Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.12.2025
Share:

By Village Missionary Movement

Thursday, 04-Dec-2025

ಧೈನಂದಿನ ಧ್ಯಾನ(Kannada) – 04.12.2025

 

ಜ್ಞಾನವಾಗಿ ವರ್ತಿಸಬೇಕು

 

“ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡು; ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು" - ಜ್ಞಾನೋಕ್ತಿ 26:5

 

ಸ್ವಪ್ನಪುರಿ ಎಂಬ ಹಳ್ಳಿಯಲ್ಲಿ ಒಂದು ದುಷ್ಟ ನಾಗರಹಾವು ವಾಸಿಸುತ್ತಿತ್ತು. ಅದು ಜನರನ್ನು ಕಚ್ಚಿ ಪೀಡಿಸುತ್ತಿತ್ತು. ಆದ್ದರಿಂದ ಗ್ರಾಮಸ್ಥರು ಒಟ್ಟುಗೂಡಿ ಆ ಹಳ್ಳಿಯಲ್ಲಿರುವ ಸಾಧುವಿನ ಬಳಿಗೆ ಹೋಗಿ ಆ ಹಾವಿಗೆ ಬುದ್ಧಿ ಕಲಿಸಿರಿ ಅದು ನಮಗೆ ಬಹಳ ತೊಂದರೆ ಕೊಡುತ್ತಿದೆ ಎಂದು ಹೇಳಿದರು. ಸಾಧು ಆ ನಾಗರಹಾವಿನ ಬಳಿ ನೀನು ಮಾಡುತ್ತಿರುವುದು ಸರಿಯಲ್ಲ, ಇನ್ನು ಮುಂದೆ ನೀನು ಯಾರನ್ನೂ ಕಚ್ಚಬಾರದು ಎಂದು ಹೇಳಿ ಕಳುಹಿಸಿದರು.

 

ಒಂದು ವಾರ ಕಳೆದು, ಹಾವು ತನ್ನ ಮುಖವನ್ನು ಬಾಡಿಸಿಕೊಂಡು ಸಾಧುವಿನ ಬಳಿಗೆ ಬಂತು. ನೀನು ಯಾಕೆ ಹೀಗಿದ್ದೀಯ? ಎಂದು ಸಾಧು ಹಾವನ್ನು ಕೇಳಿದರು. ಈ ಜನರು ನನ್ನ ಮೇಲೆ ಕಲ್ಲೆಸೆಯುತ್ತಿದ್ದಾರೆ. ಮಕ್ಕಳು ನನ್ನ ಬಾಲ ಹಿಡಿದು ಆಕಡೆ ಈಕಡೆ ಗೆ ಎಳೆದಾಡುತ್ತಿದ್ದಾರೆ. ನಾನು ಈಗ ತುಂಬಾ ತೊಂದರೆಯಲ್ಲಿದ್ದೇನೆ ಎಂದು ಹೇಳಿತು. ಅಯ್ಯೋ ಮೂರ್ಖ, ನಿನ್ನನ್ನು ಕಚ್ಚಬೇಡ ಎಂದು ತಾನೇ ಹೇಳಿದೆ ಆದರೆ ಬುಸುಗುಟ್ಟಬೇಡ ಅಂತಾನ ಹೇಳಿದೆ ಅಂದರು ಸಾಧು. ಆ ದಿನದಿಂದ, ಹಾವು ತನ್ನ ಹತ್ತಿರ ಯಾರು ಬಂದರೂ ಬುಸುಗುಟ್ಟಲು ಪ್ರಾರಂಭಿಸಿತು. ಒಬ್ಬನೂ ಹಾವಿನ ಹತ್ತಿರ ಬರಲಿಲ್ಲ. ನಾವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಬೇಕು ಎಂದು ಯೇಸು ಹೇಳುತ್ತಾರೆ.

 

ಜ್ಞಾನೋಕ್ತಿ 26:4,5 ರಲ್ಲಿ ಜ್ಞಾನಿಯಾದ ಸೊಲೊಮೋನನು, "ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡಬೇಡ, ನೀನೂ ಅವನಿಗೆ ಸಮಾನನಾದೀಯೆ" ಎಂದು ಹೇಳುತ್ತಾರೆ. ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡು; ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು". ಇಲ್ಲಿ ನೋಡಿದರೆ ಎರಡೂ ವಚನಗಳು ಬಹುತೇಕ ಒಂದೇ ರೀತಿ ಬರೆಯಲ್ಪಟ್ಟಿವೆ. ಇದರ ಅರ್ಥ, ಅವನು ಮಾತನಾಡುವ ರೀತಿಯಲ್ಲಿ ಪದಗಳನ್ನು ಬಳಸಬೇಡ. ನೀನು ನಿನ್ನ ಮಾತಿನ ಪ್ರಕಾರ ಬುದ್ಧಿ ಹೇಳಬೇಕು. ಆಗ ಮಾತ್ರ ಅವನು ತನ್ನ ತಪ್ಪನ್ನು ಅರಿತುಕೊಳ್ಳಲು ಸಾಧ್ಯ.

 

ನಾವು ರಕ್ಷಣೆ ಹೊಂದದ ಜನರಂತೆ ಪ್ರತ್ಯುತ್ತರ ಕೊಡದೆ, ದೇವರು ನಮಗೆ ಕೊಟ್ಟಿರುವ ಮಾರ್ಗದರ್ಶನದ ಪ್ರಕಾರ ಅವರಿಗೆ ಉತ್ತರಿಸಬೇಕು. ಆಗ ಅವರು ತಮ್ಮ ತಪ್ಪನ್ನು ಅರಿತುಕೊಳ್ಳುತ್ತಾರೆ ಮತ್ತು ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತಾರೆ. ಹಾವು ಕಚ್ಚದ ತಕ್ಷಣ, ಎಲ್ಲರೂ ಅದನ್ನು ತೊಂದರೆಗೊಳಿಸಲು ಪ್ರಾರಂಭಿಸಿದರು. ಆದರೆ ಅದು ಬುಸುಗುಟ್ಟಲು ಪ್ರಾರಂಭಿಸಿದ ತಕ್ಷಣ ಅದನ್ನು ಬಿಟ್ಟು ದೂರ ಹೋದರು. ನಾವು ಸಹ ಯಾವ ಸಮಯದಲ್ಲಿ ಹೇಗೆ ಮಾತನಾಡಬೇಕು ಹೇಗೆ ನಡೆದುಕೊಳ್ಳಬೇಕು ಎಂದು ಅರಿತು ಜ್ಞಾನವಾಗಿ ವರ್ತಿಸೋಣ. ಆತ್ಮಗಳನ್ನು ಸಂಪಾದಿಸಿ ಕೊಳ್ಳೋಣ. ಕರ್ತನು ನಮ್ಮನ್ನು ಆಶೀರ್ವದಿಸಲಿ! ಆಮೆನ್! ಹಲ್ಲೆಲೂಯಾ!

- Rev. S.A. ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ಕ್ರಿಸ್ಮಸ್ ಸುವಾರ್ತೆ ಮಹೋತ್ಸವದ ಮೂಲಕ ಅನೇಕ ಜನರು ಅದ್ಭುತವನ್ನು ಮತ್ತು ದೇವರ ಸ್ಪರ್ಶವನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al