By Village Missionary Movement
Thursday, 13-Nov-2025ಧೈನಂದಿನ ಧ್ಯಾನ(Kannada) – 13.11.2025
ಸಮರ್ಪಣೆ ಅಗತ್ಯ
"...ಅವನು... ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ" - ಮತ್ತಾಯ 16:24
ಬೋಧಕರೊಬ್ಬರು ತನ್ನ ಸಭೆಗೆ ಸವಾಲಿನ ಸಂದೇಶವೊಂದನ್ನು ನೀಡಿದರು. "ಚೀನಾಗೆ ಮಿಷನರಿಯಾಗಿ ಹೋಗುವವರು ಯಾರು? ಜನರು ಕ್ರಿಸ್ತನನ್ನು ತಿಳಿಯದೆ ಸಾಯುತ್ತಿದ್ದಾರೆ. ನಿನ್ನನ್ನು ನೀನು ಕೊಡುತ್ತೀಯಾ?" ಎಂದು. ಒಬ್ಬ ವಿಧವೆ ತಾಯಿ ಬೋಧಕರ ಬಳಿಗೆ ಬಂದು, "ಅಯ್ಯಾ, ನಾನು ನನ್ನ ಮಗಳನ್ನು ಚೀನಾಕ್ಕೆ ಮಿಷನರಿಯಾಗಿ ಕಳುಹಿಸುತ್ತೇನೆ" ಎಂದು ಹೇಳಿದರು. ಬೋಧಕರು, "ಅಮ್ಮಾ, ನಿಮ್ಮ ಮಗಳು ನಿಮಗೆ ಸಹಾಯವಾಗಿ ಇರಬೇಕು, ನೀವು ವಯಸ್ಸಾದವರು" ಎಂದು ಹೇಳಿದರು. ಆದರೆ ಅವರು, "ಅಯ್ಯಾ, ಕರ್ತನು ನನ್ನನ್ನು ನೋಡಿಕೊಳ್ಳುತ್ತಾರೆ. ನನಗೆ ಐದು ಮಕ್ಕಳಿದ್ದಾರೆ" ಎಂದು ಹೇಳಿದರು. ಆ ತಾಯಿಯ ಹಿರಿಯ ಮಗಳನ್ನು ಚೀನಾಕ್ಕೆ ಮಿಷನರಿಯಾಗಿ ಕಳುಹಿಸಲಾಯಿತು. ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಚೀನಿಯರು ಅವಳನ್ನು ಕೊಂದುಹಾಕಿದರು. ವಿಧವೆ ತಾಯಿ ಅಳುತ್ತಾ, "ನಾನು ನನ್ನ ಮಗಳಿಗಾಗಿ ಅಳುತ್ತಿಲ್ಲ, ನಾನು ಚೀನೀ ಜನರಿಗಾಗಿ ಅಳುತ್ತಿದ್ದೇನೆ" ಎಂದು ಹೇಳಿದರು.
ಪುನಃ ತನ್ನ ಎರಡನೇ ಮಗಳು, ಮೂರನೇ, ನಾಲ್ಕನೇ ಮತ್ತು ಐದನೇ ಹೆಣ್ಣುಮಕ್ಕಳನ್ನೂ ಚೀನೀ ಜನರ ರಕ್ಷಣೆಗಾಗಿ, ಅವರು ಹೇಗಾದರೂ ಯೇಸುವನ್ನು ಅರಿತುಕೊಳ್ಳಬೇಕು ಎಂಬುದಕ್ಕಾಗಿ ಮಿಷನರಿಗಳಾಗಿ ಕಳುಹಿಸಿದರು. ನಡೆದದ್ದೇನು? ಆ ಚೀನಿಯರು ಅವರನ್ನೂ ದಯೆ ದಾಕ್ಷಿಣ್ಯವಿಲ್ಲದೆ ಕೊಂದು ಹಾಕಿದರು. ಈಗ, ಆ ವಿಧವೆ ತಾಯಿ, "ಅಯ್ಯಾ! ನನ್ನನ್ನು ಕಳುಹಿಸಿರಿ" ಎಂದು ಹೇಳಿದರು.
ಆಘಾತಕ್ಕೊಳಗಾದ ಬೋಧಕರು ಅವರನ್ನೂ ಕಳುಹಿಸಿದರು. ಚೀನಾ ಮಣ್ಣಿನಲ್ಲಿ ಕಾಲಿಟ್ಟು ಜನರಿಗೆ ಯೇಸುಕ್ರಿಸ್ತನ ಪ್ರೀತಿಯ ಬಗ್ಗೆ ಹೇಳಲು ಪ್ರಾರಂಭಿಸಿದರು. ಚೀನಿಯರು ಅವರನ್ನು ನೋಡಿದ ಕೂಡಲೇ, "ನಿಮ್ಮ ಪ್ರತಿರೂಪದಲ್ಲಿರುವ ಐದು ಹೆಣ್ಣುಮಕ್ಕಳನ್ನೂ ನಾವು ಕೊಂದುಹಾಕಿದೆವು ಎಂದು ತಿಳಿದಿದ್ದರೂ, ಭಯಪಡದೆ ನೀವು ನಮ್ಮ ಬಳಿಗೆ ಬಂದು, ಅವರು ಹೇಳಿದ ಯೇಸುವಿನ ಬಗ್ಗೆ ಹೇಳುತ್ತಿದ್ದೀರಲ್ಲಾ ಯಾಕೆ?" ಎಂದು ಕೇಳಿದರು. ಆಗ ವಿಧವೆ ತಾಯಿ, "ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನೀವು ನರಕಕ್ಕೆ ಹೋಗುವುದನ್ನು ನಾನು ಬಯಸುವುದಿಲ್ಲ" ಎಂದು ಹೇಳಿದರು. ಅದನ್ನು ಕೇಳಿದ ಚೀನಿಯರ ಕಣ್ಣುಗಳಿಂದ ಕಣ್ಣೀರು ಹರಿಯಿತು. ಅವರು ಆ ತಾಯಿಯಲ್ಲಿ ಯೇಸುಕ್ರಿಸ್ತನ ಪ್ರೀತಿಯನ್ನು ನೋಡಿದರು. ಆ ದಿನದಿಂದ, ಅವರು ಗುಂಪು ಗುಂಪಾಗಿ ಯೇಸುವಿನ ಕಡೆಗೆ ಮನತಿರುಗಿದರು.
ನನ್ನ ಪ್ರೀತಿಯ ದೇವರ ಮಕ್ಕಳೇ, "ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ" (ಯೆಶಾಯ 43:21). ನಮ್ಮ ಬಗ್ಗೆ ಏನು? ಯೇಸುವಿನ ಸೇವೆಗಾಗಿ ತನ್ನ ಐದು ಮಕ್ಕಳನ್ನು ತ್ಯಾಗ ಮಾಡಿದ ತಾಯಿ ಅಂತಿಮವಾಗಿ ಯೇಸುವಿಗಾಗಿ ಸಾಯಲು ತನ್ನನ್ನೂ ಅರ್ಪಿಸಿಕೊಂಡರು. ಇದು ಸೇವೆಯ ಸಮರ್ಪಣೆ. ನಾವು ಸಮರ್ಪಿತರಾಗಿದ್ದರೆ ಮಾತ್ರ ನಾವು ಅಂತಹ ಸೇವೆಯನ್ನು ಪೂರೈಸಲು ಸಾಧ್ಯ. ಆಮೆನ್! ಹಲ್ಲೆಲೂಯಾ! ಕರ್ತನು ನಿಮ್ಮನ್ನು ಆಶೀರ್ವದಿಸಲಿ!
"ಯೇಸು ನಿನಗಾಗಿ ತನ್ನ ಜೀವವನ್ನೇ ಕೊಟ್ಟರು
ನೀನು ಅವರಿಗಾಗಿ ನಿನ್ನ ಜೀವನವನ್ನು ಕೊಡುತ್ತೀಯಾ?"
- Mrs.ಹೆಪ್ಸಿಬಾ ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಪ್ರತಿ ತಿಂಗಳು ಮನೆ ಪ್ರಾರ್ಥನಾ ಕೂಟಗಳು ನಡೆಯಲು ತಮ್ಮ ಮನೆಗಳನ್ನು ನೀಡಿದವರು ಆಶೀರ್ವದಿಸಲ್ಪಡುವಂತೆ. ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482