Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.11.2025
Share:

By Village Missionary Movement

Wednesday, 26-Nov-2025

ಧೈನಂದಿನ ಧ್ಯಾನ(Kannada) – 26.11.2025

 

ದಿಕ್ಕಿಲ್ಲದವರಿಗೆ ಸಹಾಯ ಮಾಡುವ ದೇವರು

 

"...ನಿನ್ನ ಕೈಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕರುಣವಿಟ್ಟು ನಮಗೆ ಸಹಾಯಮಾಡು ಅಂದನು” - ಮಾರ್ಕ 9:22

 

ಒಂದು ಆಸ್ಪತ್ರೆಯೊಳಗೆ ಒಬ್ಬ ಪುಟ್ಟ ಹುಡುಗ ಅಳುತ್ತಾ ಓಡಿ ಬಂದು, ವೈದ್ಯರನ್ನು ನೋಡಬೇಕೆಂದು ಹೇಳಿದನು. ಅವನ ಕೂಗನ್ನು ಕೇಳಿ ವೈದ್ಯರು ತಮ್ಮ ಕೋಣೆಯಿಂದ ಹೊರಬಂದು, "ನಾನು ನಿನಗೆ ಏನು ಮಾಡಬೇಕು? ಎಂದು ಕೇಳಿದರು. ಅದಕ್ಕೆ ಅವನು ಬಹಳ ಮೋಸವಾದ ಸ್ಥಿತಿಯಲ್ಲಿರುವ ನನ್ನ ತಂದೆಯನ್ನು ನೀವು ಕಾಪಾಡಬೇಕು ಎಂದನು. ಆ ವೈದ್ಯರು ನಿನ್ನ ತಂದೆಯನ್ನು ಕರೆದುಕೊಂಡು ಬಾ ಎಂದರು. ಅದಕ್ಕೆ ಆ ಹುಡುಗ ಅಯ್ಯಾ, ಅವರನ್ನು ಕರೆತರಲು ಸಾಧ್ಯವಿಲ್ಲ, ಅವರು ಹಾಸಿಗೆ ಹಿಡಿದಿದ್ದಾರೆ ಎಂದು ಹೇಳಿದನು. ವೈದ್ಯರು ಆ ಹುಡುಗನ ಬಳಿ, ಹಾಗಾದರೆ ಕರ್ತನು ಮಾತ್ರವೇ ನಿನ್ನ ತಂದೆಯನ್ನು ಉಳಿಸಬಲ್ಲನು. ನೀನು ಹತ್ತಿರದ ಚರ್ಚ್‌ಗೆ ಹೋಗಿ ಪ್ರಾರ್ಥಿಸು, ಮತ್ತು ಯೇಸು ನಿನ್ನ ತಂದೆಯನ್ನು ಗುಣಪಡಿಸುತ್ತಾರೆ ಎಂದು ಹೇಳಿದರು.

 

ಆ ಹುಡುಗ ತಕ್ಷಣ ಆಲಯಕ್ಕೆ ಹೋಗಿ ಕಣ್ಣೀರಿನಿಂದ ಪ್ರಾರ್ಥಿಸುತ್ತಾ, "ಯೇಸಪ್ಪಾ, ಎಲ್ಲರೂ ನನ್ನ ತಂದೆಯನ್ನು ಕೈ ಬಿಟ್ಟು ಬಿಟ್ಟಿದ್ದಾರೆ. ನೀವು ದಯೆ ತೋರಿ ನನ್ನ ತಂದೆಯನ್ನು ಗುಣಪಡಿಸಿ" ಎಂದು ಕಣ್ಣೀರಿನಿಂದ ಪ್ರಾರ್ಥಿಸಿದನು. ನಂತರ ಮನೆಗೆ ಹೋಗಿ ನೋಡಿದಾಗ ತಂದೆ ಹಾಸಿಗೆಯ ಮೇಲೆ ಕಾಣಲಿಲ್ಲ. ಅವನು ಭಯದೊಂದಿಗೆ ಅಪ್ಪಾ, ಎಲ್ಲಿದ್ದೀರಾ ಎಂದು ಕೂಗಿದನು. ಅವರು, ಮಗನೇ, ನಾನು ನಿನಗಾಗಿ ಅಡುಗೆಮನೆಯಲ್ಲಿ ಹಣ್ಣಿನ ರಸ ತಯಾರಿಸುತ್ತಿದ್ದೇನೆ ಎಂದು ಹೇಳಿದರು. ಅವನು ಸಂತೋಷದಿಂದ ಓಡಿಹೋಗಿ ತನ್ನ ತಂದೆಯನ್ನು ಅಪ್ಪಿಕೊಂಡು ಅಪ್ಪಾ, ನಿಮಗೆ ಹೇಗೆ ಗುಣವಾಯಿತು? ಎಂದು ಕೇಳಿದನು. ಅದಕ್ಕೆ ಅವರು ಸ್ವಲ್ಪ ಸಮಯದ ಹಿಂದೆ, ಒಬ್ಬ ದಯಾಳು ಮತ್ತು ಶಾಂತಿಯುತ ರೂಪವುಳ್ಳ ವ್ಯಕ್ತಿಯೊಬ್ಬರು ಬಂದು ನನಗಾಗಿ ಪ್ರಾರ್ಥಿಸಿದರು. ಅವರ ಬಳಿ ನೀವು ಯಾರು ಎಂದು ಕೇಳಿದ್ದಕ್ಕೆ, “ನಾನೇ ಯೇಸು ಕ್ರಿಸ್ತನು, ನಿಮ್ಮ ಮಗನೇ ನಿಮಗೆ ಸ್ವಸ್ಥತೆ ಇಲ್ಲವೆಂದು ನಿಮ್ಮನ್ನು ಗುಣಪಡಿಸಬೇಕೆಂದು ನನ್ನ ಬಳಿ ಕೇಳಿದನು" ಎಂದು ಹೇಳಿದರು. ನಂತರ ತಂದೆ ಮತ್ತು ಮಗ ಮಂಡಿಯೂರಿ ಕಣ್ಣೀರಿನಿಂದ ಕರ್ತನಿಗೆ ಕೃತಜ್ಞತೆ ಹೇಳಿದರು. 

 

ಮಾರ್ಕ 9 ನೇ ಅಧ್ಯಾಯದಲ್ಲಿ, ಮೂಗದೆವ್ವ ಹಿಡಿದಿದ್ದ ಮಗನನ್ನು ಗುಣಪಡಿಸಲು, ತಂದೆ ಅವನನ್ನು ಶಿಷ್ಯರ ಬಳಿಗೆ ಕರೆದುಕೊಂಡು ಬಂದರು. ಆದರೆ ಅವರಿಂದ ಅದನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಆ ತಂದೆ ಯೇಸು ಕ್ರಿಸ್ತನ ಬಳಿ ತನ್ನ ಮಗನನ್ನು ಗುಣಪಡಿಸುವಂತೆ ಕೇಳಿದರು. ಯೇಸು ಕ್ರಿಸ್ತನು ಅವನಿಗೆ, “ನಿನ್ನಿಂದ ನಂಬಲು ಸಾಧ್ಯವಾದರೆ ಆಗುವುದು, ನಂಬುವವನಿಗೆ ಎಲ್ಲಾ ಆಗುವದು" ಎಂದು ಹೇಳಿದರು. ಆ ಹುಡುಗನ ತಂದೆಯು - ನಂಬುತ್ತೇನೆ ದೇವರೇ, ನನ್ನ ಅಪನಂಬಿಕೆ ನೀಗುವಂತೆ ಸಹಾಯ ಮಾಡು ಎಂದು ಕೇಳಿದನು. ಕರ್ತನು ಸಹ ಆ ಮಗನನ್ನು ಗುಣಪಡಿಸಿದರು.

 

ಪ್ರಿಯ ಸಹೋದರ ಸಹೋದರಿಯೇ, ನಾವು ಮುರಿದ ಹೃದಯದಿಂದ ದೇವರಿಗೆ ಮೊರೆಯಿಟ್ಟಾಗ, ಯೇಸು ನಮಗೆ ಸಹಾಯ ಮಾಡಲು ಸಿದ್ಧರಿದ್ದಾರೆ. ನಮ್ಮ ದೇವರು ಕರುಣೆ ಮತ್ತು ದಯೆಯುಳ್ಳ ದೇವರು. ನಿಜವಾಗಿ ತನ್ನನ್ನು ನೋಡಿ ಕರೆಯುವ ಪ್ರತಿಯೊಬ್ಬರಿಗೂ ಆತನು ಸಹಾಯ ಮಾಡಲು ಶಕ್ತರಾಗಿದ್ದಾರೆ. ಆಮೆನ್.

- Mrs.ಶೀಲಾ ಜಾನ್

 

ಪ್ರಾರ್ಥನಾ ಅಂಶ:

50,000 ಹಳ್ಳಿಗಳಲ್ಲಿ ಸುವಾರ್ತೆ ಸಾರುವ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸೇವಕರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al