Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.11.2025 (Kids Special)
Share:

By Village Missionary Movement

Sunday, 09-Nov-2025

ಧೈನಂದಿನ ಧ್ಯಾನ(Kannada) – 09.11.2025 (Kids Special)

 

ನಂಬಿಗಸ್ತಿಕೆಯು ತರುವ ಆಶೀರ್ವಾದ

 

"...ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ;..." - ಮತ್ತಾಯ 25:23

 

ಹಲೋ ಪುಟಾಣಿಗಳೇ! ರಜೆ ತೆಗೆದುಕೊಳ್ಳದೆ ಸರಿಯಾಗಿ ಶಾಲೆಗೆ ಹೋಗುತ್ತಿದ್ದೀರಾ? ಸೂಪರ್. ಮುದ್ದು ಮಕ್ಕಳೇ, ನಾವು ಎಂದಿಗೂ ಸೋಮಾರಿಯಾಗಿರಬಾರದು. ನಾವು ಸೋಮಾರಿಯಾಗಿದ್ದರೆ, ನಮ್ಮ ಹೃದಯವು ಸೈತಾನನು ವಾಸಿಸುವ ಸ್ಥಳವಾಗಿ ಮಾರ್ಪಡುತ್ತದೆ. Daily homework ಬರೆಯಲು, ಆಟವಾಡಲು, ಅಮ್ಮನಿಗೆ Help ಮಾಡಲು ಹೀಗೆ ನಿನ್ನನ್ನು Busy ಆಗಿ ಇಟ್ಟುಕೊಳ್ಳಬೇಕು. O.k ನಾ. ಸೆಲ್‌ಫೋನ್ ಮತ್ತು ಟಿವಿ ನೋಡುತ್ತಲೇ ಇದ್ದರೆ, ಅದು ನಿನ್ನನ್ನು ಗುಲಾಮನನ್ನಾಗಿ ಮಾಡಿಬಿಡುತ್ತದೆ. ನಿನ್ನ ಕಣ್ಣುಗಳು ಸಹ ಬಾಧಿಸಲ್ಪಡುತ್ತದೆ. ನಮಗೆ ಕೊಡಲ್ಪಟ್ಟಿರುವ ಸಮಯದಲ್ಲಿಯೂ ಸಹ "JESUS" ಗೆ ನಂಬಿಗಸ್ತರಾಗಿರಬೇಕು. O.K story ಕೇಳೋಣ್ವಾ?

 

ಒಂದು ಹಳ್ಳಿಯಲ್ಲಿ ಒಂದು ಸಣ್ಣ ಕುಟುಂಬ ಸಂತೋಷದಿಂದ ವಾಸಿಸುತ್ತಿತ್ತು. ತಂದೆ ಮತ್ತು ತಾಯಿ ಯಾವಾಗಲೂ busy ಆಗಿ ಇರುತ್ತಿದ್ದರು. ಏಕೆಂದರೆ ಅವರು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ತರಕಾರಿ ತೋಟದಿಂದ ಬರುವ ಆದಾಯದಿಂದ ಅವರು ಕುಟುಂಬವನ್ನು ನಡೆಸುತ್ತಿದ್ದರು. ಏಳನೇ ತರಗತಿಯ ವಿದ್ಯಾರ್ಥಿ ರೋಷನ್, ಕಷ್ಟಪಟ್ಟು ದುಡಿಯುತ್ತಿದ್ದ ಪೋಷಕರಿಗೆ ತನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದನು.

 

ಇದ್ದಕ್ಕಿದ್ದಂತೆ, ಅವನ ತಂದೆ ಅನಾರೋಗ್ಯಕ್ಕೆ ಒಳಗಾದರು. ಅವನ ತಾಯಿ ತೋಟಕ್ಕೆ ಹೋಗಿ ತರಕಾರಿಗಳನ್ನು ಕಿತ್ತುಕೊಂಡು ಬರುತ್ತಿದ್ದರು. ರೋಷನ್ ಅವೆಲ್ಲವನ್ನೂ ತನ್ನ ಸೈಕಲ್‌ನಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದನು. ಗಿರಾಕಿಗಳು ಇಲ್ಲದ ಸಮಯದಲ್ಲಿ Book ತೆಗೆದು ತನ್ನ homework ಮಾಡುತ್ತಿದ್ದನು. ಒಂದು ದಿನ, ಕಲೆಕ್ಟರ್ ಮಾರುಕಟ್ಟೆಗೆ ಬಂದರು. ಅವರು ರೋಷನ್‌ನನ್ನು, ಓದುವ ವಯಸ್ಸಿನಲ್ಲಿ ವ್ಯಾಪಾರ ಏಕೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ ಅವನ ಮನೆಯ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು. ನಿನ್ನ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆ ಎಂದು ಹೇಳಿ, ರೋಷನ್‌ನ ಕೈ ಕುಲುಕಿ "ಸಭಾಷ್" ಎಂದು ಹೇಳಿ ಹೊರಟುಹೋದರು. ರೋಷನ್ ಮನೆಗೆ ಬಂದು, ತನ್ನ ಹೆತ್ತವರಿಗೆ ನಡೆದ ಎಲ್ಲವನ್ನೂ ಹೇಳಿದನು. "ನೀನು ನಿನ್ನ ಕೆಲಸ ಮತ್ತು ವಿದ್ಯಾಭ್ಯಾಸದಲ್ಲಿ ನಂಬಿಗಸ್ತನಾಗಿದ್ದದರಿಂದ ಇದು ನಿನಗೆ ದೊರೆತ ಬಹುಮಾನ ಬಂಗಾರ!" ಎಂದು ಹೇಳಿ ತಂದೆ ಸಂತೋಷಪಟ್ಟರು. ರೋಷನ್ ಚೆನ್ನಾಗಿ ಅಧ್ಯಯನ ಮಾಡುವುದನ್ನು ಮುಂದುವರಿಸಿದನು. ಕಲೆಕ್ಟರ್ ಕೂಡ ಅವನಿಗೆ ಸಹಾಯ ಮಾಡುತ್ತಲೇ ಇದ್ದರು. ಏಕೆ ಗೊತ್ತಾ ? ಅವರು ತುಂಬಾ ಬಡ ಕುಟುಂಬದಲ್ಲಿ ಜನಿಸಿ, ಕಷ್ಟಪಟ್ಟು ಓದಿ ಮುಂದೆ ಬಂದದ್ದರಿಂದ ಅಂತಹ ಜನರಿಗೆ ಸಹಾಯ ಮಾಡುತ್ತಿದ್ದರು. ರೋಷನ್ ಕೂಡ ಚೆನ್ನಾಗಿ ಅಧ್ಯಯನ ಮಾಡಿ ಉನ್ನತ ಸರ್ಕಾರಿ ಕೆಲಸಕ್ಕೆ ಹೋದನು.

 

ಪ್ರೀತಿಯ ಕಣ್ಮಣಿ ಮಕ್ಕಳೇ! ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ನಂಬಿಗಸ್ತರಾಗಿ, ಚುರು ಚುರುಕಾಗಿ ಇದ್ದರೆ ಸಾಕು. ಅದನ್ನು ನೋಡುವ ದೇವರು ನಿನ್ನನ್ನು ಮೇಲಕ್ಕೆತ್ತುತ್ತಾರೆ.

- Mrs.ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin