Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.11.2025
Share:

By Village Missionary Movement

Thursday, 27-Nov-2025

ಧೈನಂದಿನ ಧ್ಯಾನ(Kannada) – 27.11.2025

 

ಬದುಕಿರು ಬಿದ್ದುಹೋಗಬೇಡ

 

"...ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು." - ನೆಹೆಮಿಯ 9:25

 

ಒಂದು ನಗರದಲ್ಲಿ ಶ್ರೀಮಂತ ವ್ಯಕ್ತಿಯೊಬ್ಬರು ವಾಸಿಸುತ್ತಿದ್ದರು. ಅವರ ಏಕೈಕ ಮಗನನ್ನು ಪ್ರೀತಿಯಿಂದಲೂ, ವಾತ್ಸಲ್ಯದಿಂದಲೂ ಬೆಳೆಸುತ್ತಿದ್ದರು. ಆ ನಗರದಲ್ಲೇ ಅವರು ಮಾತ್ರವೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದದರಿಂದ, ಅವರಿಗೆ ಉತ್ತಮ ಗೌರವ ಮತ್ತು ಮರ್ಯಾದೆ ಇತ್ತು. ಆ ಮಗ ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ, ತಪ್ಪಾದ ಸ್ನೇಹಿತರೊಂದಿಗೆ ಸೇರಿ ಪ್ರಾರಂಭದಲ್ಲಿ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಲು ಪ್ರಾರಂಭಿಸಿದನು, ಮುಂದಿನ ದಿನಗಳಲ್ಲಿ ತನ್ನನ್ನು ಪ್ರಶ್ನಿಸಲು ಯಾರೂ ಇಲ್ಲ ಎಂದು ಭಾವಿಸಿ ಇಷ್ಟ ಬಂದ ಹಾಗೆ ಉದಾಸೀನವಾಗಿ ಅಲೆದಾಡಿದನು. ಒಂದು ದಿನ, ತನ್ನ ಸ್ನೇಹಿತರ ಒತ್ತಾಯದಿಂದ ಕುಡಿದು, ತನ್ನ ತಂದೆಯೊಂದಿಗೆ ಜಗಳವಾಡಿ, ಹಣವೆಲ್ಲಾ ಎತ್ತಿಕೊಂಡು ಮನೆಯಿಂದ ಹೊರಟುಹೋದನು. ಅವನ ಸ್ನೇಹಿತರು ಅವನಿಗೆ ವಿರುದ್ಧವಾಗಿ ಒಂದು ತಂತ್ರವನ್ನು ಮಾಡಿ ಅವನಿಗೆ, ಕುಡಿಯಲು ಮದ್ಯಪಾನವನ್ನು ಕೊಟ್ಟರು. ಸ್ವಲ್ಪ ಸಮಯದೊಳಗೆ ಅವನು ಮೂರ್ಛೆ ಹೋದನು. ಅವನ ಸ್ನೇಹಿತರು ಎಲ್ಲಾ ಹಣವನ್ನು ತೆಗೆದುಕೊಂಡು ಓಡಿಹೋದರು. ಅವನು ಮತ್ತಿನಿಂದ ಎಚ್ಚರವಾಗಿ ನೋಡಿದಾಗ ಅವನ ಸ್ನೇಹಿತರು ಇರಲಿಲ್ಲ, ಅವನ ಹಣವೂ ಇರಲಿಲ್ಲ. ತತ್ತರಿಸಿ ಹೋದ ಅವನು ಪ್ರಲಾಪಿಸಿದನು ಆದರೆ ಅವನನ್ನು ಸಮಾಧಾನಪಡಿಸಲು ಯಾರೂ ಇರಲಿಲ್ಲ. ಆದ್ದರಿಂದ ಅವನು ಬದುಕಲು ಕೆಲಸ ಹುಡುಕುತ್ತಾ ಅಲೆದಾಡಿದನು, ಒಂದು ಕೆಲಸವೂ ಸಿಗಲಿಲ್ಲ. ಬಹಳ ದಣಿದಿದ್ದ ಅವನು ಭಿಕ್ಷೆ ಬೇಡುವ ಮಟ್ಟಕ್ಕೆ ತಳ್ಳಲ್ಪಟ್ಟನು.

 

ಸತ್ಯವೇದದಲ್ಲಿ, ಲೂಕ 15:11-32 ರಲ್ಲಿ, ಇದೇ ರೀತಿಯ ಒಂದು ವ್ಯಕ್ತಿಯನ್ನು ನೋಡುತ್ತೇವೆ. ಅವನೇ ಕಿರಿಯ ಮಗನು. ಅವನು ತನ್ನ ತಂದೆಯಿಂದ ತನಗೆ ಬರಬೇಕಾದ ಆಸ್ತಿಯಲ್ಲಿ ಪಾಲನ್ನು ನೀಡುವಂತೆ ಕೇಳಿದನು. ಕೆಲವು ದಿನಗಳ ನಂತರ, ಎಲ್ಲವನ್ನೂ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿ ಅಲ್ಲಿ ದುಂದುಗಾರನಾಗಿ ಜೀವಿಸಿ ತನ್ನ ಆಸ್ತಿಯನ್ನು ಹಾಳುಮಾಡಿಬಿಟ್ಟನು. ಎಲ್ಲವನ್ನು ಖರ್ಚು ಮಾಡಿದ ನಂತರ ಆ ದೇಶದ ನಿವಾಸಿಯಾಗಿದ್ದವನ ಬಳಿ ಕೆಲಸಕ್ಕೆ ಸೇರಿ ಕೊಂಡನು. ಆ ಮನುಷ್ಯನು ಹಂದಿಗಳನ್ನು ಮೇಯಿಸು ವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. ಆಗ ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾವನೂ ಅವನಿಗೆ ಕೊಡಲಿಲ್ಲ. ಕೊನೆಗೆ ತನ್ನ ತಂದೆಯ ಬಳಿಗೇ ಬರುತ್ತಾನೆ. ತಂದೆಯೂ ಸಹ ಅವನನ್ನು ಪ್ರೀತಿಯಿಂದ ಅಂಗೀಕರಿಸುತ್ತಾರೆ.

 

ಇದನ್ನು ಓದುತ್ತಿರುವ ಸಹೋದರ ಸಹೋದರಿಯರೇ! ಸೌಕರ್ಯ ಬಂದ ಕೂಡಲೇ ಹೆಮ್ಮೆ ಬಂದುಬಿಡ ಬಾರದು. ಅಪೊಸ್ತಲನಾದ ಪೌಲನಂತೆ ಬದುಕಲು ತಗ್ಗಿಸಿಕೊಳ್ಳಲು ಕಲಿತುಕೊಳ್ಳಬೇಕು. ಕಿರಿಯ ಮಗನಂತೆ ಉದಾಸೀನತೆಯಿಂದ ಇರಬಾರದು. ನೆಹೆಮಿಯ 9:25 ರ ಪ್ರಕಾರ, ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು. ನಾವು ಸಹ ಅವರ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದೇವೆ! ಬಿದ್ದು ಹೋಗದೇ ಇರೋಣ!

- T. ಜೆಬರಾಜ್

 

ಪ್ರಾರ್ಥನಾ ಅಂಶ:

50,000 ಹಳ್ಳಿಗಳಲ್ಲಿ ಸುವಾರ್ತೆ ಸಾರುವ ಯೋಜನೆಯಲ್ಲಿ ಹೋಗುವ ಹಳ್ಳಿಗಳಲ್ಲಿ ದೇವರು ತೆರೆದ ಬಾಗಿಲನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al