By Village Missionary Movement
Sunday, 23-Nov-2025ಧೈನಂದಿನ ಧ್ಯಾನ(Kannada) – 23.11.2025 (Kids Special)
ಮೊದಲ ಸ್ಥಾನ ಯೇಸುವಿಗೆ!
"...ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" - ಮಾರ್ಕ 16:15
Hai ಪುಟಾಣಿ ಮಕ್ಕಳೇ! ಚೆನ್ನಾಗಿದ್ದೀರಾ? ಮ್ಮ್... ನಿಮ್ಮ ಜೊತೆ ಎಲ್ಲಾ ಮಾತಾಡೋಕೆ time ಇಲ್ಲಾ ರೀ, ನನಗೆ ಓದೋದು ತುಂಬಾ ಇದೆ, test ಬೇರೆ ಇದೆ ಅಂತ ಹೇಳ್ತೀರಾ?
ಸರಿ ಇವತ್ತು Sunday, church ಗೆ ಹೋಗಿದ್ರಾ? ಇಲ್ವಾ? ನೀವು ತುಂಬಾ busy ಅಂತ ಹೇಳಿ Sunday class ಅನ್ನು miss ಮಾಡಿಬಿಡಬಾರದು. ತಮ್ಮಾ, ತಂಗಿ ಗಮನಿಸಿ, ರಾಜಿ ಎಂಬ ಒಬ್ರು ಅಕ್ಕ ಇದ್ದರು. ಅವರು ಸುಮಾರಾಗಿ ಓದುತ್ತಿದ್ದರು. 9 ನೇ ತರಗತಿಯಲ್ಲಿರುವವರೆಗೂ 26 ಅಕ್ಷರಗಳ ABCD ಅನ್ನು ಸಹ ಸರಿಯಾಗಿ ಉಚ್ಚರಿಸಲು ಗೊತ್ತಿರಲಿಲ್ಲ. ಆದರೆ ಕಷ್ಟಪಟ್ಟು ಓದಿ pass mark ಮಾತ್ರ ತೆಗೆದುಕೊಂಡು ಯಶಸ್ವಿಯಾದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಸಕ್ಕರೆ ಖಾಯಿಲೆಯಿಂದ ಬಳಲುತ್ತಾ ಚಿಕಿತ್ಸೆ ಪಡೆಯುತ್ತಿದ್ದರು. ಆಗಾಗ "JESUS" ಬಗ್ಗೆ ತಿಳಿದುಕೊಂಡು, ಪ್ರಾರ್ಥಿಸಿದ್ದರಿಂದ ಯೇಸಪ್ಪ ಒಳ್ಳೆಯ ಆರೋಗ್ಯವನ್ನು ಕೊಟ್ಟರು. ಮುದ್ದು ಮಕ್ಕಳೇ! ನೀವು ಯಾರಿಗಾದರೂ "JESUS" ಬಗ್ಗೆ ಹೇಳಿದ್ದೀರಾ? ನೀವು ಹೇಳಿದ್ದರೆ ಎಷ್ಟು ಜನರು ಆಶೀರ್ವದಿಸಲ್ಪಡುತ್ತಿದ್ದರು ಗೊತ್ತಾ? ಇನ್ನು ಮೇಲೆಯಾದರೂ ಹೇಳಿ. ರಾಜಿ ಅಕ್ಕ ಏನು ಮಾಡುದ್ರು ಅಂತ ನೋಡೋಣ್ವಾ?
School ಗೆ ಹೋದರೂ, ಅಂಗಡಿಗೆ ಹೋದರೂ, prayer ಮಾಡಿಬಿಟ್ಟೇ ಹೋಗುತ್ತಿದ್ದರು. ನಾಳೆ Exam ಇದ್ದರೂ ಸಹ, ಇಂದು ನಡೆಯುವ church ಆರಾಧನೆ ಪ್ರಾರ್ಥನಾ ಕೂಟವನ್ನು Miss ಮಾಡುತ್ತಲೇ ಇರಲಿಲ್ಲ. ಪಾಠ ಓದುವ ಮೊದಲು ಪ್ರಾರ್ಥನೆ ಮಾಡಿಬಿಟ್ಟು, ಬೈಬಲ್ ಓದಿಬಿಟ್ಟು ನಂತರ ಓದುತ್ತಿದ್ದರು. ಕೆಲವೇ ತಿಂಗಳುಗಳಲ್ಲಿ... ಎಂತಹ ಆಶ್ಚರ್ಯ! ಎರಡು ಗಂಟೆಗಳು ಓದುತ್ತಿದ್ದ ಪಾಠವನ್ನು ಅರ್ಧ ಗಂಟೆಯಲ್ಲಿ ಓದಿ ಅರ್ಥಮಾಡಿಕೊಳ್ಳಲು ದೇವರು ಸಹಾಯ ಮಾಡಿದರು. ಆಮೇಲೆ ಇನ್ನೇನು school, college ಎಲ್ಲಾದರಲ್ಲೂ ಅಕ್ಕ super marks ತೆಗೆದುಕೊಂಡ್ರು. ನೆಪಗಳನ್ನೆಲ್ಲಾ ಹೇಳದೆ "JESUS" ಗೆ ಮೊದಲ ಸ್ಥಾನ ನೀಡಿದ ರಾಜಿ ಅಕ್ಕ ತುಂಬಾ ಸೂಪರ್ ಅಲ್ವಾ.
ಮುದ್ದು ಮಕ್ಕಳೇ! ಯಾರೋ ಒಬ್ಬರು ಯೇಸುವಿನ ಬಗ್ಗೆ ಹೇಳಿದ್ದರಿಂದ ರಾಜೀ ಅಕ್ಕನ life ಎಷ್ಟು ಸುಂದರವಾಗಿ ಬದಲಾಯ್ತು ನೋಡುದ್ರಾ? ಪುಟಾಣಿಗಳೇ. "JESUS" ಬಗ್ಗೆ ಮತ್ತೊಬ್ಬರಿಗೆ ಹೇಳೋದು ಎಷ್ಟು ಮುಖ್ಯ ಎಂಬುದನ್ನು ಮರೆತು ಹೋಗಲೇಬಾರದು. ಪ್ರತಿ ತರಗತಿ ಮುಗಿಯುವುದರಲ್ಲಿ, ನಾವು ಕನಿಷ್ಠ 5 ಜನರನ್ನಾದರೂ ದೇವರ ಕಡೆಗೆ ನಡೆಸಿಬಿಡಬೇಕು. ಅದು ಅವರನ್ನು ನರಕದ ಬೆಂಕಿಯಿಂದ ತಪ್ಪಿಸುತ್ತದೆ. Ok ನಾ ಪುಟಾಣಿಗಳೇ.
- Sis. ಎಸ್ತೇರ್ ಸೆಲ್ವಿ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482