By Village Missionary Movement
Saturday, 06-Dec-2025ಧೈನಂದಿನ ಧ್ಯಾನ(Kannada) – 06.12.2025
ಬೆಂಕಿ
"ನಾಲಿಗೆಯು ಬೆಂಕಿಯೂ ದುಷ್ಟಲೋಕವೂ ಆಗಿದೆ..." - ಯಾಕೋಬ 3:6
ನರವಿಲ್ಲದ ನಾಲಿಗೆ ಮಾಡುವ ಕ್ರಿಯೆಗಳನ್ನು ಕಂಡ ಹಲ್ಲುಗಳು ನಾಲಿಗೆಯನ್ನು ನೋಡಿ, ನಾವು ಒಟ್ಟು 32 ಜನ. ಎಲ್ಲರೂ ಒಟ್ಟಾಗಿ ನಿನ್ನನ್ನು ಹಿಡಿದರೆ, ನೀನು ಖಾಲಿಯಾಗುತ್ತೀಯ ಎಂದು ಹೇಳಿದವಂತೆ. ತಕ್ಷಣ, ನಾಲಿಗೆ ಸ್ವಲ್ಪವೂ ಯೋಚಿಸದೆ, ನಗುತ್ತಾ, ನಾನು ಒಂಟಿಯೇ. ಆದರೆ ನಾನು ಒಂದು ಮಾತು ಬದಲಾಯಿಸಿ ಮಾತಾಡಿದರೆ ಸಾಕು, ನೀವು 32 ಜನವೂ ಖಾಲಿಯಾಗುತ್ತೀರ ಎಂದು ಹೇಳಿತಂತೆ. ಅನೇಕ ಗೊಂದಲಗಳು ಮತ್ತು ಜಗಳಗಳಿಗೆ ಕಾರಣ ನಮ್ಮ ನಾಲಿಗೆಯ ಮಾತುಗಳೇ.
ಹೌದು, ನಮ್ಮ ಮಾತುಗಳಿಂದ ಒಬ್ಬರನ್ನು ಪ್ರೋತ್ಸಾಹಿಸಿ ಅವರು ಸತತವಾಗಿ ಮುಂದುವರೆಯುವಂತೆ ಮಾಡಲೂ ಸಾಧ್ಯ. ಅದೇ ಮಾತುಗಳಿಂದ ಚೆನ್ನಾಗಿ ಕೆಲಸ ಮಾಡುತ್ತಿರುವ ಒಬ್ಬರನ್ನು ಗಾಯಗೊಳಿಸಿ, ಯಾವ ಕೆಲಸವನ್ನು ಮಾಡದ ಹಾಗೆ ಆಯಾಸಗೊಳಿಸಲೂ ಸಾಧ್ಯ. ಅಷ್ಟೆಲ್ಲ ಯಾಕೆ, ಎಲ್ಲವನ್ನು ಬಿಟ್ಟು ಓಡಿ ಹೋಗುವಂತೆ ಮಾಡಲೂ ಸಾಧ್ಯ. ಅಗತ್ಯವಿಲ್ಲದ ವ್ಯರ್ಥವಾದ ಮಾತುಗಳನ್ನಾಡಿ ನಮ್ಮ ಸಮಯವನ್ನು ಹಾಳು ಮಾಡಲೂ ಸಾಧ್ಯ. ಹೆಮ್ಮೆಯ ಮಾತುಗಳನ್ನು ಆಡಿ ನಮ್ಮನ್ನು ದೇವರಿಗೆ ವಿರೋಧವಾಗಿ ಮಾರ್ಪಡಿಸಲೂ ಸಾಧ್ಯ. ಈ ನಾಲಿಗೆ ಇತರರಿಗೆ ದೇವರ ಪ್ರೀತಿಯನ್ನು ಹೇಳಲೂ ಸಾಧ್ಯ. ನಮ್ಮ ಮಾತುಗಳು ಹೇಗಿವೆ ಎಂಬುದನ್ನು ನಾವು ಪರಿಶೀಲಿಸಿ ನೋಡಬೇಕು. ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು. ನಮ್ಮ ಹೃದಯವು ಅನಗತ್ಯ ಕಹಿ ಮತ್ತು ಹೆಮ್ಮೆಯಿಂದ ತುಂಬಿದ್ದರೆ, ನಮ್ಮ ನಾಲಿಗೆಯೂ ಅದನ್ನೇ ಮಾತನಾಡುತ್ತದೆ. ನಮ್ಮ ಇಡೀ ದೇಹವು ಕೆಟ್ಟುಹೋಗುತ್ತದೆ.
ನಾಲಿಗೆಯು ಬೆಂಕಿಯೇ, ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ಎಂದು ಸತ್ಯವೇದವು ಹೇಳುತ್ತಿದೆ. ನಮ್ಮ ನಾಲಿಗೆಯ ಮಾತುಗಳು ನಮ್ಮ ದೇಹವನ್ನು ಮತ್ತು ಇತರರ ಜೀವನವನ್ನು ಹಾಳು ಮಾಡಿಬಿಡುತ್ತದೆ, ನರಕದ ಬೆಂಕಿಗೆ ತಳ್ಳಿಬಿಡುತ್ತದೆ. ನಮ್ಮ ಶರೀರದ ಚಿಕ್ಕ ಅಂಗವಾದ ನಾಲಿಗೆಯ ಕುರಿತು ಎಚ್ಚರಿಕೆಯಿಂದ ಇರಬೇಕು. ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಾತುಗಳು ಕೃಪೆಯಿಂದ ತುಂಬಿದ್ದವು. ಆ ಕಾಲದ ಜನರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಅನೇಕರು ಆತನನ್ನು ಹುಡುಕಲು ಬಂದರು, ಬಿಡುಗಡೆ ಹೊಂದಿದರು ಮತ್ತು ದೇವರನ್ನು ಮಹಿಮೆಪಡಿಸಿದರು.
ಇದನ್ನು ಓದುತ್ತಿರುವ ಪ್ರಿಯರೇ, ದೇವರ ಸಹಾಯದಿಂದ ನಮ್ಮ ನಾಲಿಗೆಯನ್ನು ನಿಯಂತ್ರಿಸೋಣ, ಅದನ್ನು ಬುದ್ಧಿವಂತಿಕೆಯಿಂದ ಬಳಸೋಣ ಮತ್ತು ನಮ್ಮ ದೇಹವನ್ನು ನರಕದ ಶಿಕ್ಷೆಯಿಂದ ವಿಮೋಚಿಸಿಕೊಳ್ಳೋಣ. ನಾವು ನಮ್ಮ ಹೃದಯಗಳನ್ನು ಕಾಪಾಡಿಕೊಂಡರೆ, ನಾವು ನಮ್ಮ ನಾಲಿಗೆಗಳನ್ನು ನಿಯಂತ್ರಿಸಬಹುದು. ಜ್ಞಾನಿಯಾದ ಸೊಲೊಮೋನನು "ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು" ಎಂದು. ನಾಲಿಗೆಯನ್ನು ಅಡಗಿಸೋಣ. ಜೀವವನ್ನು ಕಾಪಾಡಿಕೊಳ್ಳೋಣ.
- Mrs. ಅನ್ಬು ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಕ್ರಿಸ್‌ಮಸ್ ಸುವಾರ್ತೆ ಮಹೋತ್ಸವ ಕಾರ್ಯಕ್ರಮವನ್ನು ಬೆಂಬಲಿಸುವವರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482