By Village Missionary Movement
Thursday, 20-Nov-2025ಧೈನಂದಿನ ಧ್ಯಾನ(Kannada) – 20.11.2025
ನಿನಗೆ ಏನು ಬೇಕು
"...ನಿನ್ನ ವಿಜ್ಞಾಪನೆ ಯಾವದು, ಹೇಳು; ಅದನ್ನು ನೆರವೇರಿಸುವೆನು..." - ಎಸ್ತೇರ್ 5:6
ಒಬ್ಬ ರಾಜನು ತನ್ನ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ನಗರದ ಜನರಿಗೆ ಒಂದು ಘೋಷಣೆ ಮಾಡಿದರು. ತನ್ನ ಹುಟ್ಟುಹಬ್ಬದಂದು, ಅರಮನೆಗೆ ಬಂದು ಅಲ್ಲಿ ಏನು ಬೇಕಾದರೂ ತೆಗೆದುಕೊಳ್ಳಬಹುದು ಎಂದು. ರಾಜನ ಹುಟ್ಟುಹಬ್ಬವೂ ಬಂತು. ರಾಜನು ಸಿಂಹಾಸನದ ಮೇಲೆ ಕುಳಿತಿದ್ದರು. ಜನರು ಅರಮನೆಗೆ ಬರಲು ಪ್ರಾರಂಭಿಸಿದರು. ಒಳಗೆ ಬಂದ ಜನರು ರಾಜನಿಗೆ ನಮಸ್ಕರಿಸಿ ತಮಗೆ ಇಷ್ಟವಾದ ದುಬಾರಿ ವಸ್ತುಗಳನ್ನು ತೆಗೆದುಕೊಂಡು ಹೋದರು. ಕೊನೆಗೆ, ಒಬ್ಬ ಹುಡುಗ ಒಳಗೆ ಬಂದನು. ರಾಜನು ಅವನಿಗೆ, ನಿನಗೆ ಬೇಕಾದುದನ್ನು ತೆಗೆದುಕೋ ಎಂದು ಹೇಳಿದರು. ಹುಡುಗ ಮೌನವಾಗಿ ನಿಂತನು. ರಾಜನು, ನಿನಗೆ ಏನು ಬೇಕು?" ಎಂದು ಕೇಳಿದರು. ಹುಡುಗನು, ರಾಜಾ, ನೀವು ಈ ನನ್ನ ಮನೆಗೆ ಬರಬೇಕು ಎಂದನು. ತಕ್ಷಣ ರಾಜನು ಅಲ್ಲಿದ್ದ ಮಂತ್ರಿಯನ್ನು ಕರೆದು, ಆ ಹುಡುಗನ ಮನೆಗೆ ಹೋಗಲು ನನಗೆ ವ್ಯವಸ್ಥೆ ಮಾಡು ಎಂದರು. ಸುತ್ತಲೂ ನಿಂತಿದ್ದ ಜನರು ಇವನು ಸಿಕ್ಕಿರುವ ವಸ್ತುಗಳನ್ನು ತೆಗೆದುಕೊಳ್ಳದೆ ರಾಜನನ್ನು ತನ್ನ ಮನೆಗೆ ಕರೆಯುತ್ತಿದ್ದಾನೆ ಎಂದು ಅವನನ್ನು ಅಪಹಾಸ್ಯ ಮಾಡಿದರು. ನಂತರ ಮಂತ್ರಿ ಆ ಹುಡುಗನ ಮನೆಗೆ ಹೋದರು. ಅದು ಒಂದು ಗುಡಿಸಲಾಗಿತ್ತು. ಅವರು ತಕ್ಷಣ ಮನೆಯನ್ನು ರಾಜನು ಬಂದು ಹೋಗಲು ಅನುಕೂಲಕರವಾಗುವಂತೆ ಸೌಕರ್ಯವಾಗಿ ಮಾರ್ಪಡಿಸಿದರು. ಅಲ್ಲಿ, ರಾಜನ ರಥಕ್ಕಾಗಿ ಒಂದು ರಸ್ತೆಯನ್ನೂ ಸಿದ್ಧಪಡಿಸಲಾಯಿತು. ನಂತರ ರಾಜನು ಹುಡುಗನ ಮನೆಗೆ ಬಂದರು. ಹುಡುಗನ ಬುದ್ಧಿವಂತಿಕೆಯಿಂದಾಗಿ, ಅವನ ಮನೆಯನ್ನೂ ದುರಸ್ತಿ ಮಾಡಲಾಯಿತು ಮತ್ತು ನಗರಕ್ಕೆ ಉತ್ತಮ ರಸ್ತೆಯನ್ನೂ ಹಾಕಲಾಯಿತು.
ಎಸ್ತೇರ್ ಪುಸ್ತಕದಲ್ಲಿ, ಎಸ್ತೇರಳು ರಾಜವಸ್ತ್ರ ಭೂಷಿತಳಾಗಿ ಅರಮನೆಯ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ರಾಜ ಮಂದಿರದ ಎದುರಿನಲ್ಲಿ ನಿಂತಳು. ಅರಸನು ಆ ಮಂದಿರದಲ್ಲಿ ರಾಜಸಿಂಹಾಸನದ ಮೇಲೆ ಬಾಗಲಿಗೆದುರಾಗಿ ಕೂತುಕೊಂಡಿದ್ದನು. ಅವನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ ಆಕೆಯ ಮೇಲೆ ದಯವಿಟ್ಟು ತನ್ನ ಕೈಯಲ್ಲಿದ್ದ ಸುವರ್ಣದಂಡವನ್ನು ಆಕೆಯ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಹೋಗಿ ದಂಡದ ತುದಿಯನ್ನು ಮುಟ್ಟಿದಳು. ಔತಣಕ್ಕೆ ಬರುವಂತೆ ಕೇಳಿದಳು. ಅದರಂತೆ, ರಾಜ ಮತ್ತು ಹಾಮಾನನು ಔತಣಕ್ಕೆ ಹಾಜರಾಗುತ್ತಾರೆ. ಔತಣಕೂಟದಲ್ಲಿ, ದ್ರಾಕ್ಷಾರಸಪಾನ ಮಾಡುವಾಗ ಅರಸನು ಎಸ್ತೇರಳಿಗೆ - ನಿನ್ನ ವಿಜ್ಞಾಪನೆ ಯಾವದು, ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು ಎಂದರು. ಎಸ್ತೇರಳು ರಾಜನ ಬಳಿ ಕೇಳಿಕೊಂಡದ್ದನ್ನು ಪಡೆದುಕೊಂಡಳು.
ಇದನ್ನು ಓದುತ್ತಿರುವ ಪ್ರೀತಿಯ ದೇವರ ಮಕ್ಕಳೇ, ಇಂದು ನೀವು ಏನು ಬೇಕೆಂದು ಕೇಳುತ್ತಿದ್ದೀರಿ? ನಮ್ಮ ದೇವರು ನೀವು ಕೇಳುವ ಎಲ್ಲವನ್ನೂ ನಿಮಗೆ ನೀಡಲು ಶಕ್ತರಾಗಿದ್ದಾರೆ. 1 ಕೊರಿಂಥ 15:19 ರಲ್ಲಿ, "ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ" ಎಂದು ಸತ್ಯವೇದವು ಹೇಳುತ್ತಿದೆ. ನಾವು ದೇವರನ್ನು ಹುಡುಕೋಣ. ದೇವರು ನಮ್ಮನ್ನು ಆಶೀರ್ವದಿಸಿ ಉನ್ನತೀಕರಿಸುವರು. ನಮ್ಮ ಮೂಲಕವಾಗಿ ಅನೇಕರನ್ನು ಆಶೀರ್ವದಿಸಲು ಆತನು ನಮ್ಮನ್ನು ಉಪಯೋಗಿಸುತ್ತಾರೆ. ಆಮೆನ್!
- Mrs. ತವಮಣಿ ವೈರವೇಲ್
ಪ್ರಾರ್ಥನಾ ಅಂಶ :
ಕಣ್ಮಣಿಯೇ ಕೇಳ್, ಯೆಹೋಶುವಾ ಎದ್ದೇಳು ಪತ್ರಿಕೆಗಳ ಮೂಲಕ ಅನೇಕ ಯೌವನಸ್ಥ ಮಕ್ಕಳ ಜೀವನ ಪರಿಶುದ್ಧವಾಗಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482