Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.10.2025
Share:

By Village Missionary Movement

Monday, 27-Oct-2025

ಧೈನಂದಿನ ಧ್ಯಾನ(Kannada) – 27.10.2025

 

ನಿರೀಕ್ಷಿತ ಪ್ರೀತಿ 

 

"ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ನಾವು ಒಬ್ಬರಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ,..." - 1 ಯೋಹಾನ 1:7

 

ಒಬ್ಬ ಸಹೋದರಿ ತನ್ನ ಬಾಲ್ಯದಿಂದಲೂ ಯೇಸುವನ್ನು ಅರಿತಿದ್ದದರಿಂದ ತನಗೆ ಬೇಕಾದುದನ್ನು ಯೇಸುವಿನ ಬಳಿ ಕೇಳುತ್ತಿದ್ದಳು. ಅವಳು ಬೆಳೆದ ನಂತರ ಯೇಸುವನ್ನು ಬಿಟ್ಟು ಲೋಕದ ಮಾರ್ಗದಲ್ಲಿ ಹೋಗಿ ಬಿಟ್ಟಳು. ಹಾಗಿರುವಾಗ, ತನ್ನ ಹದಿಹರೆಯದ ವರ್ಷಗಳನ್ನು ತಲುಪಿದಾಗ, ಅವಳು ಅನಾರೋಗ್ಯಕ್ಕೆ ಒಳಗಾದಳು. ಅವಳು ಬದುಕುಳಿಯುವುದಿಲ್ಲ ಎಂದು ವೈದ್ಯರು ಹೇಳಿಬಿಟ್ಟು ಕೈ ಬಿಟ್ಟು ಬಿಟ್ಟರು. ಆದರೆ ಯೇಸು ಅವಳನ್ನು ಕೈಬಿಡಲಿಲ್ಲ, ಆದರೆ ಅವಳನ್ನು ಹುಡುಕುತ್ತಾ ಹೋಗಿ ಅವಳಿಗೆ ಸಂಪೂರ್ಣ ಆರೋಗ್ಯವನ್ನು ಕೊಟ್ಟರು. ಯೇಸುವಿನಿಂದ ಉಪಕಾರ ಹೊಂದಿದ ಅವಳೋ ಪುನಃ ಲೋಕದ ಮಾರ್ಗಗಳಿಗೆ ಹಿಂತಿರುಗಿ ಅನೇಕ ನಿರಾಶೆಗಳು ಮತ್ತು ಅವಮಾನಗಳನ್ನು ಅನುಭವಿಸಿದಂತಹ ಸ್ಥಿತಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಯೇಸುವಿನ ಮುಖ ಅವಳಿಗೆ ಕಾಣಿಸಿತು. ಅವಳು ಬಾಲ್ಯದಿಂದಲೂ ತೋರಿಸಿದ ಪ್ರೀತಿಯನ್ನು ನೆನೆಸಿ ಅತ್ತು ಕ್ಷಮೆ ಕೇಳಿದಳು. ಇಂದಿಗೂ ಸೇವೆ ಮಾಡುತ್ತಿದ್ದಾಳೆ. ಅವಳು ಹಲವು ಬಾರಿ ಹಿಂಜಾರಿಹೋದರೂ, ಕರ್ತನು ಅವಳ ಮೇಲೆ ಇಟ್ಟಿದ್ದ ಪ್ರೀತಿ ಬದಲಾಗಲಿಲ್ಲ. 

 

ಇದೇ ರೀತಿ, ಸತ್ಯವೇದದಲ್ಲಿ, ಯೇಸುವನ್ನು ಶಿಲುಬೆಗೇರಿಸುವುದಕ್ಕೆ ಮೊದಲು, ಅವರು ತನ್ನ ಶಿಷ್ಯರಿಗೆ ತಾನು ಸತ್ತು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದೇಳುವುದರ ಬಗ್ಗೆ ಹೇಳಿದರು. ಆಗ ಪೇತ್ರನು, “ಎಲ್ಲರೂ ನಿಮ್ಮ ನಿಮಿತ್ತ ಎಡುವುವರು, ಆದರೆ ನಾನು ಎಡವುವುದಿಲ್ಲ” ಎಂದು ಹೇಳಿದರು. ಅದಕ್ಕೆ ಯೇಸು, “ಈ ರಾತ್ರಿ ಕೋಳಿ ಕೂಗುವ ಮೊದಲು, ನೀನು ನನ್ನನ್ನು ಮೂರು ಬಾರಿ ನಿರಾಕರಿಸುವೆ” ಎಂದು ಹೇಳಿದರು. ಪೇತ್ರನು, “ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ” ಎಂದು ಹೇಳಿದರು. ಯೇಸುವನ್ನು ಶಿಲುಬೆಗೇರಿಸಿದಾಗ, ಪೇತ್ರನು ಅರಮನೆಯ ಅಂಗಳದಲ್ಲಿ ಕುಳಿತಿದ್ದನು. ದಾಸಿಯರಲ್ಲಿ ಒಬ್ಬಳು ಪೇತ್ರನನ್ನು ನೋಡಿ ನೀನು ಸಹ ಆ ನಜರೇತಿನವನಾದ ಯೇಸುವಿನ ಕೂಡ ಇದ್ದವನು ಅಂದಳು. ಅದಕ್ಕೆ ಪೇತ್ರನು ನೀನು ಏನನ್ನುತ್ತೀಯೋ ನನಗೆ ಗೊತ್ತಿಲ್ಲ ಎಂದು ನಿರಾಕರಿಸಿದರು. ಅದೇ ರೀತಿ, ಪೇತ್ರನು ಯೇಸುವನ್ನು ಮೂರು ಬಾರಿಯೂ ನಿರಾಕರಿಸಿದರು. ಕೋಳಿ ಕೂಗಿದಾಗ, ಅವರು ಯೇಸು ಹೇಳಿದ್ದನ್ನು ನೆನಪಿಸಿಕೊಂಡು, ಬಹಳವಾಗಿ ಅತ್ತು, ಕ್ಷಮೆ ಕೇಳಿ ನಂತರ ಕರ್ತನಿಂದ ಬಹು ಬಲವಾಗಿ ಉಪಯೋಗಿಸಲ್ಪಟ್ಟರು.

 

ಪ್ರಿಯ ಸಹೋದರ! ಸಹೋದರಿಯೇ! ಅದೇ ರೀತಿ, ದೇವರು ನಮ್ಮ ಜೀವನದಲ್ಲಿ ಅನೇಕ ಅದ್ಭುತಗಳನ್ನು ಮಾಡಿದ್ದಾರೆ. ಆದರೆ ನಾವೋ ಅದನ್ನೆಲ್ಲಾ ಮರೆತು ಕೆಲವೊಮ್ಮೆ ಆತನನ್ನು ನಿರಾಕರಿಸುತ್ತೇವೆ. ಆದರೂ ಆತನು ನಮ್ಮ ಮೇಲಿನ ಪ್ರೀತಿಯಿಂದಾಗಿ ನಮ್ಮನ್ನು ವಿಮೋಚಿಸಲು ಶಿಲುಬೆಯ ಮೇಲೆ ಮರಣ ಹೊಂದಿದರು. ಸ್ನೇಹಿತನ ಪ್ರೀತಿ ಮಸುಕಾಗಬಹುದು, ತಂದೆಯ ಪ್ರೀತಿ ವಿಫಲವಾಗಬಹುದು, ಆದರೆ ದೇವರ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ನಮ್ಮ ಅಮೂಲ್ಯವಾದ ಆತ್ಮವು ದೇವರಿಗೇ ಸ್ವಂತ. ನಾವು ದೇವರ ಬಳಿಗೆ ಹಿಂತಿರುಗಿದಾಗ, ಆತನು ನಮಗೆ ನಿತ್ಯ ಜೀವವನ್ನು ನೀಡುತ್ತಾರೆ. ನಾವು ಆತನೊಂದಿಗೆ ಪರಲೋಕದಲ್ಲಿ ಶಾಶ್ವತವಾಗಿ ವಾಸಿಸುತ್ತೇವೆ. ಆದ್ದರಿಂದ, ಕ್ರಯವನ್ನು ಕೊಟ್ಟು ಯಾವುದೇ ನಿರೀಕ್ಷೆಗಳಿಲ್ಲದೆ ನಮ್ಮನ್ನು ವಿಮೋಚಿಸಿ, ನಮಗಾಗಿ ತನ್ನ ಕೊನೆಯ ಹನಿ ರಕ್ತವನ್ನು ಸಹ ಸುರಿಸಿದ ಯೇಸುವನ್ನು ಪ್ರೀತಿಸಲು ಇಂದು ನಾವು ಕರೆಯಲ್ಪಟ್ಟಿದ್ದೇವೆ.

- C. ಸಿಂಧು

 

ಪ್ರಾರ್ಥನಾ ಅಂಶ:

50,000 ಹಳ್ಳಿಗಳಿಗೆ ಸುವಾರ್ತೆ ಎಂಬ ಯೋಜನೆಯಲ್ಲಿ ನಮ್ಮೊಂದಿಗೆ ಸೇರಿ ಕಾರ್ಯ ಮಾಡುತ್ತಿರುವವರನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel