By Village Missionary Movement
Monday, 17-Nov-2025ಧೈನಂದಿನ ಧ್ಯಾನ(Kannada) – 17.11.2025
ಕೆಲಸದಲ್ಲಿ ವೇಗ
"ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು. ರಾತ್ರಿ ಬರುತ್ತದೆ, ಅದು ಬಂದ ಮೇಲೆ ಯಾರೂ ಕೆಲಸ ಮಾಡಲಾರರು" - ಯೋಹಾನ 9:4
ಒಬ್ಬ ಯುವಕನು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗಿ, ದೇವರ ವಾಕ್ಯವು ಅಡಗಿರುವ ಸುವಾರ್ತೆಯ ಪ್ರತಿಗಳನ್ನು ಹಾದುಹೋಗುವ ಎಲ್ಲರಿಗೂ ಬೇಗ ಬೇಗನೆ ಹಂಚುತ್ತಿದ್ದನು. ಇದನ್ನು ಗಮನಿಸಿದ ಬೋಧಕರೊಬ್ಬರು, ಈ ಸುವಾರ್ತಾ ಪ್ರತಿಗಳನ್ನು ಏಕೆ ಇಷ್ಟು ಬೇಗ ಬೇಗನೆ ಹಂಚುತ್ತಿದ್ದೀಯ? ಸ್ವಲ್ಪ ನಿಧಾನವಾಗಿ ಕೊಡಬಹುದಲ್ಲವಾ?" ಎಂದು ಕೇಳಿದರು. ಆಗ ಅವನು ನೀಡಿದ ಉತ್ತರವು ಅವರನ್ನು ಆಶ್ಚರ್ಯಗೊಳಿಸಿತು. ನಾನೊಬ್ಬ ರೋಗಿ, ನನ್ನ ದೇಹವನ್ನು ಪರೀಕ್ಷಿಸಿದ ವೈದ್ಯರು ನೀನಿನ್ನು ಕೆಲವೇ ತಿಂಗಳುಗಳು ಮಾತ್ರ ಬದುಕುತ್ತೀಯ ಎಂದು ಹೇಳಿಬಿಟ್ಟರು. ಆದ್ದರಿಂದ ಅಷ್ಟರೊಳಗೆ ನನ್ನಿಂದ ಎಷ್ಟು ವೇಗವಾಗಿ ಯೇಸು ಕ್ರಿಸ್ತನ ಬಗ್ಗೆ ಶುಭ ಸಂದೇಶವನ್ನು ಜನರೊಂದಿಗೆ ಹಂಚಿಕೊಳ್ಳಲು ಸಾಧ್ಯವೋ, ಅಷ್ಟು ವೇಗವಾಗಿ ಈ ಸುವಾರ್ತಾ ಪ್ರತಿಗಳನ್ನು ಕೊಡುತ್ತಾ ಇದ್ದೇನೆ. ದೇವರು ನನಗೆ ಕೃಪೆಯಿಂದ ಕೂಡಿಸಿಕೊಡುತ್ತಿರುವ ನನ್ನ ಆಯುಷ್ ದಿನಗಳನ್ನು ಅವರಿಗಾಗಿ, ಆತ್ಮ ಆದಾಯಕ್ಕಾಗಿ ಉಪಯೋಗಿಸಲು ಬಯಸುತ್ತೇನೆ ಎಂದು ಹೇಳಿದನು.
ಪ್ರೀತಿಯ ದೇವರ ಮಕ್ಕಳೇ, ದೈಹಿಕವಾಗಿ ಆರೋಗ್ಯವಾಗಿ ಕಾಣಲ್ಪಡುವ ನಾವು ಸಹ ಒಂದು ದಿನ ಅಂತ್ಯವನ್ನು ನೋಡಲೇ ಬೇಕು. ಆದ್ದರಿಂದ, ನಮಗಿರುವ ಈ ಕಡಿಮೆ ದಿನಗಳಲ್ಲಿ ನಾವು ನಮ್ಮ ಕೆಲಸವನ್ನು ಪೂರ್ಣಗೊಳಿಸಬೇಕು. ಪ್ರತಿ ನಿಮಿಷ ಕಳೆದಂತೆ, ನಮಗೆ ಕೆಲಸ ಮಾಡಲು ಇರುವ ಸಮಯ ಕಡಿಮೆಯಾಗುತ್ತಿದೆ. ನಾವು ಜಾಗರೂಕತೆಯಿಂದ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಯೇಸು ಕ್ರಿಸ್ತನ ಉದ್ದೇಶವೂ ಸಹ, "ನಾನು ನನ್ನನ್ನು ಕಳುಹಿಸಿದಾತನ ಕೆಲಸಗಳನ್ನು ಮಾಡಬೇಕು" ಎಂಬುದೇ ಆಗಿತ್ತು. ಶಿಷ್ಯರು ಯೇಸುವನ್ನು ನೋಡಿ, "ಗುರುವೇ (ರಬೀ), ಊಟ ಮಾಡು ಎಂದು ಕೇಳಿಕೊಂಡಾಗ ಆತನು, "ನಾನು ತಿನ್ನಲು ನಿಮಗೆ ತಿಳಿಯದಂಥ ಆಹಾರವು ನನಗುಂಟು. ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವಾಗಿದೆ ಎಂದರು.
ಯೇಸು ಈ ಲೋಕಕ್ಕೆ ಕಳುಹಿಸಲ್ಪಟ್ಟರು. ಆದ್ದರಿಂದ, ನಾವು ನಿತ್ಯಜೀವವನ್ನು ಪಡೆದಿದ್ದೇವೆ. ನಮ್ಮನ್ನು ಸೃಷ್ಟಿಸಿದಾತನ ಚಿತ್ತವನ್ನು ಮಾಡುವುದೇ ನಮ್ಮ ಉದ್ದೇಶವಾಗಿರಬೇಕು. "ಯಾರೂ ಕೆಲಸ ಮಾಡಲು ಸಾಧ್ಯವಾಗದ ರಾತ್ರಿ ಬರುತ್ತದೆ" ಎಂದು ಸತ್ಯವೇದವು ನಮಗೆ ಎಚ್ಚರಿಸುತ್ತಿದೆ. ಯಾರೂ ಕೆಲಸ ಮಾಡಲು ಸಾಧ್ಯವಾಗದ ಆ ಸಮಯ ಬರುವ ಮೊದಲು, ಗ್ರಹಿಕೆಯುಳ್ಳವರಾಗಿ ಜಾಗರೂಕತೆಯಿಂದ ನಮ್ಮ ಕರ್ತವ್ಯಗಳನ್ನು ಮಾಡಿ ಮುಗಿಸಲು ಪ್ರಯಾಸಪಡೋಣ. ದೇವರೇ ನಮ್ಮನ್ನು ಬಲಪಡಿಸಿ, ಧೈರ್ಯಪಡಿಸಿ ಪ್ರೋತ್ಸಾಹಿಸಿ ನಮಗೆ ಸಹಾಯ ಮಾಡಲಿ.
- Bro.ಪಾಲ್ ರಾಜ್
ಪ್ರಾರ್ಥನಾ ಅಂಶ:
ದೊರ್ಕಳು ಟೈಲರಿಂಗ್ ತರಬೇತಿ ಯೋಜನೆಯಲ್ಲಿ ಪ್ರಯೋಜನ ಪಡೆಯುವವರು ಕರ್ತನಲ್ಲಿ ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482