Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.11.2025
Share:

By Village Missionary Movement

Saturday, 15-Nov-2025

ಧೈನಂದಿನ ಧ್ಯಾನ(Kannada) – 15.11.2025

 

ಶೋಧಿಸಲ್ಪಡುವುದು

 

"ಅನೇಕರು ಇನ್ನು ಶುದ್ಧಮಾಡಲ್ಪಟ್ಟು, ಶುಭ್ರ ಮಾಡಲ್ಪಟ್ಟು, ಶೋಧಿಸಲ್ಪಟ್ಟಿರುವರು;..." - ದಾನಿಯೇಲ 12:10

 

ಕರ್ತನು ತನ್ನ ಮಕ್ಕಳನ್ನು ಶೋಧಿಸುವುದರಲ್ಲಿ ಎರಡು ವಿಧಗಳಿವೆ. ಒಂದು, ನಮ್ಮ ಜೀವನದಲ್ಲಿ ಕೆಲವು ಬೆಂಕಿಯ ಪರೀಕ್ಷೆಗಳನ್ನು ಅವರ ಕೆಲವು ಆಧ್ಯಾತ್ಮಿಕ ನ್ಯೂನತೆಗಳಿಂದ ಶುದ್ಧೀಕರಿಸಲು ಕರ್ತನು ಅನುಮತಿಸುತ್ತಾರೆ. ಇನ್ನೊಂದು, ನಾವು ನಮ್ಮ ನಂಬಿಕೆಯಲ್ಲಿ ದೃಢವಾಗಿ ನಿಲ್ಲುತ್ತೇವೆ ಎಂದು ಇತರರು ಅರಿತುಕೊಳ್ಳುವಂತೆ ನಾವು ಶೋಧಿಸಲ್ಪಡುತ್ತೇವೆ. ಒಂದು ವಸ್ತುವು ಬೆಂಕಿಯಿಂದ ಪ್ರಭಾವಿತವಾಗುವುದಿಲ್ಲ ಎಂದು ಸಾಬೀತುಪಡಿಸಲು, ಅದು ಬೆಂಕಿಯ ಮೂಲಕ ಹೋಗಿ ಹಾನಿಯಾಗದಂತೆ ಹೊರಬರಬೇಕಲ್ಲವೇ? ಅದೇ ರೀತಿಯಲ್ಲಿ, ನಾವು ಸಹ ನಮ್ಮ ನಂಬಿಕೆಯನ್ನು ಶೋಧಿಸಲ್ಪಟ್ಟ ನಂತರ ಚಿನ್ನವಾಗಿ ಕಂಡುಬರುತ್ತೇವೆ.

 

ಮೇಲಿನ ವಚನವು ಅನೇಕರನ್ನು ಶುದ್ಧೀಕರಿಸಲಾಗುತ್ತದೆ, ಬಿಳಿಯಾಗಿಸಲಾಗುತ್ತದೆ ಮತ್ತು ಶೋಧಿಸಲ್ಪಡಲು ಇರುವವರು ಎಂದೇ ಹೇಳುತ್ತದೆ. ನಮ್ಮಲ್ಲಿ ಆಧ್ಯಾತ್ಮಿಕ ರೀತಿಯಲ್ಲಿ ರೂಪಿಸಲ್ಪಟ್ಟಿರುವ ವಿಧೇಯತೆ, ತಾಳ್ಮೆ ಮತ್ತು ಪ್ರೀತಿಯಂತಹ ಆಧ್ಯಾತ್ಮಿಕ ಗುಣಗಳು ನಮ್ಮ ಬಳಿ ಯಾವಾಗಲೂ ಎಂಥಾ ಸಂದರ್ಭಗಳಲ್ಲೂ ಪ್ರಕಟವಾಗುತ್ತದೆ ಎಂಬುದನ್ನು ಇತರರಿಗೆ ತೋರಿಸುವುದಕ್ಕಾಗಿಯೇ ಕೆಲವು ಸಂದರ್ಭಗಳಲ್ಲಿ ದೇವರು ಇಂತಹ ಶೋಧನೆಗಳನ್ನು ನಮ್ಮ ಜೀವನದಲ್ಲಿ ಅನುಮತಿಸುತ್ತಾರೆ.

 

ಯೋಬನನ್ನು ನೋಡಿರಿ, ಎಷ್ಟೇ ಸಮಸ್ಯೆಗಳು ಬಂದರೂ, ಅವರು ತನ್ನ ಬಾಯಿಂದ ಕರ್ತನನ್ನು ಶಪಿಸದೆ ಕರ್ತನಿಗೆ ಕೃತಜ್ಞತೆ ಸಲ್ಲಿಸಿದರು. ಫಿಲಿಪ್ಪಿ 2.8 ರಲ್ಲಿ ಕರ್ತನಾದ ಯೇಸು ಕ್ರಿಸ್ತನು ತನ್ನನ್ನು ತಗ್ಗಿಸಿಕೊಂಡರೆಂದು ಹೇಳುವಾಗ, ಅವರು ಅದಕ್ಕೂ ಮೊದಲು ತಾಳ್ಮೆಯಿಂದಿರಲಿಲ್ಲ ಎಂಬುದು ಅರ್ಥವಲ್ಲ. ಅವರಿಗೆ ಬಂದ ಶೋಧನೆಗಳ ನಡುವೆಯೂ ದೊಡ್ಡ ಸಂಕಟಗಳ ನಡುವೆಯೂ ಅವರು ತಾಳ್ಮೆಯಿಂದಲೂ ವಿಧೇಯತೆಯಿಂದಲೂ ಇದ್ದದ್ದನ್ನು ನಾವು ಅರ್ಥಮಾಡಿಕೊಳ್ಳುವಂತೆ ಇದನ್ನು ಬರೆಯಲಾಗಿದೆ. ಹಲವಾರು ಶೋಧನೆಗಳ ನಂತರ, ಅವರ ಹೆಸರನ್ನು ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಮತ್ತು ಭೂಮಿಯ ಕೆಳಗಿರುವ ಪ್ರತಿ ಮೊಣಕಾಲುಗಳು ಬೊಗ್ಗುವ ಹಾಗೆ ಯೇಸುವಿನ ನಾಮವು ಉನ್ನತೀಕರಿಸಲ್ಪಟ್ಟಿತು. ಯಾವಾಗಲೂ ಶೋಧನೇನಾ? ಎಂದು ಬೇಸರಗೊಳ್ಳಬೇಡಿರಿ. ಶಿಲುಬೆಯ ನಂತರ ಅದ್ಭುತವಾದ ಪುನರುತ್ಥಾನವಿದೆ. ಹೌದು, ನಾವು ಕಳೆದುಕೊಂಡಿರುವ ಎಲ್ಲಾ ಆಶೀರ್ವಾದಗಳನ್ನು ನಾವು ಪುನಃ ಸ್ವತಂತ್ರಿಸಿಕೊಳ್ಳುತ್ತೇವೆ. "ಯೆಹೋವನು ಇಂತೆನ್ನುತ್ತಾನೆ - ನಾನು ಈ ಜನರಿಗೆ ಇಷ್ಟು ದೊಡ್ಡ ಕೇಡನ್ನು ಬರಮಾಡಿದಂತೆ ವಾಗ್ದಾನಮಾಡಿದ ಎಲ್ಲಾ ಮೇಲನ್ನೂ ಬರಮಾಡುವೆನು." (ಯೆರೆಮೀಯ 32:42)

 

ಪ್ರಿಯರೇ! ನಾವು ದೇವರಿಂದ ಶೋಧಿಸಲ್ಪಟ್ಟ ನಂತರ ಚಿನ್ನವಾಗಿ ಕಾಣಲು ಸಾಧ್ಯ. ನಮ್ಮ ಸ್ವಭಾವವು ಬೆಳ್ಳಗೆ ಕಾಣಲು ದೇವರು ಕೃಪೆ ನೀಡಲಿ.

- Rev. ಎಲಿಜಬೆತ್

 

ಪ್ರಾರ್ಥನಾ ಅಂಶ:

ಶಾಲಾ ಸೇವೆಗಳಲ್ಲಿ ಕರ್ತನ ವಾಕ್ಯವನ್ನು ಕೇಳಿದ ಮಕ್ಕಳ ಹೃದಯದಲ್ಲಿ ವಾಕ್ಯವು ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş