By Village Missionary Movement
Sunday, 30-Nov-2025ಧೈನಂದಿನ ಧ್ಯಾನ(Kannada) – 30.11.2025
ನಮಗಾಗಿ ಚಿಂತಿಸುವ ದೇವರು
"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ." - 1 ಪೇತ್ರ 5:7
ಎಲ್ಲೆಡೆ ಕೊಳಗಳು ಮತ್ತು ಕಣ್ಮನ ಸೆಳೆಯುವ ಮೆಣಸಿನಕಾಯಿ ಮತ್ತು ಹತ್ತಿ ತೋಟಗಳನ್ನು ಹೊಂದಿರುವ ಹಳ್ಳಿಯೇ ಈ ಗಣೇಶನ್ ಅಣ್ಣನ ಹಳ್ಳಿ. ಈ ಅಣ್ಣನಿಗೆ ಒಬ್ಬ ಅಣ್ಣ, ಒಬ್ಬ ತಮ್ಮ ಮತ್ತು ಒಬ್ಬ ತಂಗಿ ಇದ್ದಾರೆ. ಆದರೆ ಅವರೆಲ್ಲರಿಗಿಂತ ಹೆಚ್ಚಾಗಿ, ಈ ಗಣೇಶನ್ ಅಣ್ಣ ಮಾತ್ರ ಭಯಂಕರ ಭಕ್ತಿ,ಯಾಗಿದ್ದರು. ಈ ಅಣ್ಣನ ಗ್ರಾಮದಲ್ಲಿ ಯಾರಾದರೂ ಯೇಸಪ್ಪನ ಬಗ್ಗೆ ಹೇಳಲು ಹೋದರೆ, ಅವರನ್ನು ಊರು ಬಿಟ್ಟು ಓಡಿಸುತ್ತಿದ್ದರು.
ಶಾಲಾ ಶಿಕ್ಷಣವನ್ನು ಮುಗಿಸಿ ಕಾಲೇಜಿಗೆ ಹೋಗಿದ್ದ ಗಣೇಶನ್ ಅಣ್ಣನಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಉಂಟಾದದ್ದರಿಂದ, ಇವರ ತಂದೆ ತಾಯಿ ಆಸ್ಪತ್ರೆಗೆ ಕರೆದೊಯ್ದರು. ಇವರನ್ನು ಪರೀಕ್ಷಿಸಿದ ವೈದ್ಯರು ಇವರ ಹೃದಯದಲ್ಲಿ ದೊಡ್ಡ ರಂಧ್ರವಿದೆ ಇವರನ್ನು ನಮ್ಮಿಂದ ಉಳಿಸಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟರು. ಪ್ರತಿ ರಾತ್ರಿ, ಸಾಯುವ ಭಯ ಅವರನ್ನು ಪೀಡಿಸಿತು. ನನ್ನನ್ನು ಗುಣಪಡಿಸಲು ಈ ಜಗತ್ತಿನಲ್ಲಿ ಯಾರೂ ಇಲ್ಲ ಎಂದು ಅಳುತ್ತಾ ದುಃಖಿಸಿದರು. ಆ ಸಮಯದಲ್ಲಿ, ಅವರ ಹಳ್ಳಿಗೆ ಬಂದಿದ್ದ ಒಬ್ಬ ಸೇವಕರು ಯೇಸು ಗುಣಪಡಿಸುತ್ತಾರೆ ಎಂದು ಹೇಳಿದ ಮಾತುಗಳು ನೆನಪಾದವು. ತಕ್ಷಣ ಆಲಯಕ್ಕೆ ಹೋಗಿ ಯೇಸುವೇ, ನನಗೆ ಜೀವ ಉಳಿಸಿ ಎಂದು ಅತ್ತರು. ಆಲಯಕ್ಕೆ ಹೋದ ಒಂದೆರಡು ವಾರಗಳಲ್ಲಿ, ಅವರ ಹೃದಯದಲ್ಲಿ ಒಂದು ದೊಡ್ಡ ಸಂತೋಷ. ಇವರನ್ನು ಪರೀಕ್ಷಿಸಿದ್ದ ವೈದ್ಯರ ಬಳಿಗೆ ಹೋಗಿ ಪುನಃ ಪರೀಕ್ಷಿಸಿ ನೋಡಿದಾಗ, ರಂಧ್ರದ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯರು ಹೇಳಿಬಿಟ್ಟರು. ಯೇಸು ನನ್ನನ್ನು ಗುಣಪಡಿಸಿಬಿಟ್ಟರೆಂದು ಸಂತೋಷದಿಂದ ಕುಣಿದಾಡಿದರು.
ಕೆಲವು ದಿನಗಳ ನಂತರ, ಅವರಿಗೆ ಒಂದು ಅನುಮಾನ ಬಂತು. ಎಲ್ಲಾ ದೇವರುಗಳನ್ನು ಪೂಜಿಸಿದೆವು, ಮತ್ತು ಹತ್ತರಲ್ಲಿ ಹನ್ನೊಂದಾಗಿ ಈ ಯೇಸುಸ್ವಾಮಿಯನ್ನೂ ಪೂಜಿಸಿದೆವು. ಯಾವ ದೇವರು ನನ್ನನ್ನು ಗುಣಪಡಿಸಿದ್ದು? ಇಂತಹ ಗೊಂದಲದಲ್ಲಿ ಮಲಗಿದ್ದಾಗ, ಇವರು ಮಲಗಿದ್ದ ಇಡೀ ಕೋಣೆಯನ್ನು ಭಯಾನಕ ಬೆಳಕು ತುಂಬಿತು. ಯೇಸಪ್ಪ ಅಲ್ಲಿ ನಿಂತು ಅಳುತ್ತಿದ್ದರು. ಇವರೇ ಯೇಸು ಎಂದು ತಿಳಿಯದ ಆ ಗಣೇಶನ್ ಅಣ್ಣ, ಯಾರು ನೀವು ಯಾಕೆ ಅಳುತ್ತಿದ್ದೀರ ಎಂದು ಕೇಳಿದರು. ಅದಕ್ಕೆ ಯೇಸು, "ನಿನಗೆ ಆರೋಗ್ಯ ನೀಡಿದ ಯೇಸು" ನಾನೇ ಎಂದು ಹೇಳಿದರು. ತಕ್ಷಣ ಆ ಅಣ್ಣ ಅಳಲು ಪ್ರಾರಂಭಿಸಿದರು. ಯೇಸಪ್ಪ ಅವರ ಬಳಿ, ನನ್ನ ಬಗ್ಗೆ ತಿಳಿಯದ ಇನ್ನೂ ಅನೇಕ ಜನರಿದ್ದಾರೆ ಅವರಿಗೆಲ್ಲಾ ನನ್ನ ಬಗ್ಗೆ ಹೇಳುತ್ತೀಯಾ ಎಂದು ಹೇಳಿ ಕಣ್ಮರೆಯಾದರು. ಆ ದಿನದಿಂದ ತನಗೆ ಜೀವ ನೀಡಿದ ಯೇಸುವಿನ ಬಗ್ಗೆ ಊರು ಊರಾಗಿ ಹೇಳಲು ಪ್ರಾರಂಭಿಸಿದರು. ಗಣೇಶನ್ ಅಣ್ಣನ ಮೂಲಕ ಪ್ರಾರಂಭವಾದದ್ದೇ ಈ ವಿಲೇಜ್ ಮಿಷನರಿ ಚಳುವಳಿ.
ಪ್ರೀತಿಯ ತಮ್ಮ, ತಂಗಿ! ಆ ಗಣೇಶನ್ ಅಣ್ಣನಿಗೆ ಜೀವ ನೀಡಿದ ಯೇಸಪ್ಪ ಇಂದು ನಿನ್ನನ್ನೂ ಹುಡುಕಿಕೊಂಡು ಬಂದಿದ್ದಾರೆ. ನಿನ್ನ ಸಮಸ್ಯೆ ಏನೇ ಆಗಿದ್ದರೂ, ಯೇಸುವಿನ ಬಳಿ ಹೇಳು, ಯೇಸು ನಿನಗೆ ಅದ್ಭುತ ಮಾಡುತ್ತಾರೆ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482