Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.06.2021
Share:

By Village Missionary Movement

Saturday, 05-Jun-2021

ಧೈನಂದಿನ ಧ್ಯಾನ(Kannada) – 05.06.2021

 

ಅಸಾಧಾರಣ ಅದ್ಭುತ

 

“ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ;...” - ಪ್ರಸಂಗಿ 3:11

 

ಇದು ವಯಸ್ಸಾದ ಸೇವಕರೊಬ್ಬರು ಹಂಚಿಕೊಂಡ ಸಾಕ್ಷಿಯಾಗಿದೆ. ಅವರ ಏಕೈಕ ಪುತ್ರ ತನ್ನ ಹನ್ನೆರಡನೇ ತರಗತಿ ಮುಗಿಸಿದ್ದ. ಚಿಕ್ಕ ವಯಸ್ಸಿನಿಂದಲೇ ಚೆನ್ನಾಗಿ ಓದುವವನು. ಆದ್ದರಿಂದ ಡಾಕ್ಟರ್ ಸೀಟ್ ಸಿಗುತ್ತದೆ ಎಂದು ಅವರು ನಿರೀಕ್ಷಿಸುತ್ತಿದ್ದರು. MBBS ಸೀಟು ಸಿಗದೇ ಹೋದದ್ದರಿಂದ ಮಗನು ಬಹಳ ಸೋತು ಹೋಗಿ, “ನನ್ನ ಪೋಷಕರು ಮಿಷನರಿಗಳಾಗಿ ಬಹಳ ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ದೇವರು ಏಕೆ ಈ ವೈದ್ಯಕೀಯ ಸೀಟನ್ನು ನನಗೆ ಸಿಗುವಂತೆ ಮಾಡಲಿಲ್ಲ ” ಎಂದು ಬಹಳ ನೊಂದುಕೊಂಡನು. ಆಗ ಅವರ ತಂದೆ ದೇವರು ಏನು ಮಾಡಿದರೂ ಒಳ್ಳೆಯದಕ್ಕಾಗಿಯೇ ಮಾಡುತ್ತಾರೆ ಎಂದು ಹೇಳಿದರು. ಆದರೆ ಔಷಧಿಗಳ ಸಂಶೋಧನಾ ಕ್ಷೇತ್ರದಲ್ಲಿ ಅವರಿಗೆ ಸೀಟು ಸಿಕ್ಕಿತು. ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಕೆಲಸಕ್ಕೆ ಸೇರಿದರು. ಹಂತ ಹಂತವಾಗಿ ಪರೀಕ್ಷೆಗಳನ್ನು ಬರೆದು ಪ್ರಸ್ತುತ ವಿದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಔಷಧಿಗಳಿಗೆ ಸಹಿ ಮತ್ತು ಅನುಮೋದನೆ ನೀಡುವ ಕ್ಷೇತ್ರದಲ್ಲಿ ದೊಡ್ಡ ಅಧಿಕಾರಿಯಾಗಿ ಡೆಲ್ಲಿಯಲ್ಲಿ ಇದ್ದಾರೆ. ಭಾನುವಾರದಂದು ಕೂಡ ಒಂದು ಕುಟುಂಬ ಪ್ರಾರ್ಥನಾ ಕೂಟವನ್ನು ನಡೆಸಿ ಸೇವೆ ಮಾಡುತ್ತಿದ್ದಾರೆ. ತನ್ನ ತಂದೆಯ ಬಳಿ, “ MBBS ಸೀಟು ಸಿಗದಂತೆ ದೇವರು ಒಳ್ಳೆಯದನ್ನೇ ಮಾಡಿದ್ದಾರೆ. ನನಗೆ ಆ ಸೀಟು ಸಿಕ್ಕಿದ್ದರೆ ಒಂದು ಸಾಮಾನ್ಯ ವೈದ್ಯನಾಗಿ ಮಾತ್ರ ಇರುತ್ತಿದ್ದೆ. ಆದರೆ ಈಗಲಾದರೋ M.D, M.S ಓದಿರುವ ಹಿರಿಯ ವೈದ್ಯರು ನನ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಟರ್ವ್ಯೂ ಗೆ ಬರುತ್ತಿದ್ದಾರೆ. ದೇವರು ಯಾವಾಗಲೂ ಯಾರ ಜೀವನದಲ್ಲಿಯೂ ತಪ್ಪು ಮಾಡುವುದೇ ಇಲ್ಲ. ಅವರು ಉತ್ತಮವಾದದ್ದನ್ನೇ ಮಾಡುತ್ತಾರೆ” ಎಂದರು.

 

ಮತ್ತಾಯ 4 ನೇ ಅಧ್ಯಾಯದಲ್ಲಿ ಸೈತಾನನು ಯೇಸುವನ್ನು ನೀವು ದೇವರ ಮಗನಾಗಿದ್ದರೆ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆ ಕೊಡು, ಇಲ್ಲಿಂದ ಕೆಳಕ್ಕೆ ಧುಮುಕು ಎಂದು ಸೈತಾನನು ಯೇಸುವನ್ನು ಶೋಧಿಸುತ್ತಾನೆ. ನಾವೂ ಕೂಡ ದೇವರಿಗೆ ಮೆಚ್ಚಿಕೆಯಾಗಿ ತಾನೇ ಜೀವಿಸುತ್ತಿದ್ದೇನೆ, ಸೇವೆಯನ್ನೇ ತಾನೇ ಮಾಡುತ್ತಿದ್ದೇನೆ. ಆದರೂ ಯಾಕೆ ಎದುರು ನೋಡುತ್ತಿರುವ ಪ್ರಕಾರ ಕಾರ್ಯಗಳು ನಡೆಯುತ್ತಿಲ್ಲ ಎಂದು ಸೈತಾನನು ನಾವು ಸೋತು ಹೋಗುವಂತೆ ಮಾಡಿ, ಅಡ್ಡಹಾದಿಯನ್ನು ನೆನಪಿಸುತ್ತಾನೆ. ಆಗ ಯೇಸು, ಮನುಷ್ಯನು ರೊಟ್ಟಿಯಿಂದ (ನಾವು ನಿರೀಕ್ಷಿಸುವ ಸಂಗತಿಗಳಿಂದ) ಮಾತ್ರವಲ್ಲ, ದೇವರ ಬಾಯಿಂದ ಹೊರಬರುವ ಪ್ರತಿಯೊಂದು ಮಾತಿನಿಂದಲೂ (ನಾವು ನಿರೀಕ್ಷಿಸದ ಸಂಗತಿಗಳ ಮೂಲಕವೂ) ಅದ್ಭುತ ಮಾಡಲು ಸಾಧ್ಯ.

 

ಪ್ರೀತಿಯ ದೇವರ ಮಕ್ಕಳೇ! ನಾವು ನಿರೀಕ್ಷಿಸಿದಂತೆ ಕೆಲಸಗಳು ನಡೆಯದಿದ್ದಾಗ, ಅದು ನನ್ನ ಇಷ್ಟವಲ್ಲ ದೇವರ ಇಷ್ಟವೇ ಈಡೇರುತ್ತಿದೆ ಎಂಬುದನ್ನು ಪೂರ್ಣ ಹೃದಯದಿಂದ ನಂಬಿ ಸ್ವೀಕರಿಸಿರಿ. ಅವರೇ ನಮ್ಮ ಜೀವನದ ಯಜಮಾನ! ನಾವು ನಮ್ಮವರಲ್ಲ ನಾವು ಆತನ ಆಸ್ತಿ! ಅವರು ಯಾರೊಬ್ಬರ ಜೀವನದಲ್ಲಿಯೂ ಎಂದಿಗೂ ತಪ್ಪು ಮಾಡುವುದಿಲ್ಲ, ಎಂದಿಗೂ ವಿಳಂಬ ಮಾಡುವುದಿಲ್ಲ ಆದರೆ ಉತ್ತಮವಾದದ್ದನ್ನು ನೀಡುವುದು ಖಚಿತ! ನಿರೀಕ್ಷೆಯೊಂದಿಗೆ ತಾಳ್ಮೆಯಿಂದ ಓಡೋಣ! ಹಲ್ಲೇಲೂಯ.

- L. ಅಲಗರಸಾಮಿ

 

ಪ್ರಾರ್ಥನಾ ಅಂಶ:-

ನಮ್ಮ ಸೇವೆಯನ್ನು ಪ್ರಾರ್ಥನೆಯಿಂದಲೂ, ಕಾಣಿಕೆಗಳಿಂದಲೂ ಬೆಂಬಲಿಸುತ್ತಿರುವ ಪಾಲುದಾರರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş