Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.12.2025 (Kids Special)
Share:

By Village Missionary Movement

Sunday, 07-Dec-2025

ಧೈನಂದಿನ ಧ್ಯಾನ(Kannada) – 07.12.2025 (Kids Special)

 

ಮಾತನಾಡುವ ದೇವರು ಯೇಸು

 

"ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು" - ಯೋಹಾನ 1:9

 

ಒಂದು ಕುಟುಂಬದಲ್ಲಿ ಐದು ಜನ ಮಕ್ಕಳಿದ್ದರು. ಅವರಲ್ಲಿ ಒಬ್ಬ ಹುಡುಗನಿಗೆ ಮಾತ್ರ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ತಾಯಿಗೆ ತುಂಬಾ ವೇದನೆಯಾಗಿತ್ತು. ಅವನು ಬೆಳೆದು ಬೆಳೆದು ದೊಡ್ಡ ಹುಡುಗನಾಗುತ್ತಿದ್ದನು. ಅವನನ್ನು ಎತ್ತಲು, ಅವನಿಗೆ ಆಹಾರ ನೀಡಲು ಈ ರೀತಿ ಅವನಿಗೆ ಸೇವೆ ಮಾಡಲು ಸಾಧ್ಯವಾಗದ ತಾಯಿ, ಒಂದು ದಿನ ಅವನನ್ನು ಬಸ್ಸಿನಲ್ಲಿ ಕರೆದುಕೊಂಡು ಹೋದರು. ಒಂದು ಸ್ಥಳದಲ್ಲಿ ಅವನನ್ನು ಇಳಿಸಿ ಕೂರಿಸಿ ಬಿಟ್ಟು, ಅವನಿಗೆ ಗೊತ್ತಾಗದಂತೆ ಆ ತಾಯಿ ಬಂದುಬಿಟ್ಟರು. ಅವನು "ಅಮ್ಮಾ, ಅಮ್ಮಎಂದು ಕರೆದು ನೋಡಿದನು, ಒಬ್ಬರೂ ಸಹಾಯ ಮಾಡಲು ಬರಲಿಲ್ಲ. ಎರಡು ದಿನಗಳಿಂದ ಒಂದೇ ಸ್ಥಳದಲ್ಲಿ ಕುಳಿತಿದ್ದ ಅವನನ್ನು ಕಸ ಸಂಗ್ರಹಿಸುವ ಒಬ್ಬ ವ್ಯಕ್ತಿ ನೋಡಿ ಅವನ ಬಳಿ ವಿಚಾರಿಸಿದರು. ನಿನ್ನ ಹೆತ್ತವರು ನಿನ್ನನ್ನು ತಿರಸ್ಕರಿಸಿದರೂ, ಯೇಸು ನಿನ್ನನ್ನು ಸೇರಿಸಿಕೊಳ್ಳುತ್ತಾರೆ. ಬಾ, ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಅವನನ್ನು ಕರೆದುಕೊಂಡು ಹೋದರು.

 

ಬಡತನ ಮತ್ತು ಗುಡಿಸಲು ಮನೆಯಾಗಿದ್ದರೂ ಇಬ್ಬರೂ ಸಂತೋಷವಾಗಿದ್ದರು. ಆ ಅಯ್ಯನವರ ಮೂಲಕ ಯೇಸುವಿನ ಪ್ರೀತಿಯನ್ನು ಚೆನ್ನಾಗಿ ತಿಳಿದುಕೊಂಡನು. ಅವನಿಗೆ ಬೈಬಲ್ ಓದಲು ಮತ್ತು ಬರೆಯಲು ಕಲಿಸಿದರು. ಒಂದು ದಿನ, ಆ ಅಯ್ಯನವರು ಇದ್ದಕ್ಕಿದ್ದಂತೆ ಸತ್ತು ಹೋದರು. ಕುಂಟನಾಗಿದ್ದ ಆ ಅಣ್ಣನಿಗೆ ಅಳು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಓ.. ಎಂದು ಕಿರುಚಾಡಿ ಅತ್ತನು. ಯೇಸುವೇ, ನನಗಾಗಿ ಇದ್ದ ಇವರೂ ಹೊರಟು ಹೋದರೇ! ಎಂದು ಗೋಳಾಡಿದನು. Home ಇಟ್ಟಿದ್ದ ಒಬ್ಬ ವ್ಯಕ್ತಿಯು ಅಣ್ಣನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಅವರಿಗೆ ಬೇಕಾದ ಎಲ್ಲವನ್ನೂ ತೆಗೆದುಕೊಟ್ಟರು. ಯೇಸು ನನಗಾಗಿ ಎಲ್ಲವನ್ನೂ ನೋಡಿಕೊಂಡರು. ನಾನು ಅವರಿಗಾಗಿ ಏನಾದರೂ ಮಾಡಬೇಕಲ್ಲಾ ಎಂದು ಆಸೆ ಪಟ್ಟರು. ಆ Uncle ನಿನಗೆ ಬೇರೆ ಇನ್ನೇನು ಬೇಕು ಎಂದು ಕೇಳಿದರು. ಕೂಡಲೇ ನನಗೆ ಪೆನ್ನು ಮತ್ತು ನೋಟ್‌ಬುಕ್ ಬೇಕು ಎಂದು ಹೇಳಿದರು. ತಿಂಡಿಗಳನ್ನು ಕೇಳುತ್ತಾನೆಂದು ನೋಡಿದರೆ ಪೆನ್ನು ಮತ್ತು ನೋಟ್‌ಬುಕ್ ಕೇಳುತ್ತಿದ್ದಾನಲ್ಲಾ ಅಂದುಕೊಳ್ಳುತ್ತಾ ಅದನ್ನೂ ತೆಗೆದುಕೊಟ್ಟರು.

 

ಪ್ರತಿದಿನ ಒಂದು ವಾಕ್ಯವನ್ನು ಒಂದು ತುಂಡು ಪೇಪರ್ ನಲ್ಲಿ ಬರೆದು, ಅದನ್ನು ಸುತ್ತಿ ಕೆಳಗೆ ಎಸೆಯುತ್ತಿದ್ದರು. ಒಂದು ದಿನ, ಆ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಒಂದು ವ್ಯಕ್ತಿಯ ತಲೆಯ ಮೇಲೆ ಅದು ಬಿತ್ತು. ಆತನು ಕೋಪದಿಂದ ನಾನೇ ಜೀವನದಲ್ಲಿ ಬೇಸತ್ತು, ಕೆಲಸವಿಲ್ಲದೆ, ಆದಾಯವಿಲ್ಲದೆ ಸತ್ತು ಹೋಗೋಣ ಎಂದು ಭಾವಿಸಿದರೆ, ಯಾರು ಈ ಪೇಪರ್ ಅನ್ನು ನನ್ನ ಮೇಲೆ ಹಾಕಿದ್ದು ಎಂದು ತೆರೆದು ನೋಡಿದಾಗ ... ತನ್ನ ಕೋಪದ ಮುಖವು ಸಂತೋಷದ ಮುಖವಾಗಿ ಬದಲಾಯಿತು. ಭಯಪಡಬೇಡ! ನಾನೇ ನಿನ್ನೊಂದಿಗಿದ್ದೇನೆ ಎಂಬ ಮಾತು ಅವರೊಂದಿಗೆ ಮಾತನಾಡಿತು. ತನ್ನ ಹಾದಿಯನ್ನು ಬದಲಾಯಿಸಿಕೊಂಡು ಆಲಯಕ್ಕೆ ಹೋದರು. ಅವರ ಜೀವನ ಬದಲಾಯಿತು.

 

ಪುಟಾಣಿಗಳೇ! ಯೇಸಪ್ಪ ಯಾರ ಮೂಲಕವಾದರೂ ಒಬ್ಬ ಮನುಷ್ಯನನ್ನು ರಕ್ಷಿಸುತ್ತಾರೆ. ಈ ಕಥೆಯಲ್ಲಿ ಒಂದು ಎಸೆಯಲ್ಪಟ್ಟ ಪೇಪರ್ ನಲ್ಲಿ ಇದ್ದ ಜೀವವುಳ್ಳ ವಾಕ್ಯವು ಒಬ್ಬ ಮನುಷ್ಯನನ್ನು ಮರಣದಿಂದ ತಪ್ಪಿಸಿತು. ನಮ್ಮ ಯೇಸು ನಿಜವಾಗಿಯೂ ಮಾತನಾಡುವ ದೇವರು ತಾನೇ.

- Sis.ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al