By Village Missionary Movement
Wednesday, 29-Oct-2025ಧೈನಂದಿನ ಧ್ಯಾನ(Kannada) – 29.10.2025
ಕರ್ತನ ಹಸ್ತ
"...ನಿನ್ನ ಬಲಗೈ ನನಗೆ ಆಧಾರ;..." - ಕೀರ್ತನೆ 18:35
ಚೀನಾದಲ್ಲಿ ಎರಡು ಪರ್ವತಗಳ ನಡುವೆ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಸಾವಿರಾರು ಅಡಿ ಎತ್ತರದಲ್ಲಿದೆ. ಇದರ ಮೇಲೆ ನಡೆದುಕೊಂಡು ಹೋಗುತ್ತಿದ್ದರೆ ಆಕಾಶದಲ್ಲಿ ನಡೆಯುತ್ತಿರುವಂತಹ ಭಾಸವಾಗುತ್ತಿದೆ ಎಂದು ಅದನ್ನು ನೇರವಾಗಿ ನೋಡಿದ ಅನೇಕರು ಹೇಳುವುದುಂಟು. ಇದನ್ನು ನೋಡಲು ಬಯಸಿದ ವ್ಯಕ್ತಿಯೊಬ್ಬರು ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಹೋದರು. ಆ ಗಾಜಿನ ಸೇತುವೆಯ ಮೇಲೆ ನಡೆಯಲು ಮೇಲೆ ಹೋಗಿ ನೋಡಿದಾಗ, ಅಲ್ಲಿ ಗಾಜು ಇರುವುದೇ ಅವರ ಕಣ್ಣಿಗೆ ಕಾಣಲಿಲ್ಲ. ಆ ಗಾಜಿನ ಮೂಲಕ ಕೆಳಗೆ ನೋಡಿದರೆ, ಒಂದು ವಿಶಾಲವಾದ ಪ್ರಪಾತ ಮಾತ್ರ ಕಾಣಿಸಿತು. ಹೌದು, ಕೆಳಗೆ ಪರ್ವತಗಳು, ಸಸ್ಯಗಳು ಮತ್ತು ಮರಗಳು ಇವುಗಳನ್ನೆಲ್ಲಾ ನೋಡಿದ ಕೂಡಲೇ, ಬಿದ್ದರೆ ಒಂದು ಮೂಳೆಯೂ ಉಳಿಯುವುದಿಲ್ಲ ಎಂದು ಭಾವಿಸಿದ ಅವರು ಅಲ್ಲಿಗೆ ಬರಲು ನಿರಾಕರಿಸಿದರು. ಸ್ನೇಹಿತರ ಬಲವಂತದಿಂದ ಬಂದು ಓರೆಯಾಗಿದ್ದ ತಂತಿಯನ್ನು ಹಿಡಿದು ನಿಧಾನವಾಗಿ ನಡೆದರು.
ಕೆಳಗೆ ಒಂದು ಪ್ರಪಾತವಿದ್ದರೂ, ಮಧ್ಯದಲ್ಲಿ ಒಂದು ಗಾಜು ತನ್ನನ್ನು ಬೆಂಬಲಿಸುತ್ತಿದೆ ಎಂಬ ಭಾವನೆ ಬರಲಿಲ್ಲ. ಏನೇ ಆಗಲಿ ಗಾಜಿನ ಮೇಲೆ ಹೆಜ್ಜೆ ಇಡುತ್ತಿರುವ ಗ್ರಹಿಕೆ ಇದ್ದರೂ, ಕಣ್ಣುಗಳು ಕೆಳಗಿನ ಆಳವನ್ನು ಮಾತ್ರ ನೋಡುತ್ತಿದೆ. ಮನಸ್ಸಿನಲ್ಲಿ ಭಯವೂ ಉದ್ಭವಿಸುತ್ತಿದೆ.
ಆದರೆ ದಾವೀದನು ಹೀಗಿರದೇ ವಿಭಿನ್ನನಾಗಿದ್ದರು. ಕರ್ತನು ದಾವೀದನನ್ನು ರಾಜನನ್ನಾಗಿ ಅಭಿಷೇಕಿಸಿದ ನಂತರವೂ, ದಾವೀದನು ಸುಮಾರು 7 ವರ್ಷಗಳ ಕಾಲ ಅಲೆಮಾರಿಯಂತೆ ಅಲೆದಾಡಿದರು. ಅವರು ಕಾಡುಗಳು, ಗುಹೆಗಳು ಮತ್ತು ಅನ್ಯದೇಶಗಳಲ್ಲಿ ಅಲೆದಾಡುತ್ತಾರೆ. ಅರಸನಾದ ಸೌಲನು ದಾವೀದನ ಪ್ರಾಣವನ್ನು ತೆಗೆದುಬಿಡಬೇಕು. ತನ್ನ ಮಗ ರಾಜನಾಗಬೇಕೆಂದು ಬಯಸುತ್ತಾರೆ. ದಾವೀದನು ಅರಣ್ಯದಲ್ಲಿ ಅಲೆದಾಡುತ್ತಾರೆ. ಮನಸ್ಸಿನಲ್ಲಿ ವೇದನೆ, ದೇಹದಲ್ಲಿ ಬಲಹೀನತೆ, ಕೆಲವೊಮ್ಮೆ ಸೌಲನು ಬೆನ್ನಟ್ಟುತ್ತಿದ್ದಾನೆ ಪ್ರಾಣವೇ ಹೋಗಿಬಿಡುವಂತಹ ಪರಿಸ್ಥಿತಿ. ಆದರೂ ದಾವೀದನು, "ನಿನ್ನ ಬಲಗೈ ನನ್ನನ್ನು ಎತ್ತಿಹಿಡಿಯುತ್ತದೆ" ಎಂದು ಹೇಳುತ್ತಾರೆ. ಯೆಹೂದದ ಅರಣ್ಯದಲ್ಲಿದ್ದಾಗ, "ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸಿರುವದು; ನಿನ್ನ ಬಲಗೈ ನನಗೆ ಆಧಾರವಾಗಿರುವದು" (ಕೀರ್ತನೆ 63:8) ಎಂದು ಹೇಳುತ್ತಾರೆ.
ಪ್ರಿಯರೇ, ನಾವು ಕೂಡ ಆ ಗಾಜಿನ ಸೇತುವೆಯ ಮೇಲೆ ನಡೆಯುತ್ತಿದ್ದಂತೆ ನಮ್ಮ ಜೀವನವನ್ನು ನಡೆಸುತ್ತಿದ್ದೇವೆ. ನಮ್ಮ ಕಣ್ಣುಗಳು ನಮ್ಮ ಕೆಳಗಿರುವ ತೊಂದರೆ ಮತ್ತು ವಿನಾಶವನ್ನು ನೋಡುತ್ತಿದೆಯೇ? ಕಣ್ಣುಗಳಿಂದ ನೋಡುವವುಗಳನ್ನು ಹಾಗೆಯೇ ನಂಬಿಬಿಡದೇ, ಆತ್ಮದಲ್ಲಿ ಕ್ರಿಯೆ ಮಾಡುವ ದೇವರ ಪ್ರಸನ್ನತೆಯನ್ನು ಅರಿತುಕೊಂಡು ಮುಂದುವರಿಯಿರಿ. ಕರ್ತನ ಕೈಯನ್ನು ಹಿಡಿದು ಆತನನ್ನು ಮಾತ್ರ ನಂಬಿ ದಾವೀದನಂತೆ ಭಯವಿಲ್ಲದೆ ಮುಂದುವರಿಯಿರಿ. ನಮ್ಮನ್ನು ಬೀಳದಂತೆ ತಡೆಯುವ ಕನ್ನಡಿಯಂತೆ ನಮ್ಮನ್ನು ರಕ್ಷಿಸುವ ದೇವರ ಕೈಯನ್ನು ನಮ್ಮ ಕಣ್ಣುಗಳು ನೋಡಲಿ. ದೇವರು ನಿಮಗಾಗಿ ಇಟ್ಟಿರುವ ಆಶೀರ್ವಾದಗಳನ್ನು ಖಂಡಿತವಾಗಿಯೂ ಸ್ವತಂತ್ರಿಸಿಕೊಳ್ಳುತ್ತೀರಿ.
- Bro. ಸ್ಟಾಲಿನ್ ರಾಜಾ
ಪ್ರಾರ್ಥನಾ ಅಂಶ:
ಪ್ರತಿ ತಾಲ್ಲೂಕಿನಲ್ಲಿ ಸುವಾರ್ತೆ ಕೂಟಗಳು ನಡೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482