Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.06.2021
Share:

By Village Missionary Movement

Monday, 07-Jun-2021

ಧೈನಂದಿನ ಧ್ಯಾನ(Kannada) – 07.06.2021

 

ಪ್ರೀತಿಯ ಬೆಂಕಿ

 

 “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ;..." - 2 ಕೊರಿಂಥ 5:14

 

ಬಿಷಪ್ ವಿಕ್ಟರ್ ಫೆಲಿಕ್ ತನ್ನ ಜೀವನದ 20 ವರ್ಷಗಳನ್ನು ಕತ್ತಲೆಯ ಕೋಣೆಯಲ್ಲಿ ಕ್ರಿಸ್ತನ ಸುವಾರ್ತೆಯ ನಿಮಿತ್ತವಾಗಿ ಕಟ್ಟಲ್ಪಟ್ಟು ರಷ್ಯಾದ ಜೈಲಿನಲ್ಲಿ ಕಳೆದರು. ಪ್ರತಿದಿನ ಸಂಜೆ ಚಿಕ್ಕ ಒಣಹುಲ್ಲಿನ ಹಾಸಿಗೆಯೊಂದನ್ನು ಅವರ ಸೆರೆಮನೆಯ ಕೋಣೆಯಲ್ಲಿ ಹಾಕಿ 7 ಗಂಟೆಗಳ ಕಾಲ ಅದರಲ್ಲಿ ಮಲಗಲು ಅವಕಾಶ ನೀಡಲಾಗಿತ್ತು. ಉಳಿದ 17 ಗಂಟೆಗಳ ಕಾಲ ಆ ಪುಟ್ಟ ಕೋಣೆಯಲ್ಲಿ ನಡೆಯುತ್ತಲೇ ಇರಬೇಕು. ನಿಂತಿದ್ದರೆ ಅಥವಾ ಕೆಳಗೆ ಬಿದ್ದರೆ ಕಾವಲುಗಾರರು ಅವನನ್ನು ಹೊಡೆದು ಹಿಂಸಿಸುತ್ತಿದ್ದರು. 20 ವರ್ಷಗಳು ಇಂತಹ ಹಿಂಸೆಯನ್ನು ಸಹಿಸಿಕೊಂಡು ಇನ್ನೂ 4 ವರ್ಷಗಳು ಭೂಮಿಯ ಹಿಮಾವೃತ ಶೀತ ಪ್ರದೇಶದವಾದ ಸೈಬೀರಿಯಾದ ಮೈನಸ್ 60 ಡಿಗ್ರಿ ಸೆಲ್ಸಿಯಸ್ ನಲ್ಲಿ ತೊಡಲು ವಸ್ತ್ರವೂ ಇಲ್ಲದೆ, ಇಬ್ಬನಿಯಲ್ಲಿ ನಶಿಸದೇ ಜೀವಂತವಾಗಿ ಇದ್ದಿದ್ದಕ್ಕೆ ಕಾರಣ, ಮತ್ತು ತನ್ನನ್ನು ಹಿಂಸಿಸುವವರ ಮೇಲೆ ಉದ್ಭವಿಸಿದ ಕಹಿ, ದ್ವೇಷವನ್ನು ಕರಗಿಸುವಂತೆ ದೇವರ ಬೆಂಕಿಯನ್ನು ತನ್ನೊಳಗೆ ಅನುಮತಿಸಿದ್ದೇ ಕಾರಣ! ಎಂದು ಹೇಳುತ್ತಾರೆ. ಯೇಸು ತನ್ನ ಆತ್ಮದಲ್ಲಿ ಬೆಳಗಿಸಿದ ಪ್ರೀತಿಯ ಬೆಂಕಿಯ ಜ್ವಾಲೆಗಳಿಂದ ಸೈಬೀರಿಯಾದ ಹಿಮವನ್ನು ಕರಗಿಸಲು ಅವರಿಂದ ಸಾಧ್ಯವಾಯಿತು.

 

ಸತ್ಯವೇದದಲ್ಲಿ, ರಾಜನಾದ ನೆಬೂಕದ್ನೆಚ್ಚರನ ಪ್ರತಿಮೆಯನ್ನು ನಮಸ್ಕರಿಸದವರು ಉರಿಯು ಬೆಂಕಿಯ ಆವಿಗೆಗೆ ಹಾಕಲಾಗುವುದು ಎಂಬ ಆಜ್ಞೆ ಬಂದಾಗ, ದೇವರ ಮೇಲಿಟ್ಟಿದ್ದ ದೃಢವಾದ ನಂಬಿಕೆಯಿಂದ ಶದ್ರಾಕ್, ಮೇಷಕ್ ಮತ್ತು ಅಬೇದ್ ನೇಗೋ, ಎಂಬವರು, “ನಾವು ಆರಾಧಿಸುವ ನಮ್ಮ ದೇವರು ನಮ್ಮನ್ನು ಬಿಡಿಸಲು ಸಮರ್ಥನು; ಅವರು ನಮ್ಮನ್ನು ಬಿಡಿಸಿದರೂ ಬಿಡಿಸದೇ ಹೋದರೂ ನಾವು ಆ ಪ್ರತಿಮೆ ಗೆ ನಮಸ್ಕರಿಸುವುದಿಲ್ಲ" ಎಂದು ಹೇಳಿದಂತಹ ಅವರ ನಂಬಿಕೆ ಎಷ್ಟು ಅದ್ಭುತವಾಗಿದೆ! ತನ್ನ ಜನರನ್ನು ಬೆಂಕಿಯ ಆವಿಗೆಗೆ ಹಾಕಲಾಗಿದ್ದ ಸಮಯದಲ್ಲೂ ತನ್ನವರನ್ನು ರಕ್ಷಿಸಲು ಬೆಂಕಿಯ ಮಧ್ಯದಲ್ಲಿ ಇಳಿದು ಬಂದು ಬಿಡಿಸಿದ ದೇವರ ಶಕ್ತಿ ಎಷ್ಟು ದೊಡ್ಡದು!

 

“ನಾಶವಾಗುವ ಚಿನ್ನವನ್ನು ಬೆಂಕಿಯಿಂದ ಪರೀಕ್ಷಿಸಲಾಗುತ್ತದೆ; ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.” (1 ಪೇತ್ರ 1: 7). ಬೆಂಕಿಯಲ್ಲಿ ಹಾಕಲ್ಪಡುವುದರಿಂದ ಲೋಹವು (metal) ಶುದ್ಧವಾಗುತ್ತದೆ, ಅದು ಗಟ್ಟಿಯಾಗುತ್ತದೆ. ಅದರಂತೆಯೇ ನಮ್ಮ ನಂಬಿಕೆಯನ್ನು ಪರೀಕ್ಷಿಸಿದಾಗ ನಾವು ಹೇಗಿದ್ದೇವೆ? ಸಮಸ್ಯೆಗಳು, ಹೋರಾಟಗಳು ನಮ್ಮನ್ನು ಆವರಿಸಿದಾಗ ನಾವು ನಿರುತ್ಸಾಹಗೊಳ್ಳುತ್ತೇವೆಯೇ? ಇಲ್ಲ, ನಾವು ಕ್ರಿಸ್ತನ ಪ್ರೀತಿಯಿಂದ ತುಂಬಲ್ಪಟ್ಟು ನಮ್ಮ ಹೃದಯದಲ್ಲಿ ಹೊತ್ತಿ ಉರಿಯುತ್ತಿರುವ ದೇವರ ಬೆಂಕಿಯಿಂದ ಪ್ರಕಾಶಗೊಂಡು, ಪರಿಶುದ್ಧ ಮಾಡಲ್ಪಟ್ಟು ಬಿಡಿಸಲ್ಪಡುತ್ತಿದ್ದೇವಾ? ಯಾವುದೇ ಸಂದರ್ಭದಲ್ಲೂ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸದಂತೆ ಕಾಯ್ದುಕೊಳ್ಳುವವರಾಗಿಯೂ, ದೇವರ ಪ್ರೀತಿಯ ಜ್ವಾಲೆಯು ನಮ್ಮೊಳಗೆ ಹೊತ್ತಿ ಉರಿಯುತ್ತಿರುವವರಂತೆ ನಾವು ಕಾಣಲ್ಪಡೋಣ. ಆಮೆನ್.

- Mrs.ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:-

Lock down ಕಾರಣದಿಂದ ಶಾಲೆಗೆ ಹೋಗದೆ ಮನೆಯಲ್ಲಿರುವ ಮಕ್ಕಳ ಸುರಕ್ಷತೆ ಮತ್ತು ಅವರ ಭವಿಷ್ಯಕ್ಕಾಗಿ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al