Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.12.2025
Share:

By Village Missionary Movement

Tuesday, 02-Dec-2025

ಧೈನಂದಿನ ಧ್ಯಾನ(Kannada) – 02.12.2025

 

ಆರೋಗ್ಯದಾಯಕನಾದ ಕರ್ತನು

 

“…ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನು" - ವಿಮೋಚನ 15:26

 

ನಾನು ಎಲ್‌ಕೆಜಿಗೆ ಸೇರಿದ ಒಂದು ವಾರದಲ್ಲಿ, ಶಾಲೆಯಲ್ಲಿ ಆಟವಾಡುತ್ತಿರುವಾಗ ಕೆಳಗೆ ಬಿದ್ದುಬಿಟ್ಟೆ. ನನ್ನ ತಲೆಗೆ ಪೆಟ್ಟು ಬಿದ್ದದರಿಂದ ವೈದ್ಯರು ಹೊಲಿಗೆ ಹಾಕಿದರು. ನಂತರ ಒಂದು ದಿನ ನಾನು ಮನೆಯಲ್ಲಿ ಆಟವಾಡುತ್ತಿದ್ದಾಗ, ನನಗೆ fits ಬಂತು ಬಿಟ್ಟಿತು. ನನ್ನ ಹೆತ್ತವರು ವೈದ್ಯರ ಬಳಿಗೆ ಕರೆದೊಯ್ದರು. ನಾನು ಒಂಭತ್ತು ವರ್ಷಗಳ ಕಾಲ ಔಷಧಿ ತೆಗೆದುಕೊಂಡೆ. ನನ್ನ ಆರೋಗ್ಯಕ್ಕಾಗಿ ನಾನು ಹಂಬಲಿಸುತ್ತಿದ್ದೆ. ಒಂದು ದಿನ ನಾನು ಏಳನೇ ತರಗತಿಯಲ್ಲಿದ್ದಾಗ, ನನಗೆ ಇದ್ದಕ್ಕಿದ್ದಂತೆ fits ಬಂದು ನನ್ನ ಬಲಗೈ ಚಲಿಸಲು ನಿಂತು ಹೋಗಿ ಕೈ ಮರಗಟ್ಟಿತು. ನಾನು ಯೇಸಪ್ಪನ ಬಳಿ ನನಗೆ ಸಹಾಯ ಮಾಡಿ ಪುನಃ ಆ ಕೈಯಲ್ಲಿ ಚಲನೆ ಉಂಟಾಗಲಿ ಎಂದು ಪ್ರಾರ್ಥಿಸಿ ಬಿಟ್ಟು ಮಲಗಿಕೊಂಡೆ. ಸ್ವಲ್ಪ ಸಮಯದ ನಂತರ, ನಾನು ಎದ್ದು ನನ್ನ ಬಲಗೈಯನ್ನು ಆಡಿಸಿ ನೋಡಿದೆ, ಆ ಕೈಯಲ್ಲಿ ಚಲನೆ ಉಂಟಾಗಿತ್ತು. ಈ ವಿಷಯ ಮನೆಯಲ್ಲಿರುವ ನನ್ನ ತಾಯಿ ತಂದೆ ನನ್ನ ಮೂವರು ಸಹೋದರರು ಯಾರಿಗೂ ಗೊತ್ತಿಲ್ಲ. ಇದನ್ನು ದೇವರ ನಾಮ ಮಹಿಮೆಗಾಗಿ ಸಾಕ್ಷಿಯಾಗಿ ಹಂಚಿಕೊಳ್ಳುತ್ತಿದ್ದೇನೆ. ಆ ದಿನದಿಂದ ಇಂದಿನವರೆಗೂ, ನನಗೆ ಎಂದಿಗೂ fits ಬಂದಿಲ್ಲ. ಯೇಸು ನನ್ನ ಪ್ರಾರ್ಥನೆಯನ್ನು ಕೇಳಿ ನನ್ನನ್ನು ಗುಣಪಡಿಸಿದರು. ದೇವರಿಗೇ ಮಹಿಮೆ!

 

ಲೂಕ 8:43-48 ರವರೆಗೂ ಇರುವ ವಚನಗಳಲ್ಲಿ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಿದ್ದ ಸ್ತ್ರೀಯ ಬಗ್ಗೆ ಬರೆಯಲ್ಪಟ್ಟಿದೆ. ಅವಳು ಅನೇಕ ವೈದ್ಯರನ್ನು ನೋಡಿ ಅನೇಕ ಔಷಧಿಗಳನ್ನು ತೆಗೆದುಕೊಂಡರೂ, ಅವಳಿಗೆ ಗುಣವಾಗಲಿಲ್ಲ. ತನ್ನ ಎಲ್ಲಾ ಆಸ್ತಿಯನ್ನು ಖರ್ಚು ಮಾಡಿಬಿಟ್ಟಳು, ಚಿಕಿತ್ಸೆ ಕೈಬಿಟ್ಟಿತು. ಒಬ್ಬ ಮನುಷ್ಯನಿಂದಲೂ ಅವಳನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ. ಅವಳು ಯೇಸುವಿನ ಬಗ್ಗೆ ಕೇಳಲ್ಪಟ್ಟು ಅವರು ಮಾಡಿದ ಅದ್ಭುತಗಳು, ರೋಗಿಗಳನ್ನು ಗುಣಪಡಿಸಿದ ರೀತಿಯನ್ನು ಕೇಳಿದಾಗ ಯೇಸುವನ್ನು ನಂಬಿದಳು. ಮತ್ತಾಯ 9:21 ರಲ್ಲಿ "ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು" ಎಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿದಳು. ಅವಳು ನಿರ್ಧರಿಸಿದ ಹಾಗೆಯೇ ಯೇಸುವಿನ ವಸ್ತ್ರವನ್ನು ಮುಟ್ಟಿ ಸ್ವಸ್ಥತೆಯನ್ನು ಪಡೆದುಕೊಂಡಳು. 

 

ನನಗೆ ಪ್ರಿಯವಾದವರೇ, ಯೇಸು ಕ್ರಿಸ್ತನು ನಮಗಾಗಿ ಶಿಲುಬೆಯ ಮೇಲೆ ತನ್ನ ರಕ್ತವನ್ನು ಸುರಿಸಿದರು ಮತ್ತು ನಮ್ಮ ರೋಗಗಳನ್ನು ತನ್ನ ಮೇಲೆ ಹೊತ್ತುಕೊಂಡರು. ಅವರು ತನ್ನ ಸೇವೆಯ ದಿನಗಳಲ್ಲಿ, ತನ್ನ ಬಳಿಗೆ ಬಂದವರನ್ನು ಗುಣಪಡಿಸಿದರು. 12 ವರ್ಷಗಳಿಂದ ರಕ್ತಸ್ರಾವವಿದ್ದ ಸ್ತ್ರೀಯನ್ನು ಗುಣಪಡಿಸಿದ ದೇವರು ನಿಮಗೂ ಸ್ವಸ್ಥತೆಯನ್ನು ಕೊಡುತ್ತಾರೆ. ನಾವು ಆತನನ್ನು ನೋಡಿ ನಂಬಿಕೆಯಿಂದ ಪ್ರಾರ್ಥಿಸೋಣ. "ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು" (ಮತ್ತಾ. 9:22). "ನಂಬಿದವಳಾದ ನೀನು ಧನ್ಯಳೇ" (ಲೂಕ 1:45). "ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ. (1 ಯೋಹಾನ 5:4). ಯೇಸುವೇ, ನೀವು ಮಾತ್ರವೇ ನನ್ನನ್ನು ಗುಣಪಡಿಸಲು ಸಾಧ್ಯ ಎಂದು ನಂಬೋಣ. ಯೇಸು ಖಂಡಿತವಾಗಿಯೂ ಸ್ವಸ್ಥತೆಯನ್ನು ನೀಡುತ್ತಾರೆ. ಆಮೆನ್.

- Sis. ಮೀರಾ

 

ಪ್ರಾರ್ಥನಾ ಅಂಶ:

ಕ್ರಿಸ್‌ಮಸ್ ಸುವಾರ್ತೆ ಮಹೋತ್ಸವ ಕಾರ್ಯಕ್ರಮವನ್ನು ಕರ್ತನನ್ನು ಅರಿಯದ ಅನೇಕರು ನೋಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice