By Village Missionary Movement
Wednesday, 03-Dec-2025ಧೈನಂದಿನ ಧ್ಯಾನ(Kannada) – 03.12.2025
ಕೆಲವು ತಡೆಗಳು ಒಳ್ಳೆಯದಕ್ಕಾಗಿಯೇ
“ಒಡೆಯುವವನು ಅವರ ಮುಂದೆ ಹೊರಟಿದ್ದಾನೆ;..." - ಮೀಕ 2:13
ಒಮ್ಮೆ ಬಹಳ ದುಃಖದಿಂದ ಒಂದು ದಂಪತಿಗಳು ತಮ್ಮ ಮಗಳನ್ನು ಕರೆತಂದುಕೊಂಡು ಪ್ರಾರ್ಥಿಸಲು ನಮ್ಮ ಬಳಿಗೆ ಬಂದರು. ಅವರನ್ನು ನೋಡಿ, ನಿಮ್ಮ ಮಗಳಿಗೆ ಮದುವೆಯನ್ನು ನಿಶ್ಚಯಿಸಿ ಬಿಟ್ಟಿದ್ದೀರಲ್ಲಾ ಏನಾಯಿತು? ಎಂದು ಕೇಳಿದೆವು. ಆಗ ಅವರು ಮಗಳ ಮದುವೆಗಾಗಿ ನಾವು ಇಷ್ಟು ಆಭರಣ ಮತ್ತು ಹಣವನ್ನು ಸೇರಿಸಿಟ್ಟಿದ್ದೇವೆ ನಮ್ಮಿಂದ ಇಷ್ಟೇ ನೀಡಲು ಸಾಧ್ಯ ಎಂದು ಮಾತನಾಡಿ ಮದುವೆ ನಿರ್ಧರಿಸಿದೆವು. ಈಗ, ಅವರು ಇದ್ದಕ್ಕಿದ್ದಂತೆ ನಮಗೆ ಹೆಚ್ಚಿನ ಹಣ ಮತ್ತು ಆಭರಣಗಳು ಬೇಕು, ಇಲ್ಲದಿದ್ದರೆ ನಾವು ಈ ಮದುವೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟರು. ಅಷ್ಟೊಂದು ನೀಡಲು ನಮ್ಮಿಂದ ಸಾಧ್ಯವಿಲ್ಲ. ಮಗಳ ಮದುವೆ ನಿಂತುಹೋಗುತ್ತದೆ ಎಂದು ತೋರುತ್ತಿದೆ. ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಅವರು ಕಳವಳದಿಂದ ಹೇಳಿದರು. ಅದಕ್ಕೆ ನಾವು ಅವರನ್ನು ನೋಡಿ, ಚಿಂತಿಸಬೇಡಿ, ಮದುವೆಗೆ ಮುಂಚೆಯೇ ಇಷ್ಟೊಂದು ಹಣ ಮತ್ತು ಆಭರಣಗಳು ಬೇಕೆಂದು ಒತ್ತಾಯಿಸುತ್ತಿದ್ದಾರಲ್ಲಾ , ಮದುವೆಯ ನಂತರ ಅವರು ನಿಮ್ಮ ಮಗಳನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ? ದೇವರ ಚಿತ್ತವನ್ನು ತಿಳಿಯದೆ ಆ ಮದುವೆಯನ್ನು ಏರ್ಪಡಿಸಿದ್ದರಿಂದ, ತೊಂದರೆಗೆ ಸಿಲುಕದಂತೆ ದೇವರೇ ಅದನ್ನು ತಡೆ ಮಾಡಿದ್ದಾರೆ. ದೇವರ ಚಿತ್ತಕ್ಕೆ ಒಪ್ಪಿಸಿ ಕೊಟ್ಟು ಪ್ರಾರ್ಥಿಸಿ ಅವರನ್ನು ಕಳುಹಿಸಿದೆವು. ಕೆಲವು ತಿಂಗಳುಗಳಲ್ಲಿ, ದೇವರಾದ ಕರ್ತನು ಆ ಮಗಳ ಮದುವೆಯನ್ನು ಬಹಳ ಸುಂದರವಾಗಿ ನಡೆಸಿಕೊಟ್ಟರು.
ಫಿಲಿಷ್ಟಿಯರು ಮತ್ತು ಇಸ್ರಾಯೇಲ್ಯರ ನಡುವೆ ಯುದ್ಧ ನಡೆಯುತ್ತಿದ್ದ ದಿನಗಳಲ್ಲಿ, ದಾವೀದನು ಸಹ ಯುದ್ಧಕ್ಕೆ ಹೊರಟಿದ್ದರು. ಆದರೆ ಆಕೀಷನು ದಾವೀದನ ಬಳಿ ನೀನು ನನ್ನ ದೃಷ್ಟಿಯಲ್ಲಿ ದೇವರ ದೂತನಂತೆ ಪ್ರಿಯನು. ಆದರೂ ಇವನು ನಮ್ಮೊಂದಿಗೆ ಯುದ್ಧಕ್ಕೆ ಬರಬಾರದು ಎಂದು ಹೇಳುತ್ತಾರೆ. ಹಾಗೆಯೇ ದಾವೀದನು ಯುದ್ಧಕ್ಕೆ ಹೋಗಲಿಲ್ಲ. ದಾವೀದನು ಯುದ್ಧಕ್ಕೆ ಹೋಗಿದ್ದರೆ, ಚಿಕ್ಲಾಗಿನಲ್ಲಿ ಕಳೆದುಕೊಂಡ ಯಾವುದನ್ನೂ ಸರಿಯಾದ ಸಮಯದಲ್ಲಿ ಮರಳಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ, ದೇವರೇ ಸ್ವತಃ ದಾವೀದನನ್ನು ಯುದ್ಧಕ್ಕೆ ಹೋಗದಂತೆ ತಡೆದರು.
ಕೆಲವೊಮ್ಮೆ, ಕೆಲವು ವಿಷಯಗಳು ತಡೆಯಲ್ಪಡುತ್ತವೆ. ಅಂದರೆ, ಮದುವೆ ಕಾರ್ಯ, ಕೆಲಸದ ಕಾರ್ಯ ಹೀಗೆ ಕೆಲವು ವಿಷಯಗಳಿಗಾಗಿ ನಮ್ಮ ಪ್ರಯತ್ನಗಳು ತಡೆಯಲ್ಪಡುತ್ತವೆ. ಕೆಲವೊಮ್ಮೆ ಸೈತಾನನು ಅದನ್ನು ತಡೆಯುತ್ತಾನೆ. ಕೆಲವೊಮ್ಮೆ ಕರ್ತನು ಅದನ್ನು ತಡೆಯುತ್ತಾರೆ. ಈ ಎರಡರ ನಡುವಿನ ವ್ಯತ್ಯಾಸವನ್ನು ನೀವು ತಿಳಿದುಕೊಳ್ಳಬೇಕು. ದೇವರ ಚಿತ್ತವಿಲ್ಲದೆ ಕಾರ್ಯಗಳನ್ನು ನಡೆಸಿ, ನಾವು ಈ ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳಬಾರದು ಎಂದು ಸ್ವತಃ ದೇವರೇ ಆ ವಿಷಯವನ್ನು ತಡೆದು ನಿಲ್ಲಿಸಿ ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಾರೆ. ನಿಮ್ಮ ಜೀವನದಲ್ಲಿಯೂ ಸಹ ದೇವರ ಚಿತ್ತ ನೆರವೇರಲು ನಿಮ್ಮನ್ನು ಒಪ್ಪಿಸಿಕೊಡಿ. ಕರ್ತನಾದ ದೇವರು ನಿಮ್ಮನ್ನು ಅದ್ಭುತವಾಗಿ ನಡೆಸುತ್ತಾರೆ.
- Bro. ಅರುಣ್ ಅಯ್ಯಪ್ಪನ್
ಪ್ರಾರ್ಥನಾ ಅಂಶ:
ಕ್ರಿಸ್ಮಸ್ ಸುವಾರ್ತೆ ಮಹೋತ್ಸವ ಕಾರ್ಯಕ್ರಮದ ಮೂಲಕ ಅನೇಕರು ಕರ್ತನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482