Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.10.2025
Share:

By Village Missionary Movement

Sunday, 26-Oct-2025

ಧೈನಂದಿನ ಧ್ಯಾನ(Kannada) – 26.10.2025

 

ಡಕೋಟ ಸೈಕಲ್ ಮತ್ತು ಮಾಲೀಕರು

 

"...ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ." - ರೋಮಾ 8:28

 

"ಕ್ಲಿಕ್"... "ಕ್ಲಿಕ್"... ಎಂಬ ಭಯಂಕರವಾದ ಶಬ್ದ ಕೇಳಿದ ಕೂಡಲೇ, ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಮತ್ತು ವಯಸ್ಕರು ಎಲ್ಲರೂ ನಗುತ್ತಿದ್ದರು ಬಾಲು ಗೆ ತುಂಬಾ ಕೋಪ ಬಂತು. ತನ್ನ ತಂದೆಯನ್ನು ನೋಡಿ, ಅಪ್ಪಾ ಈ ಸೈಕಲ್ ಅನ್ನು ಬದಲಾಯಿಸಲ್ವಾ? ಮಾನ ಹೋಗುತ್ತಿದೆ ಎಂದು ಬೈದನು. ಯಾರು ಆ ಬಾಲು? ಏನು ನಡೆಯಿತು? ಎಂದು ತಾನೇ ಯೋಚಿಸುತ್ತಿದ್ದೀರ ಪುಟಾಣಿಗಳೇ! ಬನ್ನಿ ಕಥೆಯೊಳಗೆ ಹೋಗೋಣ.

 

ಎಂಟನೇ ತರಗತಿಯಲ್ಲಿ ಓದುತ್ತಿರುವ ಬಾಲು, ತನ್ನ ಹೆತ್ತವರೊಂದಿಗೆ ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದ. ಬಾಲುವಿನ ತಂದೆ ಹಳೆಯ ಕಬ್ಬಿಣ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ತನ್ನ ಸೈಕಲ್ ನಲ್ಲಿ ಹಾಕಿಕೊಂಡು ವ್ಯಾಪಾರ ಮಾಡಿ ತನ್ನ ಕುಟುಂಬವನ್ನು ನಡೆಸುತ್ತಾ ಬಂದರು. ಆ ಸೈಕಲ್ ತುಂಬಾ ಹಳೆಯದಾಗಿತ್ತು. ಅದಕ್ಕೆ ಜೋಡಿಸಲಾದ ಗಂಟೆ ಇನ್ನೂ ಕೆಟ್ಟದಾಗಿತ್ತು. ಗಂಟೆಯನ್ನು ಒತ್ತಿದರೆ, ಇಡೀ ಹಳ್ಳಿಗೆ ಆ ಶಬ್ದ ಕೇಳುತ್ತಿತ್ತು. ಆ ಶಬ್ದ ಕೇಳಿದಾಗ ಎಲ್ಲರೂ ನಗುತ್ತಿದ್ದರು. ಬಾಲು ತನ್ನ ತಂದೆಗೆ, "ಅಪ್ಪಾ, ದಯವಿಟ್ಟು ಒಳ್ಳೆಯ ಸೈಕಲ್ ತೆಗೆದುಕೊಳ್ಳಿ" ಎಂದನು. ತಂದೆಯೋ, ನನ್ನ ಬಳಿ ಈಗ ಸೈಕಲ್ ತೆಗೆದುಕೊಳ್ಳಲು ಸಾಕಷ್ಟು ಹಣವಿಲ್ಲ. ಆದರೆ ಯೇಸಪ್ಪ, ಖಂಡಿತವಾಗಿಯೂ ಕೊಡುತ್ತಾರೆ ಎಂದರು.

 

ಮರುದಿನ ಬೆಳಿಗ್ಗೆ, ಬಾಲುವಿನ ತಂದೆ ವ್ಯಾಪಾರಕ್ಕೆ ಹೋಗುವ ದಾರಿಯಲ್ಲಿರುವ ಆಲಯಕ್ಕೆ ಹೋಗಿ, ಯೇಸಪ್ಪ, ಇಂದು ನನಗೆ ನೂರು ರೂಪಾಯಿ ವ್ಯಾಪಾರ ಆಗಬೇಕು. ಹಾಗಾಯಿತೆಂದರೆ ನಿಮಗೆ ಹತ್ತು ರೂಪಾಯಿ ದಶಮಾಂಶ ಕೊಡುತ್ತೇನೆ" ಎಂದು ಹೇಳಿ ಹೊರಗೆ ಬಂದರು. ಬಂದು ನೋಡಿದಾಗ, ಸೈಕಲ್ ಕಾಣೆಯಾಗಿತ್ತು. ತಂದೆ ಆಘಾತಕ್ಕೊಳಗಾದರು. ಆದಾಯಕ್ಕಾಗಿ ಇದ್ದ ಒಂದು ಸೈಕಲ್ ಕೂಡ ಹೀಗೆ ಕಾಣದೇ ಹೋಯಿತಲ್ಲಾ, , ಯೇಸಪ್ಪಾ, ನಾನು ಪ್ರಾರ್ಥನೆ ಮಾಡಲು ತಾನೇ ಹೋಗಿದ್ದೆ. ಹೀಗಾಯಿತಲ್ಲಾ ಎಂದು ಗೊಂದಲಕ್ಕೊಳಗಾಗಿ ಮನೆಗೆ ಹೋದರು. ಅವರ ಹೆಂಡತಿ, "ನಿಮ್ಮ ಸೈಕಲ್ ಎಲ್ಲಿ?" ಎಂದು ಕೇಳಲು, ಅವರು ನಡೆದದ್ದನ್ನೆಲ್ಲಾ ಹೇಳಿದರು. ಎರಡು ದಿನಗಳ ನಂತರ, ಅವರು ಅಂಗಡಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅವರ ಸೈಕಲ್‌ ಬೆಲ್ ಶಬ್ಧವನ್ನು ಕೇಳಿ ಹಿಂತಿರುಗಿ ನೋಡಿದಾಗ ಅವರ ಸೈಕಲ್ ಅನ್ನು ಒಬ್ಬ ಕಳ್ಳ ಓಡಿಸಿಕೊಂಡು ಬಂದನು. ಅವರು ಅವನನ್ನು ನಿಲ್ಲಿಸಿ, "ಇದು ನನ್ನ ಸೈಕಲ್" ಎಂದು ಹೇಳಿದರು. ಅವನು ಅದನ್ನು ನೀಡಲು ನಿರಾಕರಿಸಿದಾಗ, ಇಬ್ಬರ ನಡುವೆ ಜಗಳವಾಯಿತು. ಪೊಲೀಸರು ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದರು. ಒಬ್ಬ ಪೊಲೀಸ್, "ನಾವು ಬಹಳ ದಿನಗಳಿಂದ ಈ ಕಳ್ಳನನ್ನು ಹುಡುಕುತ್ತಿದ್ದೆವು. ಈಗ, ನಿಮ್ಮ ಮೂಲಕ ಅವನು ಸಿಕ್ಕಿಬಿದ್ದಿದ್ದಾನೆ. ಅದಕ್ಕಾಗಿ ನಿಮಗೊಂದು ವಿಶೇಷ ಬಹುಮಾನ ನೀಡುತ್ತೇವೆ ಎಂದು ಹೇಳಿ, 5000 ರೂಪಾಯಿಗಳನ್ನು ನೀಡಿದರು. ಅವರು ಸಂತೋಷದಿಂದ ಅದನ್ನು ಸ್ವೀಕರಿಸಿ ನೇರವಾಗಿ ಆಲಯಕ್ಕೆ ಹೋಗಿ, ದಶಮಾಂಶವಾಗಿ 500 ರೂಪಾಯಿಗಳನ್ನು ಸಲ್ಲಿಸಿ ಒಂದು ಹೊಸ ಸೈಕಲ್ ಅನ್ನು ತೆಗೆದುಕೊಂಡು ಯೇಸಪ್ಪನಿಗೆ ಕೃತಜ್ಞತೆ ಸಲ್ಲಿಸಿದರು. 

- Mrs. -ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel