Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.11.2025
Share:

By Village Missionary Movement

Saturday, 22-Nov-2025

ಧೈನಂದಿನ ಧ್ಯಾನ(Kannada) – 22.11.2025

 

ಯೇಸುವಿನ ಕತ್ತೆ

 

"...ಹೊರಗೆ ಬಾಗಿಲಿನ ಹತ್ತಿರ ಒಂದು ಕತ್ತೇಮರಿ ಕಟ್ಟಿರುವದನ್ನು ಕಂಡು ಅದನ್ನು ಬಿಚ್ಚಿದರು" - ಮಾರ್ಕ 11:4

 

ನಾನು ಕರ್ತನನ್ನು ಅರಿಯದ ಕುಟುಂಬದಲ್ಲಿ ಜನಿಸಿದೆ. ನನ್ನ ತಂದೆ ಅಸ್ವಸ್ಥರಾಗಿ ತುಂಬಾ ದುರ್ಬಲವಾಗಿ ಕಾಣುತ್ತಿದ್ದರು. ಕತ್ತಲೆಯಲ್ಲಿ ವಾಸಿಸುತ್ತಿದ್ದ ನಮ್ಮ ಕುಟುಂಬಕ್ಕೆ ಸುವಾರ್ತೆಯನ್ನು ಸಾರಿದ ಕಾರಣ, ನಾವು ಯೇಸುವನ್ನು ಕುಟುಂಬವಾಗಿ ಸ್ವೀಕರಿಸಿ ದೀಕ್ಷಾಸ್ನಾನ ಪಡೆದುಕೊಂಡೆವು. ಅದರ ನಂತರ, ನಾನು ಪೂರ್ಣ ಸಮಯದ ಸೇವಕನಾಗಿ ಮತ್ತು ಕರ್ತನ ದೇವಾಲಯದ ಕೆಲಸವನ್ನು ಮಾಡುವ ಬೋಧಕನಾಗಿ ನನ್ನನ್ನು ಸಮರ್ಪಿಸಿಕೊಂಡೆ. ತಾಯಿಯ ಗರ್ಭದಲ್ಲಿ ನಾನು ರೂಪಿಸಲ್ಪಡುವುದಕ್ಕಿಂತ ಮೊದಲೇ ನನ್ನನ್ನು ತಿಳಿದಿದ್ದ ಕರ್ತನು ನನ್ನ ಬಳಿ, ನಿನ್ನ ಕೆಲಸ ಇದುವಲ್ಲ, ನನ್ನನ್ನು ಅರಿಯದ ಲಕ್ಷಾಂತರ ಜನರಿಗೆ ನನ್ನನ್ನು ಪ್ರಕಟಿಸಲು ನಿನ್ನನ್ನು ಆರಿಸಿಕೊಂಡಿದ್ದೇನೆ ಎಂದು ಹೇಳಿದರು. ಕರ್ತನು ನನಗೆ ಉತ್ತರ ಭಾರತಕ್ಕೆ ಹೋಗಿ ಯೇಸುವನ್ನು ಪ್ರಕಟಿಸುವಂತೆ ಪ್ರೇರಣೆ ನೀಡಿದರು. ನಾನು ತಕ್ಷಣ ಅಲ್ಲಿಗೆ ಹೋಗಿ ಅಲ್ಲಿನ ಭಾಷೆಯನ್ನು ಕಲಿತೆ. ನಾನು ಒಂದು ನಿರ್ದಿಷ್ಟ ಮಿಷನರಿ ಸಂಸ್ಥೆಗೆ ಸೇರಿಕೊಂಡೆ ಮತ್ತು ಉತ್ತರ ಭಾರತದಲ್ಲಿ ಅನೇಕ ವರ್ಷಗಳ ಕಾಲ ಸೇವಕನಾಗಿ ಸೇವೆ ಸಲ್ಲಿಸಿದೆ. ಪರಿಣಾಮವಾಗಿ, ದೇವರು 2,000 ಕ್ಕೂ ಹೆಚ್ಚು ಜನರು ಯೇಸುವಿನ ಬಳಿಗೆ ಬರಲು, 37 ಚರ್ಚುಗಳಲ್ಲಿ ಆರಾಧನೆಯನ್ನು ನಡೆಸಲು ಮತ್ತು ಅನೇಕರ ಬಂಧಗಳನ್ನು ಬಿಚ್ಚಲು ಸಹಾಯ ಮಾಡಿದರು. ಇದಕ್ಕೆ ಕಾರಣ ಯೇಸುವಿನ ಮಾರ್ಗದರ್ಶನ.

 

ಕರ್ತನಾದ ಯೇಸು ತನ್ನ ಇಬ್ಬರು ಶಿಷ್ಯರಿಗೆ, ನಿಮ್ಮ ಎದುರಿನ ಹಳ್ಳಿಗೆ ಹೋಗಿರಿ; ಮತ್ತು ನೀವು ಅದರೊಳಗೆ ಪ್ರವೇಶಿಸಿದ ತಕ್ಷಣ, ಯಾರೂ ಎಂದಿಗೂ ಕುಳಿತುಕೊಳ್ಳದ ಕತ್ತೇಮರಿಯು ಅಲ್ಲಿ ಕಟ್ಟಿರುವುದನ್ನು ನೀವು ಕಾಣುವಿರಿ; ಅದನ್ನು ಬಿಚ್ಚಿಕೊಂಡು ಬನ್ನಿರಿ ಎಂದು ಹೇಳಿದರು. ಆದ್ದರಿಂದ ಅವರು ಹೋಗಿ ಹೊರಗೆ ಬೀದಿಯಲ್ಲಿ ಕಟ್ಟಲ್ಪಟ್ಟಿದ್ದ ಕತ್ತೇಮರಿಯನ್ನು ಕಂಡು, ಅದನ್ನು ಬಿಚ್ಚಿ ಅವರ ಬಳಿಗೆ ತಂದರು. ಹೌದು, ನಾವೇ ಆ ಕತ್ತೆ. ಅವರನ್ನು ಹೊರುವ ಕತ್ತೆಗಳೇ!

 

ಪ್ರೀತಿಯ ದೇವರ ಮಕ್ಕಳೇ! ನನ್ನನ್ನು ಬಳಸಿದ ಕರ್ತನು ನಿಮ್ಮನ್ನು ಸಹ ಬಳಸುತ್ತಾರೆ. ನೀವು ಯಾರೇ ಆಗಿರಲಿ, ಕರ್ತನನ್ನು ಹೊರಲು ನಿಮ್ಮನ್ನು ಒಪ್ಪಿಸಿ ಕೊಟ್ಟು ಅರ್ಪಿಸಿಕೊಂಡರೆ ಸಾಕು. ಭೂಮಿಗೆ ಉಪ್ಪಾಗಿಯೂ, ಲೋಕಕ್ಕೆ ಬೆಳಕಾಗಿಯೂ ಯೇಸುವಿಗೆ ಸಾಕ್ಷಿಗಳಾಗಿಯೂ ಬದುಕಲು ಪ್ರಯತ್ನಿಸೋಣ. ಒಂದೆಡೆ, ಕಟ್ಟಿಹಾಕಿದ ಕತ್ತೆಯಂತೆ ಕತ್ತಲಲ್ಲಿಯೂ, ಪಾಪದಲ್ಲಿಯೂ, ಶಾಪದಲ್ಲಿಯೂ ಅನೇಕರ ಜೀವನ ಬಂಧಿಸಲ್ಪಟ್ಟಿದೆ. ಮತ್ತೊಂದೆಡೆ, ಯೇಸುವೇ ರಕ್ಷಕನು ಎಂಬುದನ್ನು ಇದುವರೆಗೂ ತಿಳಿಯದ ಗುಂಪು. ಇಂತಹ ಬಂಧಿತ ಜನರಿಗೆ ಸುವಾರ್ತೆಯನ್ನು ಸಾರಲು ನಾವು ಕಾರ್ಯಮಾಡೋಣ. "ಯೇಸು" ಎಂಬ ಹೆಸರು ಅವರ ಬಂಧನಗಳನ್ನು ಬಿಚ್ಚುವ ಶಕ್ತಿಶಾಲಿ ಹೆಸರಾಗಿ ಕಾರ್ಯ ಮಾಡುವುದನ್ನು ಕಂಡು ನಾವು ಆತನನ್ನು ಮಹಿಮೆಪಡಿಸೋಣ.

- V. P. ಪಚೈ ಮುತ್ತು 

 

ಪ್ರಾರ್ಥನಾ ಅಂಶ 

ಯೌವನಸ್ಥರ ಉಜ್ಜೀವನ ಕೂಟದಲ್ಲಿ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಮಕ್ಕಳು ಅವಕಾಶವಿರುವ ಸ್ಥಳಗಳಲ್ಲಿ ಸೇವೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al