Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.11.2025
Share:

By Village Missionary Movement

Friday, 07-Nov-2025

ಧೈನಂದಿನ ಧ್ಯಾನ(Kannada) – 07.11.2025

 

ಎದುರಿಸಿದವರ ಮೂಲಕ ಉಜ್ಜೀವನ

 

"ಯಾರನ್ನು ಮೊದಲು ನೇವಿುಸಿದನೋ ಅವರನ್ನು ಕರೆದನು;..." - ರೋಮಾ 8:30

 

ದೈವಭಕ್ತಿಯಲ್ಲಿ ಕಟ್ಟುನಿಟ್ಟಾಗಿ ಬೆಳೆದ "ನಾರಾಯಣನ್ ವಾಮನ ತಿಲಕ್" ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕ್ರೈಸ್ತ ಧರ್ಮವನ್ನು ದ್ವೇಷಿಸುತ್ತಿದ್ದ ಇವರು, ಕ್ರೈಸ್ತ ಸುವಾರ್ತಾ ಪುಸ್ತಕಗಳನ್ನೆಲ್ಲಾ ಹರಿದು ಹಾಕುತ್ತಿದ್ದರು. ತಿಂಗಳುಗಳು ಕಳೆದಂತೆ, ಶೂನ್ಯತೆಯ ಭಾವನೆ ಅವರ ಹೃದಯವನ್ನು ತುಂಬಿತು. ಅವರು ಹಿಂದೂ ಧರ್ಮದ ಬಗ್ಗೆಯೂ ಕಾಳಜಿ ವಹಿಸಲಿಲ್ಲ, ಆದರೆ ಹೊಸ ತತ್ವಗಳನ್ನು ಸೃಷ್ಟಿಸಿ ಜನರು ಅವುಗಳನ್ನು ಅನುಸರಿಸುವಂತೆ ಕಾರ್ಯಮಾಡಿದರು. ಈ ಪರಿಸ್ಥಿತಿಯಲ್ಲಿ, ಅವರು ರೈಲು ಪ್ರಯಾಣ ಮಾಡಿ ಯುರೋಪಿಯನ್ನರೊಬ್ಬರನ್ನು ಭೇಟಿಯಾದರು. ತಾನು ಕ್ರೈಸ್ತನಾಗಿದ್ದದರಿಂದ ಮಾತನಾಡಲು ಹಿಂಜರಿಯುತ್ತಿದ್ದ ತಿಲಕ್, ಸಂಸ್ಕೃತದಲ್ಲಿ ಆಸಕ್ತಿ ಹೊಂದಿರುವವರು ಯುರೋಪಿಯನ್ನರು ಎಂಬುದರಿಂದ ಅವರೊಂದಿಗೆ ಹಲವಾರು ಗಂಟೆಗಳ ಕಾಲ ಮಾತನಾಡಿದರು.

 

ಪ್ರಯಾಣದ ಕೊನೆಯಲ್ಲಿ, ಆ ಯುರೋಪಿಯನ್ ತಿಲಕನ ಬಳಿ ಒಂದು"ಹೊಸ ಒಡಂಬಡಿಕೆ"ಯನ್ನು ನೀಡಿ ಕಡ್ಡಾಯವಾಗಿ ಅದನ್ನು ಓದಿ ನೋಡುವಂತೆ ಕೇಳಿಕೊಂಡರು. ಬಲವಂತದ ಮೇರೆಗೆ ಹೊಸ ಒಡಂಬಡಿಕೆಯನ್ನು ಓದಲು ಪ್ರಾರಂಭಿಸಿದ ತಿಲಕ್ ಹೃದಯದಲ್ಲಿ ಒಳ್ಳೆಯ ಬದಲಾವಣೆಗಳು ಉಂಟಾಗಲು ಪ್ರಾರಂಭಿಸಿತು. ಅವರು ಇಲ್ಲಿಯವರೆಗೆ ಹುಡುಕುತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳು ಹೊಸ ಒಡಂಬಡಿಕೆಯಲ್ಲಿವೆ ಎಂದು ಅವರು ಕಂಡುಕೊಂಡರು. ಪರಿಣಾಮವಾಗಿ, ಅವರು ಯೇಸುಕ್ರಿಸ್ತನನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದರು. ಅವರ ಹೃದಯದ ಶೂನ್ಯತೆಯ ಸ್ಥಿತಿ ಬದಲಾಗಿ ಪೂರ್ಣತೆಯನ್ನು ಗ್ರಹಿಸಿದರು.

 

ಯೇಸುಕ್ರಿಸ್ತನಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು, 1895 ನೇ ವರ್ಷದಲ್ಲಿ ಮುಳುಗಿ ದೀಕ್ಷಾಸ್ನಾನ ಪಡೆದು, ತನ್ನ ಕ್ರೈಸ್ತ ನಂಬಿಕೆಯನ್ನು ಅರಿಕೆಮಾಡಿದರು. ಇದು ಮಾತ್ರವಲ್ಲದೆ, ಮಹಾರಾಷ್ಟ್ರದ ಜನರು ಯೇಸುವನ್ನು ತಿಳಿದುಕೊಳ್ಳಬೇಕು ಎಂದು ಅವರ ಮಧ್ಯದಲ್ಲಿ ಬಿಡುವಿಲ್ಲದೆ ಪಾಡುಪಟ್ಟರು. ಅವರು ಮರಾಠಿಯಲ್ಲಿ 798 ಕ್ರೈಸ್ತ ಹಾಡುಗಳನ್ನು ಬರೆದು ದೊಡ್ಡ ಉಜ್ಜೀವನಕ್ಕೆ ದಾರಿ ಮಾಡಿಕೊಟ್ಟರು. ಮಹಾರಾಷ್ಟ್ರದಲ್ಲಿಯೂ ಉಜ್ಜೀವನವು ಬೆಂಕಿಯಂತೆ ಹೊತ್ತಿ ಉರಿಯಲು ಕಾರಣರಾಗಿದ್ದರು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ, ಈ ಕೊನೆಯ ದಿನಗಳಲ್ಲಿ, ಕರ್ತನು ಯುವಕರ ಸೈನ್ಯವನ್ನು ಎಬ್ಬಿಸಲಿದ್ದಾರೆ. ಒಂದು "ಯುವಕರ ರಾಷ್ಟ್ರ" ಎದ್ದು (ಕೀರ್ತನೆ 110:3) ಕರ್ತನಿಗಾಗಿ ಈ ಲೋಕವನ್ನೇ ಅಲುಗಾಡಿಸಲಿದೆ. ಮುಂಬರುವ ಉಜ್ಜೀವನದಲ್ಲಿ ಒಂದು ಸುವಾರ್ತಾ ಪೀಳಿಗೆಯು ಉದ್ಭವಿಸಲಿದೆ. ಕರ್ತನು ಖಂಡಿತವಾಗಿಯೂ ನಮ್ಮ ಮಕ್ಕಳನ್ನು ಭೇಟಿ ಮಾಡುತ್ತಾರೆ. ಸುವಾರ್ತೆಯನ್ನು ವಿರೋಧಿಸಿದ ಸೌಲನೆಂಬ ಯುವಕನನ್ನು ಕರ್ತನು ಭೇಟಿ ಮಾಡಿದರು. ಕರ್ತನು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ದೇವರ ಚಿತ್ತವನ್ನು ತಿಳಿದುಕೊಳ್ಳಲು, ಆತನನ್ನು ನೋಡಲು ಮತ್ತು ಆತನ ವಾಕ್ಯವನ್ನು ಕೇಳಲು ಪೌಲನಂತೆ ಬಲವಾಗಿ ಉಪಯೋಗಿಸುತ್ತಾರೆ.

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆದವರು ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel