Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.11.2025
Share:

By Village Missionary Movement

Monday, 03-Nov-2025

ಧೈನಂದಿನ ಧ್ಯಾನ(Kannada) – 03.11.2025

 

ಸೈತಾನನ ಶೋಧನೆ 

 

"...ಯೇಸು ಸೈತಾನನಿಂದ ಶೋಧಿಸಲ್ಪಡುವದಕ್ಕಾಗಿ ಆತ್ಮನು ಆತನನ್ನು ಅಡವಿಗೆ ಒಯ್ದನು" - ಮತ್ತಾಯ 4:1

 

ಚೀನಾದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಒಂದು ಅಪರೂಪದ ಮೀನು ಹಿಡಿಯಲ್ಪಟ್ಟಿತು. ಅವರು ತಕ್ಷಣವೇ ಅದನ್ನು ಬೇಯಿಸಿ ತಿಂದರು. ಇದುವರೆಗೂ ಯಾವ ಮೀನಿನಲ್ಲೂ ಇಲ್ಲದಷ್ಟು ರುಚಿ ಅಡಗಿತ್ತು. ಅದನ್ನು ಹೇರಳವಾಗಿ ಹಿಡಿದು 4 ದಿನಗಳ ನಂತರ ದಡಕ್ಕೆ ತಂದರು. ಆ ಮೀನುಗಳನ್ನು ನೀರಿನಲ್ಲಿ ಹಾಕಿ ಜೀವಂತವಾಗಿ ತೆಗೆದುಕೊಂಡು ಬಂದು ಅದನ್ನು ಬೇಯಿಸಿ ತಿಂದಾಗ, ಅದು 4 ದಿನಗಳ ಹಿಂದೆ ಸಮುದ್ರದಲ್ಲಿ ತಿಂದ ಹಾಗೆ ರುಚಿಸಲಿಲ್ಲ. ಆದ್ದರಿಂದ, ಅವರು ಅದನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಮೀನು ತನ್ನ ರುಚಿಯನ್ನು ಕಳೆದುಕೊಳ್ಳಲು ಕಾರಣ, ಅದು ಸ್ವಲ್ಪ ನೀರಿನಲ್ಲಿ ಜೀವಂತವಾಗಿದ್ದರೂ ಸಮುದ್ರದಲ್ಲಿ ಆಟವಾಡುತ್ತಾ ಜಿಗಿಯುತ್ತಾ ಚುರು ಚುರುಕಾಗಿ ಇದ್ದಂತೆ, ಈಗಿಲ್ಲದೆ 4 ದಿನಗಳೂ ಮಂದವಾಗಿದ್ದದರಿಂದ ಅದರ ರುಚಿ ಕಡಿಮೆಯಾಗಿದೆ ಎಂದು ಅವರು ತಿಳಿದುಕೊಂಡರು. ಈಗ, ಆ ಮೀನುಗಳನ್ನು ಚುರು ಚುರುಕಾಗಿ ದಡಕ್ಕೆ ತರಲು, ಆ ಮೀನುಗಳೊಂದಿಗೆ ಅದರ ಶತ್ರುವಾದ ಶಾರ್ಕ್ ಮರಿಗಳನ್ನು ಹಾಕಿ ತೆಗೆದುಕೊಂಡು ಬಂದರು. ಮೀನುಗಳು ಆ ಶಾರ್ಕ್ ಮರಿಗಳಿಗೆ ಹೆದರಿ ಆಕಡೆ ಈಕಡೆ ಓಡಿದ್ದರಿಂದ, ಅವುಗಳನ್ನು ದಡಕ್ಕೆ ತರುವವರೆಗೂ ಅವು ಚುರುಕಾಗಿದ್ದವು. ಆ ಮೀನನ್ನು ತಿಂದಾಗ, ಸಮುದ್ರದ ಮಧ್ಯದಲ್ಲಿ ಬೇಯಿಸಿ ತಿಂದ ಅದೇ ರುಚಿ ಇತ್ತು. ಮಾರುಕಟ್ಟೆಯಲ್ಲಿ ಅದನ್ನು ಮಾರಾಟಮಾಡಿದಾಗ, ಮೀನಿನ ಮೌಲ್ಯ ದಿನೇ ದಿನೇ ಹೆಚ್ಚುತ್ತಿತ್ತು.

 

ನಾವು ಸಹ ಸೈತಾನನಿಂದ ಶೋಧನೆಗೆ ಒಳಗಾಗುವುದು ಒಳ್ಳೆಯದು ಎಂದೇ ಭಾವಿಸಬೇಕು. ನಾವು ಸೈತಾನನಿಂದ ಹಲವು ರೀತಿಯ ಶೋಧನೆಗಳನ್ನು ಎದುರಿಸುತ್ತೇವೆ. ಯೇಸುವಿಗೇ ಸೈತಾನನ ಶೋಧನೆ ಅವಶ್ಯವೆಂದರೆ, ನಮಗೆ ಇನ್ನೆಷ್ಟು ಅವಶ್ಯ. ಹಸಿಯಾದ ಮರಕ್ಕೇ ಪಾಡುಗಳು, ಒಣ ಮರಕ್ಕೆ ಇನ್ನೆಷ್ಟು ಪಾಡುಗಳು ಇರುತ್ತದೆ? ಪಾಡುಗಳನ್ನು ಕಂಡು ನಾವು ಹೆದರಬಾರದು. ಒಬ್ಬ ಭಕ್ತನು ದೇವರ ಬಳಿ ಹೀಗೆ ಕೇಳಿದರಂತೆ, "ಇಂದು ನನಗೆ ಯಾವ ಪಾಡುಗಳನ್ನು ಇಟ್ಟಿದ್ದೀರ?" ಎಂದು. ನಾವೂ ಸಹ ಹಾಗೆಯೇ ಕೇಳಬೇಕು. ನಾವು ಪಾಡುಗಳನ್ನು ಕೆಲಸವೆಂದು ಪರಿಗಣಿಸಬೇಕು. ಇಂದು ನನಗೆ ಯಾವ ಕೆಲಸವಿಟ್ಟೀದ್ದೀರ? ಕೆಲಸಗಾರನು ಕೂಲಿಗೆ ಪಾತ್ರನು. ನಾವು ಕಠಿಣ ಕೆಲಸಗಾರರಾಗಿದ್ದರೆ, ನಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತದೆ.

 

ಯೇಸು ಕ್ರಿಸ್ತನು ಎಲ್ಲರಿಗಿಂತ ಹೆಚ್ಚು ಪಾಡುಗಳನ್ನು ಪಟ್ಟರು. ಶಿಲುಬೆಯ ಮರದಲ್ಲಿ ಅವರನ್ನು ನಾಶಮಾಡಲು ಬಯಸಿದ ಸೈತಾನನು ನಿರಾಶೆಗೊಂಡನು. ಅಪೊಸ್ತಲನಾದ ಪೌಲನು ಹೋದಲ್ಲೆಲ್ಲಾ ಬಳಲಿದನು. ಪೌಲನು ಇದನ್ನು ಶ್ರೇಷ್ಟ ಹೋರಾಟ ಎಂದು ಹೇಳಿ, ಇದಕ್ಕಾಗಿ ನನಗೆ ನೀತಿಯ ಕಿರೀಟವು ಇಡಲ್ಪಟ್ಟಿದೆ. ಎಂದರು.

 

ದೇವರ ರಾಜ್ಯವನ್ನು ಕಟ್ಟುವ ಕೆಲಸಕ್ಕೆ ಹಲವು ವಿಧವಾದ ಮನುಷ್ಯರಿಂದಲೇ ಬಳಲುವಿಕೆಯನ್ನು, ವೇದನೆಯನ್ನು ನೆಹೆಮಿಯನಿಗೆ ನೀಡಿದ ಹಾಗೆ ನಮಗೂ ಕೊಡುತ್ತಾನೆ. ನೆಹೆಮಿಯನು 52 ದಿನಗಳಲ್ಲಿ ಗೋಡೆಯನ್ನು ನಿರ್ಮಿಸಿದಂತೆಯೇ, ನಾವು ಕೂಡ ವಿರೋಧದ ನಡುವೆಯೂ ಕಷ್ಟಪಟ್ಟು ಕೆಲಸ ಮಾಡಿ ಪ್ರತಿಫಲವನ್ನು ಪಡೆಯೋಣ. ಆಮೆನ್. 

- Rev. D.ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಪ್ರತಿ ತಾಲ್ಲೂಕಿನಲ್ಲಿ, ಇಬ್ಬಿಬ್ಬರು ದೆಬೋರಾಳ್ ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel