Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.11.2025
Share:

By Village Missionary Movement

Friday, 21-Nov-2025

ಧೈನಂದಿನ ಧ್ಯಾನ(Kannada) – 21.11.2025

 

ರೈತ

 

"ಸೋಮಾರಿಯ ದಾರಿ ಮುಳ್ಳುಬೇಲಿ; ಯಥಾರ್ಥವಂತನ ಮಾರ್ಗ ರಾಜಮಾರ್ಗ" - ಜ್ಞಾನೋಕ್ತಿ 15:19

 

ಒಬ್ಬ ರೈತನಿಗೆ ಇಬ್ಬರು ಗಂಡು ಮಕ್ಕಳಿದ್ದರು. ರೈತನು ತನ್ನ ಇಬ್ಬರು ಗಂಡು ಮಕ್ಕಳಿಗೆ ಪ್ರತ್ಯೇಕ ಹೊಲಗಳನ್ನು ಮತ್ತು ಬಿತ್ತಲು ಬೀಜಗಳನ್ನು ಕೊಟ್ಟು ಬಿತ್ತಲು ಹೇಳಿದರು. ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯ ಸೂಚನೆಗಳ ಪ್ರಕಾರ ಬಿತ್ತಿದರು. ಒಬ್ಬ ಮಗ ತಪ್ಪದೆ ನೀರು ಹಾಕಿ, ಗೊಬ್ಬರ ಹಾಕಿ, ಬೇಲಿ ಹಾಕಿ ಕಾಪಾಡುತ್ತಾ ಬಂದನು. ಇನ್ನೊಬ್ಬ ಮಗ ಬಿತ್ತಿದನು ಅಷ್ಟೇ, ಆದರೆ ಎಂದಿಗೂ ಹೊಲದ ಕಡೆ ಹೋಗಲೇ ಇಲ್ಲ. ತಿಂಗಳುಗಳು ಕಳೆದವು, ಹಿರಿಯ ಮಗನ ಹೊಲದಲ್ಲಿನ ಸಸ್ಯಗಳು ಬೆಳೆದು, ಅರಳಿ, ಫಲ ನೀಡಿದ್ದವು. ಕಿರಿಯ ಮಗನ ಹೊಲವು ಕಳೆಗಳು ಮತ್ತು ಅನಗತ್ಯ ಸಸ್ಯಗಳಿಂದ ತುಂಬಿತ್ತು. 

 

ಒಂದು ದಿನ ತಂದೆ ತನ್ನ ಇಬ್ಬರು ಗಂಡು ಮಕ್ಕಳ ಹೊಲಗಳನ್ನು ನೋಡಲು ಹೋದರು. ಹಿರಿಯ ಮಗನ ಹೊಲವನ್ನು ನೋಡಿ ಅವರಿಗೆ ತುಂಬಾ ಸಂತೋಷವಾಯಿತು. ಮುಳ್ಳುಗಳಿಂದ ತುಂಬಿದ್ದ ತನ್ನ ಕಿರಿಯ ಮಗನ ಹೊಲವನ್ನು ನೋಡಿದಾಗ ತಂದೆಗೆ ತುಂಬಾ ಬೇಸರವಾಯಿತು. ಕಿರಿಯ ಮಗನನ್ನು ನೋಡಿ ಸೋಮಾರಿಯೇ, ನಿನಗೆ ಕೊಟ್ಟ ಬೀಜವನ್ನು ಏನು ಮಾಡಿದೆ ಎಂದು ಕೇಳಿದರು. ಅಪ್ಪಾ, ನೀವು ಕೊಟ್ಟ ಬೀಜಗಳನ್ನು ಬಿತ್ತಿಬಿಟ್ಟು, ನಂತರ ಆ ಹೊಲವನ್ನು ನೋಡಿಕೊಳ್ಳಲಿಲ್ಲ ಎಂದು ಉತ್ತರಿಸಿದನು. ತಂದೆ ಕೋಪಗೊಂಡು, ಹದಗೊಳಿಸದ ಪರಾಂಬರಿಸದ ಯಾವ ಭೂಮಿಯೂ ಫಲ ನೀಡುವುದಿಲ್ಲ ಎಂದು ಹೇಳಿದರು. 

 

ಸತ್ಯವೇದದಲ್ಲಿಯೂ ಸಹ, ಮತ್ತಾಯ 25:15-18 ರ ವಚನಗಳಲ್ಲಿ, ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವದು. ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು, ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು. ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು. ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು. ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂವಿುಯನ್ನು ಅಗೆದು ತನ್ನ ಧಣಿಯ ಹಣವನ್ನು ಬಚ್ಚಿಟ್ಟದ್ದನ್ನು ತಿಳಿದು, ಹತ್ತು ತಲಾಂತು ಇದ್ದವನಿಗೆ ಕೊಟ್ಟು, ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು ಎಂದರು.

 

ಕ್ರಿಸ್ತನಲ್ಲಿ ಪ್ರಿಯರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನು ನಮಗೆ ಅನೇಕ ಪ್ರತಿಭೆಗಳು ಮತ್ತು ಸಾಮರ್ಥ್ಯಗಳನ್ನು ನೀಡಿದ್ದಾರೆ. ಪ್ರತಿಭೆ ಇಲ್ಲದೆ ಯಾರೂ ಇಲ್ಲ. ನಾವು ಅವುಗಳನ್ನು ಮರೆಮಾಡದೆ ಸೋಮಾರಿಗಳಾಗಿ ಇದ್ದುಬಿಡದೇ, ಆ ಪ್ರತಿಭೆಗಳನ್ನು ಕರ್ತನಿಗಾಗಿ ಬಳಸೋಣ. ಆಗ ನಮ್ಮ ಕರ್ತನಾದ ಯೇಸುವಿನ ಹೃದಯವು ಸಂತೋಷಪಡುತ್ತದೆ.

- B. ಸುಭಾಷ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಶಿಬಿರದಲ್ಲಿ ಸೇವೆಗಾಗಿ ಒಪ್ಪಿಸಿಕೊಟ್ಟ ಮಕ್ಕಳು ಸಮರ್ಪಣೆಯಲ್ಲಿ ಸ್ಥಿರವಾಗಿರಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al