Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.11.2025 (Kids Special)
Share:

By Village Missionary Movement

Sunday, 16-Nov-2025

ಧೈನಂದಿನ ಧ್ಯಾನ(Kannada) – 16.11.2025 (Kids Special)

 

ಬಿಟ್ಟು ಓಡು

 

"ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ" - ಜ್ಞಾನೋಕ್ತಿ 8:13

 

Hello ಪುಟಾಣಿಗಳೇ, ನಿಮಗೆ ಡೈನೋಸಾರ್‌ಗಳ ಬಗ್ಗೆ ಗೊತ್ತಾ? ನಿಮ್ಮ ಅಜ್ಜಿ ತಾತ ಈ ಡೈನೋಸಾರ್ ಬಗ್ಗೆ ಕಥೆಗಳನ್ನು ಹೇಳಿದ್ದಾರಾ? ಹೌದು, ಈ ಡೈನೋಸಾರ್ ಸಾವಿರಾರು ವರ್ಷಗಳ ಹಿಂದೆ ವಾಸಿಸುತ್ತಿತ್ತು. ಅದರ ಅಸ್ತಿತ್ವದ ಸಮಯದಲ್ಲಿ, ಮತ್ತೊಂದು ಪ್ರಾಣಿ ಪ್ರಭೇದವೂ ವಾಸಿಸುತ್ತಿತ್ತು. ಆ ಪ್ರಾಣಿಯು ಚಿಕ್ಕ ಕರಡಿಯಂತೆ ಕಾಣುತ್ತದೆ. ಆ ಪ್ರಾಣಿಯ ಹೆಸರು ನಾಸಿಡಾನ್. ಆ ನಾಸಿಡಾನ್ ಗಳು ಕುಟುಂಬವಾಗಿ, ಪರ್ವತಗಳಲ್ಲಿ ಮತ್ತು ಗುಹೆಗಳಲ್ಲಿ ವಾಸಿಸುತ್ತಾ ಇದ್ದವು.

 

ಈ ಕುಟುಂಬದಲ್ಲಿ, ಒಂದು ಕುಟುಂಬವು ತನ್ನ ಎರಡು ಮರಿಗಳೊಂದಿಗೆ ಸಂತೋಷದಿಂದ ವಾಸಿಸುತ್ತಿತ್ತು. ಅವು ಯಾವಾಗಲೂ ತಮ್ಮ ವಾಸಸ್ಥಳವನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದವು. ಈ ನಾಸಿಡಾನ್ಗಳು ಬೆಳಿಗ್ಗೆ ಎದ್ದ ಕೂಡಲೇ, ತಮ್ಮ ಎರಡು ಮರಿಗಳನ್ನು ಹೊರಗೆ ಕರೆದುಕೊಂಡು ಹೋಗಿ, ಸಸ್ಯಗಳನ್ನು ತಿಂದು ಬಿಟ್ಟು ರಾತ್ರಿಯಲ್ಲಿ ತಮ್ಮ ಗುಹೆಗೆ ಹಿಂತಿರುಗುತ್ತಿದ್ದವು. ಪ್ರತಿದಿನ ಹೀಗೆ ಮಾಡುತ್ತಿದ್ದವು. ಹಲವು ದಿನಗಳಿಂದ ಇದನ್ನು ನೋಡುತ್ತಿದ್ದ ತೋಳ, ಹೇಗಾದರೂ ಈ ನಾಲ್ಕು ಜನರನ್ನು ಕೊಂದು ತಿನ್ನಲು ಯೋಜಿಸಿತು. ಒಂದು ರಾತ್ರಿ, ಈ ನಾಸಿಡನ್ನರು ತಮ್ಮ ಗುಹೆಗೆ ಬರುವ ಹೊತ್ತಿಗೆ, ತೋಳವು ಎಲ್ಲಾ ಕಸ, ಕೊಳೆತ ಪ್ರಾಣಿಗಳು ಮತ್ತು ಪಕ್ಷಿಗಳ ದೇಹಗಳನ್ನು ತಂದು ಗುಹೆಯಲ್ಲಿ ಹಾಕಿತ್ತು. ಈ ನಾಸಿಡನ್ನರು ಹಿಂತಿರುಗಿದಾಗ, ತಮ್ಮ ಗುಹೆಯಲ್ಲಿನ ಕೊಳೆಯನ್ನು ನೋಡಿ ಅವು ತುಂಬಾ ಆಘಾತಕ್ಕೊಳಗಾದವು. ಆದ್ದರಿಂದ, ಒಳಗೆ ಹೋಗಲು ಬಯಸದೆ ತಮ್ಮನ್ನು ಕೊಳಕು ಮಾಡಿಕೊಳ್ಳಲು ಬಯಸದೆ, ನಾಲ್ವರು ಗುಹೆಯ ಹೊರಗೆ ಮಲಗಿ ನಿದ್ರಿಸಿದವು. ಈ ಅವಕಾಶವನ್ನು ಬಳಸಿಕೊಂಡು, ತೋಳಗಳು ಬಂದು ಅವುಗಳನ್ನು ಕೊಂದು ತಿಂದುಬಿಟ್ಟವು. ಸ್ವಲ್ಪ ಸಮಯದೊಳಗೆ, ಈ ನಾಸಿಡನ್ನ ಕುಟುಂಬವೇ ನಾಶವಾಯಿತು.

 

ಪುಟಾಣಿಗಳೇ ನೋಡುದ್ರಾ! ಈ ನಾಸಿಡನ್ ಗಳನ್ನು ನಾಶಮಾಡಲು ತೋಳ ಹೇಗೆ ಕುತಂತ್ರದಿಂದ ವರ್ತಿಸಿತೋ, ಸೈತಾನನು ಕೂಡ ನಿಮ್ಮನ್ನು ಯೇಸುವಿನಿಂದ ಬೇರ್ಪಡಿಸಲು ಇದೇ ರೀತಿ ಹಲವು ಮಾರ್ಗಗಳಲ್ಲಿ ಯೋಜಿಸುತ್ತಾನೆ. ಅವನು ನಿಮ್ಮನ್ನು ಸುಳ್ಳು ಹೇಳುವಂತೆ ಮಾಡುತ್ತಾನೆ, ನಿಮ್ಮ ತಂದೆ ತಾಯಿಯ ವಿರುದ್ಧ ಮಾತನಾಡುವಂತೆ ಮಾಡುತ್ತಾನೆ, ನಿಮ್ಮ ಫೋನ್ ಅನ್ನು ದೀರ್ಘಕಾಲ ನೋಡುವಂತೆ ಮಾಡುತ್ತಾನೆ, ನೀವು ಇತರರೊಂದಿಗೆ ಜಗಳವಾಡುವಂತೆ ಮಾಡುತ್ತಾನೆ, ನಿಮ್ಮನ್ನು ಕದಿಯುವಂತೆ ಮಾಡುತ್ತಾನೆ. ಇದನ್ನೆಲ್ಲಾ ಮಾಡುವ ಮೂಲಕ, ಅವನು ನಿಮ್ಮನ್ನು ಯೇಸುವಿನಿಂದ ಬೇರ್ಪಡಿಸಲು ಪ್ರಯತ್ನಿಸುತ್ತಾನೆ. ಆದರೆ ನೀವು ಅದೆಲ್ಲದಕ್ಕೂ ಎಂದಿಗೂ ಅವಕಾಶ ನೀಡಬಾರದು. ಈ ನಾಸಿಡನ್‌ಗಳು ಕಲ್ಮಶಗಳಿಂದ ತಮ್ಮನ್ನು ಕಲುಷಿತಗೊಳಿಸಿಕೊಳ್ಳಲು ಹೇಗೆ ಇಷ್ಟವಿಲ್ಲದೇ ಇದ್ದವೋ, ಅದರಂತೆಯೇ ನೀವು ಈ ಲೋಕದ ಪಾಪಗಳಿಂದ ಕಲುಷಿತರಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಬೇಕು, o.k.ನಾ.

- Mrs. ಫಾತಿಮಾ ಸೆಲ್ವರಾಜ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş