Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.11.2025
Share:

By Village Missionary Movement

Saturday, 01-Nov-2025

ಧೈನಂದಿನ ಧ್ಯಾನ(Kannada) – 01.11.2025

 

ಅಡಗಿಕೊಂಡಿರಬೇಕು

 

"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು (ದೇವರು) ನಿಮಗೋಸ್ಕರ ಚಿಂತಿಸುತ್ತಾರೆ" - 1 ಪೇತ್ರ 5:7

 

ಒಬ್ಬ ರೈತ ಒಂದು ಗೋಣಿಚೀಲದಲ್ಲಿ ಧಾನ್ಯಗಳನ್ನು ಕೊಟ್ಟಿಗೆಗೆ ಹೊತ್ತುಕೊಂಡು ಹೋದನು. ಚೀಲದೊಳಗೆ ಒದ್ದೆಯಾಗಿದ್ದದರಿಂದ, ಧಾನ್ಯಗಳು ಒತ್ತುತ್ತಿದ್ದವು. ಚೀಲದ ರಂಧ್ರದ ಮೂಲಕ ತಪ್ಪಿಸಿಕೊಳ್ಳೋಣ ಎಂದು ನಿರ್ಧರಿಸಿ ಕೆಲವು ಧಾನ್ಯಗಳು ರಸ್ತೆಗೆ ಬಿದ್ದವು. ಸ್ವಲ್ಪ ಸಮಯದೊಳಗೆ, ಗುಬ್ಬಚ್ಚಿಗಳು ಮತ್ತು ಇಲಿಗಳು ಅದನ್ನು ತಿಂದುಬಿಟ್ಟವು. ಚೀಲಗಳನ್ನು ಕೊಟ್ಟಿಗೆಯಲ್ಲಿ ಹಾಕಿದಾಗ, ಇನ್ನೂ ಕೆಲವು ಧಾನ್ಯಗಳು ಜಾರಿ ನೆಲಕ್ಕೆ ಬಿದ್ದವು. ಅವುಗಳಿಗೆ ಈಗ ಉಸಿರಾಡಲು ಸಾಧ್ಯವಾಯಿತು. ಆದರೆ ಒಬ್ಬ ಕೆಲಸದಾಕೆ ಬಂದು ಅವೆಲ್ಲವನ್ನೂ ಒಟ್ಟುಗೂಡಿಸಿ ಚರಂಡಿಗೆ ಎಸೆದಳು. 

 

ಉಳಿದ ಧಾನ್ಯಗಳಿಗೆ ಒತ್ತಡದಲ್ಲಿ ಉಸಿರುಗಟ್ಟಿದವು. ಎಷ್ಟು ದಿನಗಳು ಈ ಪರಿಸ್ಥಿತಿ ಮುಂದುವರೆಯುತ್ತದೆ ಎಂದೇ ಗೊತ್ತಿಲ್ಲ. ಅವು ಕಣ್ಣೀರು ಸುರಿಸುತ್ತಲೇ ಇದ್ದವು. ಒಂದು ದಿನ ರೈತ ಬಂದು ಧಾನ್ಯದ ಚೀಲವನ್ನು ತೆರೆದು, ಧಾನ್ಯಗಳನ್ನು ಹೊಲಕ್ಕೆ ತೆಗೆದುಕೊಂಡು ಹೋಗಿ ಬಿತ್ತಿದನು. ನೆಲ ಸುಂದರವಾಗಿತ್ತು, ಗಾಳಿ ನಿಧಾನವಾಗಿ ಬೀಸುತ್ತಿತ್ತು. ತಿನ್ನಲು ಆಹಾರ ಮತ್ತು ಕುಡಿಯಲು ನೀರು ಇತ್ತು. ಅವು ಬೆಳೆದು ಹೇರಳವಾದ ಬೆಳೆಗಳನ್ನು ಉತ್ಪಾದಿಸಿದವು. ಅವು ಗಾಳಿಯಲ್ಲಿ ಸಂತೋಷವಾಗಿ ಹೆಮ್ಮೆಯಿಂದ ತೂಗಾಡಿದವು.

 

ಯೇಸುವಿನ ಕೈಕೆಳಗೆ ಇರುವುದು ಸುಲಭವಲ್ಲ. ನೋವುಗಳನ್ನು ಮತ್ತು ಕಷ್ಟದ ಸಮಯಗಳನ್ನು ಸಹಿಸಿಕೊಳ್ಳಬೇಕು. ತಪ್ಪಿಸಿಕೊಳ್ಳಲು ಯೋಚಿಸಿದರೆ, ಅಪಾಯಕಾರಿ ಅಂತ್ಯವನ್ನು ಎದುರಿಸುತ್ತೇವೆ. ಆದರೆ ಯೇಸುವಿನ ಬಲವಾದ ಕೈಗಳಲ್ಲಿ ಅಡಗಿ ಇರುವುದಾದರೆ, ತಕ್ಕ ಕಾಲದಲ್ಲಿ ಅವರು ನಮ್ಮನ್ನು ಮೇಲಕ್ಕೆತ್ತುತ್ತಾರೆ. ಆದ್ದರಿಂದ ತಕ್ಕ ಸಮಯಕ್ಕಾಗಿ ತಾಳ್ಮೆಯಿಂದ ಕಾಯಿರಿ. ಕೀರ್ತನೆ 27:14 "ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು."

 

ನಮ್ಮ ಜೀವನದಲ್ಲಿ, ಕಷ್ಟಗಳು ಮತ್ತು ಪ್ರತಿಕೂಲತೆಗಳು ಪುನಃ ಪುನಃ ಬರುತ್ತಲೇ ಇರುತ್ತವೆ. ಅದು ಹೇಗೆಂದರೆ, ಹೇಗೆ ಬೇಸಿಗೆಕಾಲ, ಮಳೆಗಾಲ ಎಂದು ಋತುಗಳು ಬದಲಾಗುತ್ತದೋ, ಹಾಗೆಯೇ ನಮ್ಮ ಜೀವನದಲ್ಲಿ ಎಲ್ಲವೂ ನಮ್ಮ ಇಚ್ಛೆಯಂತೆ ನಡೆಯುವುದಿಲ್ಲ. ಆದರೆ ನಾವು ಯೇಸುವಿನ ಕೈಗಳಲ್ಲಿ ಅಡಗಿಕೊಂಡಿದ್ದರೆ, ನಾವು ಖಂಡಿತವಾಗಿಯೂ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ. ಇದನ್ನು ಯೋಬನೆಂಬ ಭಕ್ತನು, ಯೋಬ 36:11 ರಲ್ಲಿ, "ಅವರು ವಿಧೇಯರಾಗಿ ಸೇವಿಸಿದರೆ ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿಯೂ ವರುಷ ಗಳನ್ನು ಸುಖದಲ್ಲಿಯೂ ಪೂರೈಸುವರು" ಎಂದು ಹೇಳಿದ್ದಾರೆ.

 

ಹೇಗೆ ಕೆಲವು ಧಾನ್ಯಗಳು ಹೇಗಾದರೂ ತಪ್ಪಿಸಿಕೊಳ್ಳೋಣ ಎಂದು ರಸ್ತೆಯ ಮೇಲೂ ಮತ್ತು ಮನೆಯಲ್ಲೂ ಬಿದ್ದವೋ, ಅವು ನಾಶವಾದವು. ಆದರೆ ತಾಳ್ಮೆಯಿಂದ ಚೀಲದಲ್ಲಿ ಅಡಗಿಕೊಂಡಿದ್ದ ಧಾನ್ಯಗಳು ತಮ್ಮ ದಿನಗಳನ್ನು ಸಂತೋಷದಿಂದ ಅನುಭವಿಸಿದವು. ಯೇಸುವಿಗಾಗಿ ಕಷ್ಟಗಳನ್ನು ಮತ್ತು ನಷ್ಟಗಳನ್ನು ಸಹಿಸಿಕೊಳ್ಳಲು ಇಂದು ನಾವು ನಿರ್ಧರಿಸೋಣ. ಸಮಯ ಬಂದಾಗ, ಯೇಸು ನಮ್ಮನ್ನು ಸಂತೋಷಪಡಿಸುತ್ತಾರೆ. ಆಮೆನ್! ಹಲ್ಲೇಲೂಯಾ! ಕರ್ತನಾದ ಯೇಸು ನಿಮ್ಮನ್ನು ಆಶೀರ್ವದಿಸಲಿ! 

- Rev. S.A.ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲಿ 500 ಮಿಷನರಿಗಳನ್ನು ರೂಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel