Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.11.2025
Share:

By Village Missionary Movement

Friday, 14-Nov-2025

ಧೈನಂದಿನ ಧ್ಯಾನ(Kannada) – 14.11.2025

 

ಪರಲೋಕ ರಾಜ್ಯದಲ್ಲಿ ದೊಡ್ಡವನು

 

"...ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು (ಯೇಸುವನ್ನು) ಸೇರಿಸಿಕೊಂಡ ಹಾಗಾಯಿತು" - ಮತ್ತಾಯ 18:5

 

ಇಂದು ಮಕ್ಕಳ ದಿನಾಚರಣೆ. ಈ ದಿನದಲ್ಲಿ, ದೇವರು ಚಿಕ್ಕ ಮಕ್ಕಳನ್ನು ಹೇಗೆ ನೋಡುತ್ತಾರೆ ಎಂಬುದರ ಕುರಿತು ಯೋಚಿಸುವುದು ತುಂಬಾ ಸೂಕ್ತವಾಗಿದೆ. ನಮ್ಮ ರಕ್ಷಕನಾದ ಯೇಸು ಕ್ರಿಸ್ತನು ಭೂಮಿಯಲ್ಲಿ ಜೀವಿಸಿ ಸೇವೆಗಳನ್ನು ಮಾಡುವ ದಿನಗಳಲ್ಲಿ "ಚಿಕ್ಕ ಮಕ್ಕಳು ನನ್ನ ಬಳಿಗೆ ಬರಲಿ; ಅವುಗಳನ್ನು ತಡೆಯಬೇಡಿ" ಎಂಬ ಪ್ರೀತಿಯ ಆಜ್ಞೆಯನ್ನು ನಮಗೆ ಕಲಿಸಿಕೊಟ್ಟರು. ಮತ್ತು ಮತ್ತಾಯ 18 ರಲ್ಲಿ ಬರೆಯಲಾದ ಸತ್ಯದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಚಿಕ್ಕ ಮಗುವಿನಂತೆ ಮಾರ್ಪಟ್ಟರೆ ಮಾತ್ರವೇ ಪರಲೋಕ ರಾಜ್ಯವನ್ನು ಪ್ರವೇಶಿಸಲು ಸಾಧ್ಯ. ಆದ್ದರಿಂದ, ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುವವನು ಯಾರೋ, ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನಾಗಿರುತ್ತಾನೆ ಎಂದು ಹೇಳುತ್ತಾರೆ. ಇಂದು ನಮ್ಮನ್ನು ಚಿಕ್ಕ ಮಕ್ಕಳಂತೆ ಮುಗ್ಧತೆಯ ಜೀವನವನ್ನು ನಡೆಸಲು ಕರೆಯುತ್ತಿದ್ದಾರೆ. ಮತ್ತು ನಾವು ಯೇಸುವಿನ ಹೆಸರಿನಲ್ಲಿ ಒಂದು ಮಗುವನ್ನು ಸ್ವೀಕರಿಸಿದರೂ, ಅದು ಯೇಸುವನ್ನೇ ನಾವು ಸ್ವೀಕರಿಸುವಂತೆ ಎಂದು ಸತ್ಯವೇದವು ಹೇಳುತ್ತದೆ. 

 

ಆದ್ದರಿಂದ, ಯಾವುದೇ ತಾರತಮ್ಯವಿಲ್ಲದೆ, ನ್ಯಾಯ ನಿರ್ಣಯಿಸದೆ, ಮಕ್ಕಳನ್ನು ಪರಾಮರ್ಶಿಸುವ ಕೆಲಸದಲ್ಲಿರುವ ಪೋಷಕರು, ಶಿಕ್ಷಕರು ಮತ್ತು ಮಾರ್ಗದರ್ಶಕರು, ಅವರು ಇರುವ ಸ್ಥಿತಿಯಲ್ಲೇ ಅವರನ್ನು ಪ್ರೀತಿಯಿಂದ ಆದರಿಸಿ ಉತ್ತಮ ಮಾರ್ಗಕ್ಕೆ ತರಲು ಕರೆಯಲ್ಪಟ್ಟಿದ್ದೇವೆ. ಮತ್ತು ಅದೇ ಅಧ್ಯಾಯದಲ್ಲಿ, ಅವರಿಗೆ ತಪ್ಪಾದ ಮೂಲಮಾದರಿಯ ಮೂಲಕ ನಾವು ಎಡವಿ ಬೀಳಿಸಬಾರದು ಎಂದೂ, ಹಾಗೆ ಅವರನ್ನು ಎಡವಿ ಬೀಳಿಸುವವನು ಯಾರೋ ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು ನೇತುಹಾಕಿ ಸಮುದ್ರದ ಆಳದಲ್ಲಿ ಮುಳುಗಿಸುವುದು ಒಳ್ಳೆಯದು ಎಂದೂ ಸತ್ಯವೇದದಲ್ಲಿ ಹೇಳಲ್ಪಟ್ಟಿದೆ. ಒಂದು ಮಗುವನ್ನೂ ನಿರ್ಲಕ್ಷ್ಯವಾಗಿ ನೆನೆಸಿ ಬಿಡಬಾರದೆಂದು, ಎಚ್ಚರಿಸುವುದರೊಂದಿಗೆ, ಅವರ ದೇವದೂತರುಗಳು ಪರಲೋಕದಲ್ಲಿ ನನ್ನ ಪರಮತಂದೆಯ ಸಮ್ಮುಖವನ್ನು ಯಾವಾಗಲೂ ನೋಡುತ್ತಾರೆ ಎಂದು ಹೇಳಲ್ಪಟ್ಟಿದೆ. 

 

ತನ್ನ ಶಾಲಾ ದಿನಗಳಲ್ಲಿ ಕಡಿಮೆ ಅಂದಾಜು ಮಾಡಲ್ಪಟ್ಟ ಆಲ್ಬರ್ಟ್ ಐನ್‌ಸ್ಟೈನ್, ನಂತರ ಒಬ್ಬ ಮಹಾನ್ ವಿಜ್ಞಾನಿಯಾದರು ಮತ್ತು ಅನೇಕ ಸಾಧನೆಗಳನ್ನು ಮಾಡಿದರು. ಆದ್ದರಿಂದ, ನಾವು ಪ್ರತಿ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಕಲ್ಪಿಸಿ, ಪ್ರೋತ್ಸಾಹಿಸಿ ಅವರು ಉನ್ನತಿ ಪಡೆಯಲು ನಾವು ಪ್ರಯತ್ನಿಸೋಣ. ಮತ್ತು ನಮ್ಮ ಕೈಗಳಿಗೆ ವಹಿಸಿಕೊಡಲಾದ ಮಕ್ಕಳ ಸೇವೆಗಳಲ್ಲಿ, ಹಿಂಡಿಗೆ ಮೂಲ ಮಾದರಿಯನ್ನು ತೋರಿಸಿ, ಕಡ್ಡಾಯವಾಗಿ ಅಲ್ಲ ಮನಸ್ಪೂರ್ತಿಯಾಗಿಯೂ, ಆರ್ಥಿಕ ಲಾಭಕ್ಕಾಗಿ ಅಲ್ಲ, ಉತ್ಸಾಹ ಮನದಿಂದ ಅವರನ್ನು ಸಂರಕ್ಷಿಸಿ, ಪರಾಮರ್ಶಿಸಿ, ಕಾಳಜಿ ವಹಿಸಿ ಅವರಿಗೆ ಸುವಾರ್ತೆಯನ್ನು ಸಾರೋಣ. 

- Mrs. ಮೆರ್ಸಿ ಅಲೆಕ್ಸಾಂಡರ್

 

ಪ್ರಾರ್ಥನಾ ಅಂಶ:

ಶಾಲಾ ಸೇವೆಗಳ ಮೂಲಕ ನಾವು ಭೇಟಿಯಾಗುವ ಮಕ್ಕಳು ದೇವರ ಪ್ರೀತಿಯಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş