇಕರನ್ನು ಸಿದ್ಧ ಮಾಡೋಣ. 

- L. ಅಲಗರಸಾಮಿ

 

 

 

ಪ್ರಾರ್ಥನಾ ಅಂಶ:-

ನಮ್ಮ ಪ್ರತಿಯೊಬ್ಬ ಪೂರ್ಣ ಸಮಯದ ಮಿಷನರಿಗಳನ್ನು ದೇವರು ಕಾಪಾಡಿ, ಪೋಷಿಸಿ, ಅದ್ಭುತವಾಗಿ ನಡೆಸುವಂತೆ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin