By Village Missionary Movement
Tuesday, 25-Nov-2025ಧೈನಂದಿನ ಧ್ಯಾನ(Kannada) – 25.11.2025
ಪ್ರಯತ್ನವು ತಿರುವನ್ನುಂಟುಮಾಡುತ್ತದೆ
"ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;..." - ಪ್ರಸಂಗಿ 9:10
ಒಬ್ಬ ರಾಜನು ಸ್ಪರ್ಧೆಯೊಂದನ್ನು ಘೋಷಿಸಿದನು. ನೀವು ನಿಮ್ಮ ಕೈಗಳಿಂದ ಕೋಟೆಯ ಬಾಗಿಲನ್ನು ತೆರೆದು ತಳ್ಳಬೇಕು. ಗೆದ್ದರೆ, ದೇಶದ ಒಂದು ಭಾಗವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಸೋತರೆ, ಸೋತವನ ಕೈಗಳು ಕತ್ತರಿಸಲ್ಪಡುತ್ತದೆ ಎಂಬುದು ನಿಬಂಧನೆ.
ಜನರು ಅದರ ಬಗ್ಗೆ ಹಲವು ವಿಧಗಳಲ್ಲಿ ಯೋಚಿಸಿ ಭಯಪಟ್ಟು, ಯಾರೂ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂದೆ ಬರಲಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಒಬ್ಬ ಯುವಕ ಮಾತ್ರ ಮುಂದೆ ಬಂದನು. ಸ್ಪರ್ಧೆಯಲ್ಲಿ ಸೋತುಹೋದರೆ, ಕೈಗಳನ್ನು ಕತ್ತರಿಸಿ ಬಿಡುತ್ತಾರಲ್ಲಾ ನಿನ್ನ ಭವಿಷ್ಯ ಏನಾಗುತ್ತದೆ? ಎಂದು ಅನೇಕ ಜನರು ಪ್ರಶ್ನಿಸಿದರು. ಅದಕ್ಕೆ ಆ ಯುವಕ ಪ್ರತ್ಯುತ್ತರವಾಗಿ ಅಯ್ಯಾ, ಸ್ಪರ್ಧೆಯಲ್ಲಿ ಗೆದ್ದರೆ, ನಾನೊಬ್ಬ ರಾಜ. ಸೋತರೆ, ಕೈಗಳು ತಾನೇ ಹೋಗುತ್ತವೆ, ಜೀವ ಅಲ್ಲವಲ್ಲಾ! ಎಂದು ಹೇಳಿದನು.
ನಂತರ ಕೋಟೆಯ ಬಾಗಿಲನ್ನು ತಳ್ಳಿದನು. ಎಂಥಾ ಅತಿಶಯ! ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿತು. ಕೋಟೆಯ ಬಾಗಿಲುಗಳು ಲಾಕ್ ಆಗಿರಲಿಲ್ಲ, ಅವು ತೆರೆದಿದ್ದವು. ಇಂದು ಅನೇಕ ಜನರು ಹೀಗಿಯೇ ಇದ್ದಾರೆ. ಸೋತುಹೋಗುತ್ತೇವೋ ಅಥವಾ ಏನಾದರೂ ಕಳೆದುಕೊಳ್ಳುತ್ತೇವೋ ಎಂದು ಹೆದರಿ ಯಾವುದಕ್ಕೂ ಪ್ರಯತ್ನಿಸದೆಯೇ ಇದ್ದು ಬಿಡುತ್ತಾರೆ.
ಸತ್ಯವೇದದಲ್ಲಿಯೂ ಸಹ, ಯೇಸು ತಲಾಂತುಗಳ ದೃಷ್ಟಾಂತವನ್ನು ಹೇಳುವಾಗ, ತನಗೆ ನೀಡಲಾದ ತಲಾಂತನ್ನು ಬಳಸದವರನ್ನು ಖಂಡಿಸಿ, ಪ್ರತಿಭೆಯನ್ನು ಬಳಸಿದವರನ್ನು ಗೌರವಿಸಿದ್ದನ್ನು ಓದುತ್ತೇವೆ. ಹೌದು, ದೇವರು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ವೈಯಕ್ತಿಕ ಪ್ರತಿಭೆಗಳನ್ನು ನೀಡಿದ್ದಾರೆ. ನಾವು ಅವುಗಳನ್ನು ಕಂಡುಹಿಡಿದು ಅಭಿವೃದ್ಧಿಪಡಿಸಬೇಕು. ಆಗ ದೇವರು ನಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ.
ಪ್ರಿಯರೇ! ಇಂದು, ಅನೇಕ ಜನರು ಒಂದು ತಲಾಂತನ್ನು ಪಡೆದವನ ಹಾಗೆ ಯಾವ ಪ್ರತಿಭೆಯೂ ನನಗಿಲ್ಲ ಎಂದು ಪ್ರಲಾಪಿಸುತ್ತಲೇ ಇದ್ದಾರೆ. ಇಂತಹ ಜನರು ಜೀವನದಲ್ಲಿ ಮೇಲೇರಲು ಸಾಧ್ಯವೇ ಇಲ್ಲ. ನಮ್ಮ ಪ್ರತಿಭೆಯನ್ನು ಬಳಸಲು ನಾವು ಪ್ರಯತ್ನಿಸಿದಾಗ ಮಾತ್ರವೇ ದೇವರು ನಮ್ಮನ್ನು ಆಶೀರ್ವದಿಸಿ ಅಭಿವೃದ್ಧಿಪಡಿಸಲು ಸಾಧ್ಯ. 2 ಪೇತ್ರ 1:10 ರಲ್ಲಿ, "ಸಹೋದರರೇ, ದೇವರು ನಿಮ್ಮನ್ನು ಕರೆದದ್ದನ್ನೂ ಆದುಕೊಂಡದ್ದನ್ನೂ ದೃಢಪಡಿಸಿಕೊಳ್ಳುವದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡಹುವದಿಲ್ಲ" ಎಂದು ಓದುತ್ತೇವೆ. ನಮ್ಮ ಪ್ರತಿಭೆಯನ್ನು ಹೂತುಹಾಕದೇ, ಅದನ್ನು ದೇವರಿಗಾಗಿ ಉಪಯೋಗಿಸಿ ಜೀವನದಲ್ಲಿ ಉನ್ನತಿಯನ್ನು ಪಡೆದುಕೊಳ್ಳೋಣ! ಆಮೆನ್!
- Mrs. ದಿವ್ಯಾ ಅಲೆಕ್ಸ್
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿ.ವಿ. ವೀಕ್ಷಿಸುವವರು ಕ್ರಿಸ್ತನಿಗಾಗಿ ಕ್ರಿಯೆ ಮಾಡುವವರಾಗಿ ಬದಲಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482