Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.12.2025
Share:

By Village Missionary Movement

Monday, 08-Dec-2025

ಧೈನಂದಿನ ಧ್ಯಾನ(Kannada) – 08.12.2025

 

ಒಬ್ಬ ಮನುಷ್ಯನನ್ನು ಹುಡುಕಿ..

 

"ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು" - ಯೋಹಾನ 1:9

 

C.T ಸ್ಟಡ್ ಎಂಬ ಪ್ರಸಿದ್ಧ ಕ್ರಿಕೆಟ್ ಆಟಗಾರ ಹೇರಳವಾದ ಆಸ್ತಿಗಳನ್ನು ಹೊಂದಿದ್ದರು. ಅವರು ಡಿ.ಎಲ್. ಮೂಡಿ ಅವರ ಪ್ರಸಂಗದಲ್ಲಿ ಯೇಸುಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. ಸ್ಟಡ್ ಅಗ್ರಗಣ್ಯ ಕ್ರಿಕೆಟಿಗನಾಗಲು ಬಯಸಿದ್ದರು. ಅವರ ಸಹೋದರ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಸ್ಟಡ್ ತನ್ನ ಹೃದಯದಲ್ಲಿ "ನಿತ್ಯಜೀವವನ್ನು ಸಂಧಿಸುವ ಸಂದರ್ಭ ಏರ್ಪಡುವಾಗ ಈ ಲೋಕದಲ್ಲಿ ನಾನು ಗಳಿಸಿದ ಎಲ್ಲಾ ಖ್ಯಾತಿ ಹೆಸರು ಎಲ್ಲವೂ ಶೂನ್ಯ" ಎಂದು ಅರಿತುಕೊಂಡರು. ಕ್ರಿಸ್ತನಿಗಾಗಿ ಆತ್ಮಗಳನ್ನು ಗೆಲ್ಲಲು ಬಯಸಿದ್ದರು. ಇಂಗ್ಲೆಂಡ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಉಜ್ಜೀವನ ಉಂಟಾಗಲು ಕಾರಣವಾದರು, ಚೀನಾ ಮತ್ತು ಭಾರತದಲ್ಲಿ ಮಿಷನರಿಯಾಗಿ ಕೆಲಸ ಮಾಡಿದರು. ನಂತರ, ಅವರು ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ಸಭೆಗಳನ್ನು ನಡೆಸಿದರು ಮತ್ತು ಸಾವಿರಾರು ಜನರು ದೇವರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಮಾಡಿದರು. ಅಂತಿಮವಾಗಿ, ಅವರು ಆಫ್ರಿಕಾಕ್ಕೆ ಹೋಗಿ ರಕ್ಷಕನಾದ ಯೇಸುವನ್ನು ಪರಿಚಯಿಸಿ, ಅವರನ್ನು ಬೆಳಕಿನ ಮಕ್ಕಳನ್ನಾಗಿ ಪರಿವರ್ತಿಸಿದರು.

 

ಇಂದಿನ ಸತ್ಯವೇದ ಭಾಗದಲ್ಲಿ, ಜಕ್ಕಾಯ ಎಂಬ ವ್ಯಕ್ತಿಯ ಕುರಿತು ಧ್ಯಾನಿಸುತ್ತಿದ್ದೇವೆ. ಜಕ್ಕಾಯ ಎಂದ ಕೂಡಲೇ ನಮ್ಮ ನೆನಪಿಗೆ ಬರುವುದು ಒಬ್ಬ ಕುಳ್ಳ ಮನುಷ್ಯ, ತೆರಿಗೆ ವಸೂಲಿಗಾರ ಮತ್ತು ಪಾಪಿಯಾದ ವ್ಯಕ್ತಿ ಎಂಬುದೇ. ಆದರೆ ಈ ಒಬ್ಬ ಮನುಷ್ಯನ ಸಮರ್ಪಣೆ, ಮಾನಸಾಂತರ ಅವರ ಮನೆಗೆ ರಕ್ಷಣೆಯನ್ನು ತಂದಿತು. ಅಬ್ರಹಾಮನೆಂಬ ಮನುಷ್ಯನ ಸಮರ್ಪಣೆ, ಸಂತತಿಯನ್ನು ಸಮೃದ್ಧಿಗೆ ಕರೆದೊಯ್ಯಿತು. ಮೋಶೆಯ ಸಮರ್ಪಣೆಯ ಮೂಲಕ ಐಗುಪ್ತದ ಗುಲಾಮಗಿರಿಯಿಂದ ಲಕ್ಷಾಂತರ ಜನರು ರಕ್ಷಿಸಲ್ಪಟ್ಟರು. ನೋಹನು ನೀತಿವಂತನಾಗಿ ಬದುಕಿದ್ದರಿಂದ, ಅವನ ಇಡೀ ಮನೆಯವರೊಂದಿಗೆ ನಾವೆಯಲ್ಲಿ ಸಂರಕ್ಷಿಸಲ್ಪಟ್ಟನು. ಕೊರ್ನೇಲ್ಯನ ಭಕ್ತಿ, ಪ್ರಾರ್ಥನೆ ಮತ್ತು ದಾನ ಧರ್ಮವು ಅವನ ಇಡೀ ಮನೆಗೆ ರಕ್ಷಣೆಯನ್ನು ತಂದು ಅವರನ್ನು ಮುಕ್ತಗೊಳಿಸಿತು. ಎಲ್ಲಕ್ಕಿಂತ ಹೆಚ್ಚಾಗಿ, ಕೊನೆಯ ಆದಾಮನಾದ ಯೇಸು ಕ್ರಿಸ್ತನ ವಿಧೇಯತೆಯ ಮೂಲಕ, ಅನೇಕರು ನೀತಿವಂತರಾಗುತ್ತಿದ್ದೇವೆ. ಎಲ್ಲಾ ಮನುಷ್ಯರು ರಕ್ಷಿಸಲ್ಪಡಬೇಕು ಎಂಬುದು ಆತನ ಚಿತ್ತವಾಗಿದೆ.

 

ಕ್ರಿಸ್ತನಲ್ಲಿ ಪ್ರಿಯರೇ! "ಒಂದು ಕಾರ್ಯದ ಆರಂಭಕ್ಕಿಂತ ಅದರ ಅಂತ್ಯವು ಲೇಸು" ಎಂದು ಪ್ರಸಂಗಿ 7:8 ರಲ್ಲಿ ನಾವು ಓದುತ್ತೇವೆ. ನೀವು ಮತ್ತು ನಾನು ಆಶೀರ್ವಾದಕ್ಕೆ ಕಾರಣರಾಗಿದ್ದೇವಾ? ಅಥವಾ ಎಡವುವ ಕಲ್ಲುಗಳಾಗಿದ್ದೇವಾ? ಎಂದು ಯೋಚಿಸೋಣ. ಸಂತತಿ ಸಂತತಿಯಾಗಿ ಆಶೀರ್ವಾದಗಳನ್ನು ಕೊಂಡೊಯ್ಯಲು ಒಬ್ಬ ವ್ಯಕ್ತಿಯ ಹೃದಯ ತೆರೆಯಲ್ಪಟ್ಟರೆ ಸಾಕು. ದೇವರು ಅಂತಹ ವ್ಯಕ್ತಿಯನ್ನೇ ಹುಡುಕುತ್ತಲೇ ಇದ್ದಾರೆ. ಇದನ್ನು ಓದುತ್ತಿರುವ ನೀವು ದೇವರು ಹುಡುಕುತ್ತಿರುವ ಆ ವ್ಯಕ್ತಿ ಯಾಕೆ ಆಗಿರಬಾರದು? ನಿಮ್ಮೊಬ್ಬರ ವಿಧೇಯತೆಯು ನಿಮ್ಮ ಕುಟುಂಬದಲ್ಲಿ, ಸಮಾಜದಲ್ಲಿ ದೇಶದಲ್ಲಿ ದೇವರ ಶಕ್ತಿಯು ಬಲವಾಗಿ ಪ್ರಕಟವಾಗಲು ಕಾರಣವಾಗಲಿ! ನೀವು ಅವರ ಕೈಯಲ್ಲಿ ಒಂದು ಸಾಧನವಾಗಿ ಕಾರ್ಯನಿರ್ವಹಿಸಲು ಮುಂದೆ ಬರುತ್ತೀರಾ?

- Mrs. ಜೆಬಕನಿ ಶೇಖರ್

 

ಪ್ರಾರ್ಥನಾ ಅಂಶ:

ಅರ್ಥಪೂರ್ಣ ಕ್ರಿಸ್‌ಮಸ್‌ಗೆ ತನ್ನ ಪಾಲು ನೀಡಲು ನಿರ್ಧರಿಸುವ ಸಮಯದಲ್ಲಿ ಅನೇಕರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al