By Village Missionary Movement
Friday, 05-Dec-2025ಧೈನಂದಿನ ಧ್ಯಾನ(Kannada) – 05.12.2025
ಉತ್ತರಿಸುವ ದೇವರು
"...ಪ್ರಾರ್ಥಿಸಿಕೊಂಡಾಗೆಲ್ಲಾ ಯೆಹೋವನು ಅವರಿಗೆ ಸದುತ್ತರವನ್ನು ದಯಪಾಲಿಸುತ್ತಿದ್ದನು." - ಕೀರ್ತನೆ 99:6
ಹಲವು ವರ್ಷಗಳ ಹಿಂದೆ, ಒಬ್ಬ ಹಿರಿಯ ಬೋಧಕರು ಚೆನ್ನೈ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ದಿನಗಳಲ್ಲಿ, ತೀವ್ರ ಬಡತನವಿತ್ತು, ತಿನ್ನಲು ಏನೂ ಇಲ್ಲದ ಪರಿಸ್ಥಿತಿ. ದೈನಂದಿನ ಅಗತ್ಯಗಳು ಸಹ ಪೂರೈಸಲ್ಪಡದೆ ಬಹಳ ಕಷ್ಟಪಟ್ಟರು. ಒಂದು ದಿನ, ತನ್ನ ಜೊತೆ ಸೇವಕರೊಂದಿಗೆ ಸೇರಿ ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸ ಮಾಡಿ ದೇವರು ತನ್ನ ಪರಿಸ್ಥಿತಿಯನ್ನು ಬದಲಾಯಿಸುವಂತೆ ಪ್ರಾರ್ಥಿಸಿದರು. ಪ್ರಾರ್ಥಿಸುವಾಗ “ಯೇಸುವೇ, ಎಲೀಯನೆಂಬ ದೇವಮನುಷ್ಯನ ಅಗತ್ಯವನ್ನು ಕಾಗೆಯನ್ನು ಕಳುಹಿಸಿ ಪೂರೈಸಿದಿರಲ್ಲಾ, ನಮ್ಮ ಅಗತ್ಯಗಳು ಸಹ ಪೂರೈಸಲ್ಪಡುವಂತೆ ಒಂದು ಕಾಗೆಯನ್ನು ಕಳುಹಿಸಿ” ಎಂದು ಪ್ರಾರ್ಥಿಸಿದರು. ಆ ಸಮಯದಲ್ಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ಕುಡುಕನು ತುಂಬಾ ಕೋಪಗೊಂಡು ಈ ಕ್ರೈಸ್ತರು ಯಾವಾಗಲೂ ಹಲ್ಲೆಲೂಯಾ, ಹಲ್ಲೆಲೂಯಾ ಎಂದು ಕೂಗುತ್ತಾರೆ ಎಂದು ರಸ್ತೆಯಲ್ಲಿ ಸತ್ತು ಬಿದ್ದಿದ್ದ ಕಾಗೆಯನ್ನು ಪ್ರಾರ್ಥನಾ ಕೋಣೆಯೊಳಕ್ಕೆ ಎತ್ತಿ ಬಿಸಾಡಿದನು. ಪ್ರಾರ್ಥಿಸಿದ ನಂತರ, ಸೇವಕರು ಸಹಾಯ ಮಾಡಲು ಕಾಗೆಯನ್ನು ಕಳುಹಿಸಿ ಕರ್ತನೇ ಎಂದು ಪ್ರಾರ್ಥಿಸಿದೆವು. ಆದರೆ ಸತ್ತು ಬಿದ್ದಿರುವ ಕಾಗೆ ಬಂದು ಬಿದ್ದಿದೆಯಲ್ಲಾ ಎಂದು ಭಾವಿಸಿ ಅದನ್ನು ಎತ್ತಿ ಬಿಸಾಡಲು ನೋಡಿದಾಗ, ಅದರ ಬಾಯಲ್ಲಿ ಚಿನ್ನದ ಸರಪಳಿ ನೇತಾಡುತ್ತಿತ್ತು. ಅದನ್ನು ನೋಡಿದಾಗ, ಅವರು ನಮ್ಮ ದೇವರು ಎಷ್ಟು ಒಳ್ಳೆಯವರು, ನಮ್ಮ ಪ್ರಾರ್ಥನೆಗಳನ್ನು ಕೇಳಿ ಉತ್ತರಿಸಿದ್ದಾರೆಂದು ಭಾವಿಸಿ ತುಂಬಾ ಸಂತೋಷಪಟ್ಟರು.
ಅದೇ ರೀತಿ, ಸತ್ಯವೇದದಲ್ಲಿ, ಹಾಗರ್ ಎಂಬ ಮಹಿಳೆ ಮತ್ತು ಅವಳ ಮಗ ಇಷ್ಮಾಯೇಲನನ್ನು ಮುಂಜಾನೆ ಒಂದು ತಿತ್ತಿ ತಣ್ಣೀರು ಮತ್ತು ಸ್ವಲ್ಪ ರೊಟ್ಟಿಗಳೊಂದಿಗೆ ಅರಣ್ಯಕ್ಕೆ ಕಳುಹಿಸಲಾಯಿತು. ಅವರ ಕೈಯಲ್ಲಿದ್ದ ರೊಟ್ಟಿ ಮತ್ತು ನೀರು ಖಾಲಿಯಾಗುತ್ತಿತ್ತು. ಮಗ ನೀರು ಕೇಳುತ್ತಿದ್ದಾನೆ. ಹಸಿವಾಗುತ್ತಿದೆ ಎಂದು ಹೇಳುತ್ತಿದ್ದಾನೆ. ತನ್ನ ಕಣ್ಣುಗಳ ಮುಂದೆ ತನ್ನ ಮಗನ ನೋವನ್ನು ಸಹಿಸಲಾಗದ ತಾಯಿ ದೂರ ಹೋಗಿ ಕುಳಿತು ನನ್ನ ಮಗು ನನ್ನ ಕಣ್ಣುಗಳ ಮುಂದೆ ಸಾಯುವುದನ್ನು ನನ್ನಿಂದ ನೋಡಲು ಸಾಧ್ಯವಿಲ್ಲ ಎಂದು ಅಳುತ್ತಿದ್ದಳು. ಮಗುವಿನ ಶಬ್ದವನ್ನು ದೇವರು ಕೇಳಿದರು. ಹಾಗರಳ ಕಣ್ಣೀರನ್ನು ನೋಡಿದರು. ಆ ಕ್ಷಣದಲ್ಲೇ ನೀರಿನ ಬುಗ್ಗೆಯನ್ನು ತೋರಿಸಿದರು. ಇಬ್ಬರೂ ನೀರು ಕುಡಿದು ಬದುಕುಳಿದರು. ಹೀಗೆ ದೇವರು ಅವರನ್ನು ಆಶೀರ್ವದಿಸಿದರು.
ನನಗೆ ಪ್ರಿಯವಾದವರೇ, ನೀವು ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದೀರಾ, ಯಾರೂ ಇಲ್ಲದ ಪರಿಸ್ಥಿತಿಯಲ್ಲಿ, ಏಕಾಂತತೆಯಲ್ಲಿ ಮತ್ತು ನೋವಿನಲ್ಲಿ, ನಾನು ಇದನ್ನು ಮೀರಿ ಒಂದು ಹೆಜ್ಜೆಯೂ ಸಹ ಇಡಲು ಸಾಧ್ಯವಿಲ್ಲ ಎಂದು ವೇದನೆಯಿಂದ ತವಕಿಸುತ್ತಿದ್ದೀರಾ? ನಿಮ್ಮ ನೋವು ಮತ್ತು ಒಂಟಿತನವನ್ನು ನೋಡುವ ದೇವರು ಇದ್ದಾರೆ. ಮನಗುಂದದಿರಿ. ನಿಮ್ಮ ಕಣ್ಣೀರನ್ನು ಅವರು ಒರೆಸುತ್ತಾರೆ ಮತ್ತು ನೋವನ್ನು ಬದಲಾಯಿಸುತ್ತಾರೆ. ಎಂತಾ ಕಠಿಣ ಪರಿಸ್ಥಿತಿಯಾದರೂ ಬದಲಾಯಿಸಿ ನಿಮಗೊಂದು ಅದ್ಭುತವನ್ನು ಮಾಡುತ್ತಾರೆ.
- Mrs. ವಲರಮತಿ ಭಾಸ್ಕರ್
ಪ್ರಾರ್ಥನಾ ಅಂಶ:
ಕ್ರಿಸ್ಮಸ್ ಸುವಾರ್ತೆ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರನ್ನು ದೇವರು ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482