Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.12.2025
Share:

By Village Missionary Movement

Tuesday, 09-Dec-2025

ಧೈನಂದಿನ ಧ್ಯಾನ(Kannada) – 09.12.2025

 

ಒಳ್ಳೆಯದನ್ನು ಮಾಡು!

 

"ಕೆಟ್ಟತನಕ್ಕೆ ಸೋತು ಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು." - ರೋಮಾ 12:21

 

ನಾನು ಹೊಸದಾಗಿ ಕೆಲಸಕ್ಕೆ ಹೋದ ಸ್ಥಳದಲ್ಲಿ ನನ್ನ ಮೇಲೆ ಯಾವುದೇ ರೀತಿಯಲ್ಲಿ ಅಧಿಕಾರ ಚಲಾಯಿಸುವ ಅಗತ್ಯವಿಲ್ಲದ ಸಹೋದರಿಯೊಬ್ಬರು, ನನ್ನ ಮೇಲೆ ಅನ್ಯಾಯವಾಗಿ ಅಧಿಕಾರ ಚಲಾಯಿಸಿದರು. ನಾನು ಕರ್ತನನ್ನು ಪ್ರಾರ್ಥಿಸುತ್ತಾ ಬೈಬಲ್ ಓದುತ್ತಿದ್ದಾಗ, ರೋಮಾ 12:21 ರ ಪ್ರಕಾರ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸಲು ದೇವರು ನನಗೆ ಕಲಿಸಿಕೊಟ್ಟರು. ಹಾಗಾಗಿ ಸತತವಾಗಿ ನಾನು ಅವರಿಗೆ ಸಹಾಯ ಮಾಡುವುದನ್ನು, ಅವರ ಕೆಲಸ ಮಾಡುವುದನ್ನು ಮುಂದುವರಿಸಿದೆ. ಅಂತಿಮವಾಗಿ, ಅವರು ತಮ್ಮ ತಪ್ಪನ್ನು ಅರಿತುಕೊಂಡು ನನ್ನನ್ನು ಪ್ರೀತಿಸಲು ಪ್ರಾರಂಭಿಸಿದರು. ದೇವರು ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಲು ಸಹಾಯ ಮಾಡಿದರು. ಕರ್ತನು ಕಲಿಸಿಕೊಡುವ ಕಾರ್ಯದಲ್ಲಿ ಎಷ್ಟು ಸತ್ಯ ಇದೆ ನೋಡಿರಿ!

 

ಸತ್ಯವೇದದಲ್ಲಿ, 2 ಅರಸು. 5 ನೇ ಅಧ್ಯಾಯದಲ್ಲಿ, ಸಿರಿಯಾ ದೇಶಕ್ಕೆ ಗುಲಾಮಳಾಗಿ ಕರೆದೊಯ್ಯಲ್ಪಟ್ಟ ಪುಟ್ಟ ಹುಡುಗಿ, ತನ್ನ ದೇಶ, ಕುಟುಂಬ ಮತ್ತು ಸಂಬಂಧಿಕರನ್ನು ಕಳೆದುಕೊಂಡರೂ, ದೇವರ ಮೇಲೆ ಅಪಾರ ಪ್ರೀತಿಯುಳ್ಳವಳಾಗಿದ್ದು ಫಲ ನೀಡಿದಳು. ತನ್ನ ಯಜಮಾನನಾದ ನಾಮಾನನ ಕುಷ್ಠರೋಗವು ನೀಗಬೇಕು ಎಂಬುದರ ಮೇಲೆ ಆಸಕ್ತಿಯುಳ್ಳವಳಾಗಿದ್ದಳು. ಆ ಚಿಕ್ಕ ಹುಡುಗಿ ಹೇಳಿದ್ದನ್ನು ಕೇಳಿ, ಸರ್ಕಾರವೇ ನಾಮಾನನನ್ನು ಇಸ್ರಾಯೇಲ್‌ಗೆ ಕಳುಹಿಸಲು ಮುಂದೆ ಬಂದಿತು. ಎಷ್ಟು ದೊಡ್ಡ ಸತ್ಕಾರ್ಯಗಳನ್ನು ಅವಳು ಮಾಡಿದ್ದಾಳೆ. ನಾಮಾನನಿಗೆ ಗುಣವಾದದ್ದರಿಂದ, ಸಿರಿಯಾ ದೇಶಕ್ಕೆ ರಕ್ಷಣೆ ಬಂತು. ಜನರು ಕರ್ತನೇ ನಿಜವಾದ ದೇವರು ಎಂದು ತಿಳಿದುಕೊಂಡರು. ಬೈಬಲ್‌ನಲ್ಲಿ ಹೆಸರು ಮತ್ತು ಕುಟುಂಬದ ಹಿನ್ನೆಲೆಯನ್ನು ಉಲ್ಲೇಖಿಸದ ಆ ಪುಟ್ಟ ಹುಡುಗಿ, ತನ್ನ ಒಳ್ಳೆಯ ಕಾರ್ಯಗಳಿಂದ ಇಡೀ ದೇಶವನ್ನು ಕರ್ತನ ಕಡೆಗೆ ತಿರುಗಿಸಿದಳು. ಕುಷ್ಠರೋಗವು ಒಂದು ಭಯಾನಕ ಕಾಯಿಲೆಯಾಗಿದ್ದರೂ, ಅವಳು ದೇವರ ಶಕ್ತಿಯನ್ನು ಅರಿತವಳಾಗಿ, ರೋಗವು ಗುಣವಾಗದೇ ಹೋದರೆ ತನಗೆ ಶಿಕ್ಷೆ ವಿಧಿಸಲಾಗುತ್ತದಲ್ಲಾ, ಏನು ಮಾಡುವುದು ಎಂದೆಲ್ಲಾ ಭಯಪಡದೇ ಇಸ್ರಾಯೇಲ್ ದೇವರಲ್ಲಿ ಸಂಪೂರ್ಣವಾದ ನಂಬಿಕೆಯನ್ನು ಇಟ್ಟಿದ್ದಳು.  

 

ಪ್ರಿಯರೇ! ನಮಗೆ ಹಾನಿ ಮಾಡಿದವರಿಗೆ ನಾವು ಒಳ್ಳೆಯದನ್ನು ಮಾಡಿ, ಕರ್ತನ ವಾಕ್ಯವನ್ನು ಕೇಳಿ ಅದರ ಪ್ರಕಾರ ನಡೆಯುವುದಾದರೆ, ನಮ್ಮ ಸಣ್ಣ ವಿಧೇಯತೆಯು ನಮ್ಮ ಕುಟುಂಬ, ಗ್ರಾಮ ಮತ್ತು ದೇಶವನ್ನು ಸಹ ಅಲುಗಾಡಿಸುತ್ತದೆ. ಒಳ್ಳೆಯದನ್ನು ಮಾಡಲು, ದೇವರ ವಾಕ್ಯದ ಪ್ರಕಾರ ನಡೆಯಲು ನಮ್ಮ ಹೃದಯವನ್ನು ಕರ್ತನಿಗೆ ಒಪ್ಪಿಸೋಣ. ದೇವರ ವಾಕ್ಯವು ನಮ್ಮ ಹೃದಯವನ್ನು ಹದಗೊಳಿಸುತ್ತದೆ, ಆದ್ದರಿಂದ ನಮಗೆ ಹಾನಿ ಮಾಡಿದವರಿಗೂ ಸಹ ನಾವು ಒಳ್ಳೆಯದನ್ನು ಮಾಡೋಣ!

- Sis. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

ಅರ್ಥಪೂರ್ಣ ಕ್ರಿಸ್‌ಮಸ್‌ಗೆ ತಮ್ಮ ಪಾಲನ್ನು ನೀಡಲು ತೀರ್ಮಾನ ತೆಗೆದುಕೊಂಡವರು, ಅದನ್ನು ನೆರವೇರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al