By Village Missionary Movement
Tuesday, 18-Nov-2025ಧೈನಂದಿನ ಧ್ಯಾನ(Kannada) – 18.11.2025
ಕ್ರಮವಾಗಿ ಮಾಡೋಣ
"ಆದರೆ ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ" - 1 ಕೊರಿಂಥ. 14:40
ಒಂದು ದಿನ ಬೆಳಿಗ್ಗೆ, ಜಾನ್ ಎಂಬವರು ಪುಸ್ತಕಗಳಿಂದ ತುಂಬಿದ ದೊಡ್ಡ ಪೆಟ್ಟಿಗೆಯೊಂದನ್ನು
ತನ್ನ ಮನೆಯ ಮುಂಭಾಗದ ಬಾಗಿಲಿನ ಮೂಲಕ ತಳ್ಳಲು ಪ್ರಯತ್ನಿಸುತ್ತಿದ್ದರು. ಇದನ್ನು ನೋಡುತ್ತಿದ್ದ ಅವರ ನೆರೆಮನೆಯ ಜೆಬಸ್ಟಿನ್ ಅವರಿಗೆ ಸಹಾಯ ಮಾಡಲು ಓಡಿಬಂದರು. ಜೆಬಸ್ಟಿನ್ ತನ್ನ ಸಹಾಯಕ್ಕೆ ಬಂದದ್ದನ್ನು ನೋಡಿ ಜಾನ್ ತುಂಬಾ ಸಂತೋಷಪಟ್ಟರು.
ನಂತರ ಅವರಿಬ್ಬರೂ ಒಟ್ಟಿಗೆ ಪೆಟ್ಟಿಗೆಯನ್ನು ತಳ್ಳಿದರು. ಆದರೆ ಅವರು ಪೆಟ್ಟಿಗೆಯನ್ನು ಒಂದು ಇಂಚು ಮಾತ್ರವೇ ತಳ್ಳಲು ಸಾಧ್ಯವಾಯಿತು. ತುಂಬಾ ದಣಿದಿದ್ದ ಜೆಬಸ್ಟಿನ್ ತನ್ನ ಸ್ನೇಹಿತ ಜಾನ್‌ನನ್ನು ನೋಡಿ, "ನಾವು 5 ನಿಮಿಷಗಳ ವಿರಾಮ ತೆಗೆದುಕೊಂಡು ನಂತರ ಅದನ್ನು ತಳ್ಳೋಣ. ನಾವು ಹೇಗಾದರೂ ಪೆಟ್ಟಿಗೆಯನ್ನು ಮನೆಯಿಂದ ಹೊರಗೆ ತಳ್ಳಬಹುದು" ಎಂದು ಹೇಳಿದರು. ಅದನ್ನು ಕೇಳಿ ಜಾನ್ ಆಶ್ಚರ್ಯಪಟ್ಟರು. ನಾನು ಪೆಟ್ಟಿಗೆಯನ್ನು ಮನೆಯಿಂದ ಹೊರಗೆ ತಳ್ಳುತ್ತಿಲ್ಲ, ಮನೆಯೊಳಕ್ಕೇ ತಳ್ಳುತ್ತಿದ್ದೆ ಎಂದರು. ಬಹಳ ಸಮಯ ಪ್ರಯತ್ನಿಸಿದರೂ ಪೆಟ್ಟಿಗೆಯು ಕೇವಲ ಒಂದು ಇಂಚು ಮಾತ್ರ ಚಲಿಸಿದರ ರಹಸ್ಯ ಆಗ ಅವರಿಗೆ ಅರ್ಥವಾಯಿತು.
ಪೆಟ್ಟಿಗೆಯನ್ನು ಜಾನ್ ಒಳಗೆ ತಳ್ಳುತ್ತಿದ್ದರು. ಜೆಬಸ್ಟಿನ್ ಹೊರಗೆ ತಳ್ಳುತ್ತಿದ್ದರು. ಪೆಟ್ಟಿಗೆ ಹೇಗೆ ಚಲಿಸುತ್ತದೆ? ಸ್ವಲ್ಪ ಸಮಯದ ನಂತರ, ಅವರಿಬ್ಬರೂ ಅದನ್ನು ಮತ್ತೆ ಒಳಗೆ ತಳ್ಳಿದರು. ಅವರ ಜಂಟಿ ಪ್ರಯತ್ನವು ಫಲ ನೀಡಿತು. ಈಗ ಅವರು ಪೆಟ್ಟಿಗೆಯನ್ನು ಅದರ ಸರಿಯಾದ ಸ್ಥಳಕ್ಕೆ ಸ್ಥಳಾಂತರಿಸಲು ಸಾಧ್ಯವಾಯಿತು. ನಾವು ಮಾಡುವ ಕೆಲಸದಲ್ಲಿ ಯಶಸ್ವಿಯಾಗಲು, ನಾವು ಒಟ್ಟಿಗೆ ಕೆಲಸ ಮಾಡುವುದು ಮಾತ್ರವಲ್ಲ, ನಾವು ಒಂದೇ ಉದ್ದೇಶದಿಂದ ಕೆಲಸ ಮಾಡಬೇಕು.
ನಮ್ಮ ಜೀವನದಲ್ಲೂ ನಮ್ಮ ಏಕೈಕ ಉದ್ದೇಶ ದೇವರನ್ನು ಮಹಿಮೆಪಡಿಸುವುದೇ ಆಗಿರಬೇಕು. 1 ಕೊರಿಂಥ 14:26 ರಲ್ಲಿ, ಹಾಗಾದರೇನು, ಸಹೋದರರೇ? ನೀವು ಕೂಡಿ ಬಂದಿರುವಾಗ ಒಬ್ಬನು ಹಾಡುವದೂ, ಒಬ್ಬನು ಉಪದೇಶಮಾಡುವದೂ, ಒಬ್ಬನು ತನಗೆ ಪ್ರಕಟವಾದದ್ದನ್ನು ತಿಳಿಸುವದೂ, ಒಬ್ಬನು ವಾಣಿಯನ್ನಾಡುವದೂ, ಒಬ್ಬನು ಅದರ ಅರ್ಥವನ್ನು ಹೇಳುವದೂ ಉಂಟಷ್ಟೆ. ನೀವು ಏನೂ ನಡಿಸಿದರೂ ಭಕ್ತಿವೃದ್ಧಿಗಾಗಿಯೇ ನಡಿಸಿರಿ" ಎಂದು ಅಪೊಸ್ತಲನಾದ ಪೌಲನು ಬರೆಯುತ್ತಾರೆ.
ನಾನು ಮಾಡುತ್ತಿರುವ ಕಾರ್ಯ ಮಾತ್ರವೇ ಮುಖ್ಯವಾದದ್ದು, ಸರಿಯಾದದ್ದು ಎಂದು ನಾವು ಭಾವಿಸಬಾರದು. ಅದು ಸ್ವಯಂ ಮಹಿಮೆಯನ್ನು ಹುಡುಕುವಂತಾಗುತ್ತದೆ. ಅದು ಕುಟುಂಬವಾಗಿರಲಿ ಅಥವಾ ಸಭೆ ಆಗಿರಲಿ, ದೇವರ ಹೆಸರಿನ ಮಹಿಮೆಗಾಗಿ ನಾವು ಒಂದೇ ಮನಸ್ಸು ಮತ್ತು ಒಂದೇ ಉದ್ದೇಶದಿಂದ ಒಟ್ಟಾಗಿ ಕೆಲಸ ಮಾಡಿದಾಗ ಅದು ಆಶೀರ್ವಾದ. ನಮ್ಮ ಸ್ವಂತ ಚಿತ್ತವನ್ನು ದ್ವೇಷಿಸುವುದೇ ನಮ್ಮನ್ನು ಆಧ್ಯಾತ್ಮಿಕರನ್ನಾಗಿ ಮಾಡುತ್ತದೆ. ನಾವು ನಮ್ಮ ಸ್ವಂತ ಚಿತ್ತವನ್ನು ದ್ವೇಷಿಸೋಣ ಮತ್ತು ದೇವರ ಚಿತ್ತವನ್ನು ಮಾಡಲು ನಮ್ಮನ್ನು ಒಪ್ಪಿಸಿಕೊಡೋಣ. ದೇವರ ಚಿತ್ತವನ್ನು ನೆರವೇರಿಸೋಣ.
ಸ್ವಯಂ ಅನ್ನು ತೊಡೆದುಹಾಕೋಣ!
ಇತರರ ಹಿತವನ್ನು ಕಾಯೋಣ!
- Mrs. ಕಲೈಚೆಲ್ವಿ ಪಾಲ್ ರಾಜ್
ಪ್ರಾರ್ಥನಾ ಅಂಶ:
ಯೌವನಸ್ಥರಿಗಾಗಿ ಹೊರಬರುವ ಕಣ್ಮಣಿಯೇ ಕೇಳ್, ಯೆಹೋಶುವನೇ ಎದ್ದೇಳು ಎಂಬ ಪತ್ರಿಕೆ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482