Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.11.2025
Share:

By Village Missionary Movement

Monday, 24-Nov-2025

ಧೈನಂದಿನ ಧ್ಯಾನ(Kannada) – 24.11.2025

 

ಸಹಾಯ ಮಾಡುವ ದೇವರು

 

"ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ‌..." - ಯೆಶಾಯ 41:13

 

ಒಂದು ಹಳ್ಳಿಯಲ್ಲಿ, ಒಬ್ಬ ವಿಧವೆ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಒಂಟಿಯಾಗಿ ವಾಸಿಸುತ್ತಾ ಇದ್ದರು. ಯಾರ ಸಹಾಯವೂ ಇಲ್ಲದೆ ಊಟಕ್ಕೆ ದಾರಿಯಿಲ್ಲದೆ ಕಷ್ಟಪಡುತ್ತಿದ್ದರು. ಒಂದು ದಿನ ಸಾಯೋಣ ಎಂದು ನಿರ್ಧರಿಸಿ, ಅಂಗಡಿಗೆ ಹೋಗಿ ವಿಷವನ್ನು ಖರೀದಿಸಿದರು. ಅವರು ಮನೆಗೆ ಬಂದು ಅದನ್ನು ತಿನ್ನಲು ಪ್ರಯತ್ನಿಸಿದಾಗ, "ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ" ಎಂಬ ಒಂದು ಶಬ್ದವು ಉಂಟಾಯಿತು. ಅವರು ಭಯಭೀತರಾಗಿ ಈ ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಯೋಚಿಸುತ್ತಿರುವಾಗ, ಬಾಗಿಲು ತಟ್ಟುವ ಶಬ್ದ ಕೇಳಿಸಿತು. ಅವರು ಬಾಗಿಲು ತೆರೆದಾಗ, ಆಹಾರದೊಂದಿಗೆ ಒಬ್ಬ ವ್ಯಕ್ತಿ ಬಾಗಿಲಲ್ಲಿ ನಿಂತಿದ್ದರು. ಅವರ ಬಳಿ ನೀವು ಯಾರು? ಎಂದು ಕೇಳಿದಾಗ, ನಾನು ಹತ್ತಿರದ ದೇವಾಲಯದಲ್ಲಿ ಪ್ರಾರ್ಥಿಸುತ್ತಿದ್ದೆ. ಆ ಸಮಯದಲ್ಲಿ, ದೇವರು, ಆಹಾರವನ್ನು ತೆಗೆದುಕೊಂಡು ನಾನು ನಿನಗೆ ಹೇಳುವ ಸ್ಥಳಕ್ಕೆ ಹೋಗು" ಎಂದು ಹೇಳಿದರು. ಹಾಗಾಗಿ ನಾನು ಇಲ್ಲಿಗೆ ಬಂದೆ ಎಂದರು. ಅದನ್ನು ಕೇಳಿದ ತಾಯಿಯವರು ಆಶ್ಚರ್ಯಚಕಿತರಾಗಿ ಕಣ್ಣೀರಿನೊಂದಿಗೆ ಅವರಿಗೆ ಧನ್ಯವಾದ ಹೇಳಿದರು. ಆಗ ಅವರು ನೀವು ಸತತವಾಗಿ ದೇವರನ್ನು ನೋಡಿ ಪ್ರಾರ್ಥಿಸಿರಿ ಎಂದು ಹೇಳಿದರು. ನಂತರ ಅವರಿಗೆ ಯೇಸುವಿನ ಬಗ್ಗೆ ಹೇಳಿದ ಕೂಡಲೇ, ಅವರು ಯೇಸುವನ್ನು ತಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದರು. ನಂತರ ಅವರು ಅನೇಕ ಜನರಿಗೆ ಸುವಾರ್ತೆಯನ್ನು ಹೇಳಲು ಪ್ರಾರಂಭಿಸಿದರು. ಅವರ ಜೀವನವು ಆಶೀರ್ವಾದವಾಗಿ ಮಾರ್ಪಟ್ಟಿತು.

 

ಸತ್ಯವೇದದಲ್ಲಿಯೂ ಲೂದ್ಯಳೆಂದು ಹೆಸರುಗೊಂಡ ಒಂದು ಮಹಿಳೆ ಇದ್ದಳು. ಯೇಸುವನ್ನು ಅರಿಯದ ಈ ಮಹಿಳೆ ಪೌಲನ ಉಪದೇಶವನ್ನು ಕೇಳಿ ಯೇಸುವನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದಳು. ದೈವಭಕ್ತಿಯುಳ್ಳ ಒಂದು ಮಹಿಳೆಯಾಗಿ ಕಾಣಲ್ಪಟ್ಟಳು. ಅವಳು ಸುವಾರ್ತೆಯನ್ನು ಕೇಳಿ ಮಾನಸಾಂತರ ಹೊಂದಿದ್ದು ಮಾತ್ರವಲ್ಲದೆ, ತನ್ನ ಮನೆಯವರನ್ನೂ ರಕ್ಷಣೆಯೊಳಗೆ ಮುನ್ನಡೆಸಿದಳು. ಲೂದ್ಯಳು ದೇವರ ವಾಕ್ಯಕ್ಕಾಗಿ ತನ್ನ ಹೃದಯವನ್ನು ತೆರೆದುಕೊಟ್ಟ ಕಾರಣ, ತಾನು ಮಾತ್ರ ಆಶೀರ್ವಾದವನ್ನು ಪಡೆದುಕೊಳ್ಳಲಿಲ್ಲ. ಅವಳ ಇಡೀ ಮನೆಯವರು ರಕ್ಷಣೆ ಎಂಬ ಆಶೀರ್ವಾದವನ್ನು ಪಡೆದುಕೊಂಡರು.

 

ಪ್ರಿಯರೇ! ಕಷ್ಟದಲ್ಲಿ, ಕಣ್ಣೀರಿನಲ್ಲಿ ಮತ್ತು ಅನಾರೋಗ್ಯದಲ್ಲಿ ಸಿಲುಕಿ ಜೀವನದಲ್ಲಿ ಬಿಡುಗಡೆಯಿಲ್ಲದೆ ಬದುಕುತ್ತಿರುವ ಜನರಿಗೆ ಸಹಾಯ ಮಾಡಿ, ಅದರ ಮೂಲಕ ನಾವು ಯೇಸುವನ್ನು ಇತರರಿಗೆ ಪ್ರಕಟಿಸಿದಾಗ, ಅವರ ಕುಟುಂಬಗಳು ಸಹ ಅದರ ನಿಮಿತ್ತವಾಗಿ ರಕ್ಷಿಸಲ್ಪಡಬಹುದು. ಆತನು ದಿಕ್ಕಿಲ್ಲದವರ ಕೂಗನ್ನು ಕೇಳುವ ದೇವರು. ರಕ್ಷಣೆಯು ಯೆಹೋವನದು, ಯಾರನ್ನು ಬೇಕಾದರೂ ರಕ್ಷಿಸಲು ಆತನು ದಯೆಯುಳ್ಳಾತನು. ಬಡವರು, ದಿಕ್ಕಿಲ್ಲದವರು, ಕೈಬಿಡಲ್ಪಟ್ಟವರು ಹೀಗೆ ನಾವು ಯಾರೇ ಆಗಿದ್ದರೂ ನಮ್ಮ ಎಲ್ಲಾ ಪರಿಸ್ಥಿತಿಗಳಲ್ಲೂ ಕರ್ತನು ನಮಗೆ ಸಹಾಯ ಮಾಡುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

- Mrs. ಶ್ವೇತಾ

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಇದು ಏರ್‌ಟೆಲ್ ಸೆಟ್-ಆಫ್ ಬಾಕ್ಸ್‌ನಲ್ಲಿ ಹೊರಬರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al