Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.06.2021
Share:

By Village Missionary Movement

Tuesday, 08-Jun-2021

ಧೈನಂದಿನ ಧ್ಯಾನ(Kannada) – 08.06.2021

 

ನಿನ್ನ ಬಳಿ ಇರುವುದನ್ನು ಉಪಯೋಗಿಸು

 

"...ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ;..." - ಮತ್ತಾಯ 25:21

 

ಒಂದು ದೇಶದಲ್ಲಿನ ರಾಜನಿಗೆ ಒಂದು ಆಸೆ ಬಂತು. ನೆರೆಯ ದೇಶದ ರಾಜರು ಮತ್ತು ಆಸ್ಥಾನಿಕರನ್ನು ಆಹ್ವಾನಿಸಿ ಅವರಿಗೆ ಅತ್ಯುತ್ತಮ ಚಹಾ ಪಾರ್ಟಿ ನೀಡಿ ಅವರನ್ನು ಸಂತೋಷಪಡಿಸಬೇಕೆಂದು! ಪಾರ್ಟಿ ತುಂಬಾ ಸೊಗಸಾಗಿರಬೇಕೆಂದು, ವಿಶೇಷವಾಗಿ ಅತಿಥಿಗಳು ತಮ್ಮ ದೇಶಗಳಿಗೆ ತೆರಳಿದ ನಂತರವೂ ಅವರು ಕುಡಿದು ಬಂದ ಚಹಾದ ರುಚಿಯ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ ಎಂದು ಅವರು ಬಯಸಿದ್ದರು. ತನ್ನ ಅರಮನೆಯಲ್ಲಿ ಚಹಾದ ರುಚಿ ಮತ್ತು ಪರಿಮಳ ಸ್ವಲ್ಪ ಕಡಿಮೆ ಎಂದು ಪರಿಗಣಿಸಿ, ತನ್ನ ಸೈನಿಕರಿಗೆ ದೇಶದ ಅತ್ಯುತ್ತಮ ಚಹಾ ಮತ್ತು ದೇಶದ ಅತ್ಯುತ್ತಮ ಚಹಾ ತಯಾರಕರನ್ನು ಹುಡುಕುವಂತೆ ಆದೇಶಿಸಿದರು. ಚಹಾ ತೋಟಗಳಿಗಾಗಿ ತನ್ನ ಸೈನಿಕರೊಂದಿಗೆ ವೇಷ ಧರಿಸಿ ಹೊರಟರು. ಯಾವುದರಲ್ಲಿಯೂ ತೃಪ್ತಿ ಇಲ್ಲದೇ ಹೋದದ್ದರಿಂದ ತುಂಬಾ ದಣಿದು ಒಂದು ಬೆಟ್ಟದ ಪ್ರಾಂತ್ಯದ ಒಂದು ಸಣ್ಣ ಹಳ್ಳಿಯಲ್ಲಿರುವ ಯುವಕನೊಬ್ಬನ ಚಿಕ್ಕ ಚಹಾ ಅಂಗಡಿಯನ್ನು ಕಂಡು ಚಹಾ ಕುಡಿಯಲು ಅಲ್ಲಿಗೆ ಹೋದರು.

 

ಅವನನ್ನು ಹುಡುಕಿಕೊಂಡು ಬಂದವರು ಅರಮನೆಯಿಂದ ಬಂದವರು ಎಂದು ಯುವಕನು ತಿಳಿದುಕೊಂಡನು. ಆದರೆ ಅವನ ಬಳಿ ಸಾಕಷ್ಟು ಚಹಾ ಇಲ್ಲದೇ ಹೋದದ್ದರಿಂದ ಗಾಬರಿಗೊಂಡನು. ಹೇಗಾದರೂ, ಈ ಅವಕಾಶವನ್ನು ಬಳಸಿಕೊಂಡರೆ ತನ್ನ ಜೀವನವು ಉತ್ತಮವಾಗಿರುತ್ತದೆ ಎಂದು ಅರಿತುಕೊಂಡು, ತನ್ನ ತೋಟಕ್ಕೆ ಹೋಗಿ ಕೆಲವು ವಸ್ತುಗಳನ್ನು ತಂದು ಚಹಾ ತಯಾರಿಸಿ ತಂದುಕೊಟ್ಟನು. ಅದರ ರುಚಿ ಮತ್ತು ಸುವಾಸನೆಯು ತುಂಬಾ ಚೆನ್ನಾಗಿದೆ ಎಂದು ರಾಜನು ಸಂತೋಷಪಟ್ಟನು, ಅವನನ್ನು ಅದರ ಬಗ್ಗೆ ವಿಚಾರಿಸಿದಾಗ ತನ್ನ ಬಳಿ ಸ್ವಲ್ಪ ಚಹಾ ಮಾತ್ರ ಇದ್ದದ್ದಾಗಿಯೂ ಮತ್ತು ಅವನು ತನ್ನ ತೋಟಕ್ಕೆ ಹೋಗಿ ಕೆಲವು ಗುಲಾಬಿ ದಳಗಳನ್ನು, ಕಿತ್ತಳೆ ಸಿಪ್ಪೆಗಳನ್ನು ತೆಗೆದುಕೊಂಡು ಬಂದು ಸರಿಯಾದ ರೀತಿಯಲ್ಲಿ ಎಲ್ಲವನ್ನು ಬೆರೆಸಿ ತಯಾರಿಸಿದೆನೆಂದು ಹೇಳಿದನು. ತನಗೆ ಸಿಕ್ಕಿದ ಅವಕಾಶವನ್ನು, ತನ್ನ ಬಳಿ ಇರುವುದನ್ನು ಸರಿಯಾಗಿ ಉಪಯೋಗಿಸಿದ್ದರಿಂದ ಆ ದಿನದ ಪಾರ್ಟಿಯಲ್ಲಿ ಮಾತ್ರವಲ್ಲದೆ, ಅರಮನೆಯಲ್ಲಿಯೂ ಅವನಿಗೆ ಕೆಲಸ ಸಿಕ್ಕಿತು.

 

ಸತ್ಯವೇದದಲ್ಲಿ, ಐದು ತಲಾಂತನ್ನು ಹೊಂದಿದವನು, ಎರಡು ತಲಾಂತನ್ನು ಹೊಂದಿದವನು ಇಬ್ಬರೂ ತಮಗೆ ಕೊಡಲ್ಪಟ್ಟವುಗಳನ್ನು ಉಪಯೋಗಿಸಿ ಅದರ ಮೂಲಕ ಪ್ರಯೋಜನವನ್ನು ಪಡೆದರು. ಆದರೆ ಒಂದು ತಲಾಂತು ಹೊಂದಿದವನು ತನ್ನಲ್ಲಿಲ್ಲದ್ದನ್ನು ಯೋಚಿಸುತ್ತಾ, ತನ್ನಲ್ಲಿರುವದನ್ನು ನಿರ್ಲಕ್ಷಿಸಿ ಅದನ್ನು ಉಪಯೋಗಿಸದೆ ಹೋದನು.

 

ಪ್ರಿಯರೇ! ನಾವು ಕೂಡ ಅನೇಕ ಸಂದರ್ಭಗಳಲ್ಲಿ ಕರ್ತನು ನಮಗೆ ಕೊಟ್ಟಿರುವ ಕುಟುಂಬ, ಹಣ, ಸ್ಥಾನಮಾನ, ಪ್ರತಿಭೆ. ತಲಾಂತುಗಳು ಈ ವಿಷಯಗಳ ಬಗ್ಗೆ ಸಂತೋಷಪಡುತ್ತಾ ತೃಪ್ತರಾಗದೇ, ಅವುಗಳನ್ನು ಕರ್ತನಿಗಾಗಿ ಉಪಯೋಗಿಸದೆ ಕೊರತೆಗಳನ್ನೇ ನೆನೆಸುತ್ತಾ ಕೊರಗುತ್ತಿದ್ದೇವೆ. ಕೆಲವರು ಕರ್ತನು ನನಗೆ ಈ ಒಳ್ಳೆಯದನ್ನು ಮಾಡಿದರೆ ನಾನು ಕರ್ತನಿಗೆ ಇಷ್ಟು ಕೊಡುತ್ತೇನೆ ಎಂದು ಕರ್ತನ ಬಳಿ ಚೌಕಾಶಿ ಮಾಡುತ್ತಿದ್ದಾರೆ. ಹಾಗಲ್ಲ ನಮ್ಮ ಬಳಿ ಕರ್ತನು ಕೊಟ್ಟಿರುವ ಸಣ್ಣಪುಟ್ಟ ವಿಷಯಗಳಲ್ಲಿ ನಾವು ನಂಬಿಗಸ್ತರಾಗಿದ್ದು ಅದನ್ನು ಕರ್ತನಿಗಾಗಿ ಉಪಯೋಗಿಸುವಾಗ ಖಂಡಿತವಾಗಿಯೂ ಕರ್ತನು ನಮ್ಮನ್ನು ಆಶೀರ್ವದಿಸುತ್ತಾರೆ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:-

ನಮ್ಮ ಮೋಕ್ಷ ಪ್ರಯಾಣ ದೈನಂದಿನ ಧ್ಯಾನ ಸಂದೇಶಗಳು 8 ಭಾಷೆಗಳಲ್ಲಿ ಹೊರಬರಲು ಸಹಾಯ ಮಾಡುತ್ತಿರುವ ಅನುವಾದಕರನ್ನು ಕರ್ತನು ಆಶೀರ್ವದಿಸಬೇಕೆಂದು ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91934554048



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş