By Village Missionary Movement
Friday, 24-Oct-2025ಧೈನಂದಿನ ಧ್ಯಾನ(Kannada) – 24.10.2025
ಹೆತ್ತವರನ್ನು ಗೌರವಿಸೋಣ
"...ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು" - ವಿಮೋ. 20:12
ನಾನು ಅಡುಗೆ ಕೆಲಸ ಮಾಡುತ್ತಿದ್ದ ದಿನಗಳಲ್ಲಿ, ಚಹಾ ತರುತ್ತಿದ್ದ ಒಬ್ಬ ಯುವಕ ಯಾವಾಗಲೂ ತನ್ನ ಹೆತ್ತವರ ಬಗ್ಗೆ ದೂರು ಹೇಳುತ್ತಿದ್ದ. ಒಮ್ಮೆ ನಾನು ಅವನಿಗೆ, ದೇವರ ಮಕ್ಕಳು ಎಂದಿಗೂ ದೇವರು ಕೊಟ್ಟ ಹೆತ್ತವರ ಬಗ್ಗೆ ಮತ್ತೊಬ್ಬರ ಬಳಿ ಕೆಟ್ಟದಾಗಿ ಮಾತನಾಡಬಾರದು, ಹೆತ್ತವರಿಗಾಗಿ ಕರ್ತನಿಗೆ ಧನ್ಯವಾದ ಹೇಳು ಎಂದು ಹೇಳಿದೆ. ಒಂದು ವೇಳೆ ಅವರು ನಿನ್ನನ್ನು ಕಷ್ಟಪಡಿಸಿದರೂ, ಕರ್ತನು ಅವರನ್ನು ಪ್ರೀತಿಯುಳ್ಳವರಾಗಿ ಮಾರ್ಪಡಿಸುತ್ತಾರೆ ಎಂದು ಹೇಳಿದೆ. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸದ ಆ ಯುವಕ ಕೆಲವೇ ದಿನಗಳಲ್ಲಿ ತನ್ನದೇ ಆದ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದು ನನಗೆ ದುಃಖವಾಯಿತು. ಪೋಷಕರಿಲ್ಲದ ಅನೇಕ ಮಕ್ಕಳು ತುಂಬಾ ಕಷ್ಟಗಳನ್ನು ಅನುಭವಿಸುತ್ತಾರೆ. ಅವರು ತಿನ್ನಲು ಆಹಾರವಿಲ್ಲದೆ, ಶಿಕ್ಷಣವಿಲ್ಲದೆ, ಧರಿಸಲು ಉತ್ತಮ ಬಟ್ಟೆಗಳಿಲ್ಲದೆ ಬಳಲುತ್ತಿದ್ದಾರೆ. ಆದರೆ ಈ ಯುವಕನು 35 ವರ್ಷಗಳ ಕಾಲ ಸುರಕ್ಷಿತವಾಗಿ ಬೆಳೆಸಿದ ತನ್ನ ಹೆತ್ತವರನ್ನು ಹೇಗೆ ಗೌರವಿಸಬೇಕೆಂದು ತಿಳಿದಿಲ್ಲವಲ್ಲಾ ಎಂದು ಮನಸ್ಸಿಗೆ ತುಂಬಾ ಬೇಸರವಾಯಿತು. ನಾವು ಹೆತ್ತವರನ್ನು ಸಂತೋಷಪಡಿಸುತ್ತಿದ್ದೇವೆಯೇ? ಅಥವಾ ಅಸಡ್ಡೆ ಮಾಡುತ್ತಿದ್ದೇವೆಯೇ? “ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನ ದೀಪವು ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವದು" ಎಂದು (ಜ್ಞಾನೋಕ್ತಿ 20:20) ಹೇಳುತ್ತಿದೆ.
ನೋಹನ ಮಕ್ಕಳಲ್ಲಿ ಒಬ್ಬನು ತನ್ನ ತಂದೆಯ ಬೆತ್ತಲೆಯನ್ನು ನೋಡಿ ತನ್ನ ಸಹೋದರರೊಂದಿಗೆ ಅಪಹಾಸ್ಯದಿಂದ ಮಾತನಾಡಿದನು. ಇದು ಕರ್ತನ ದೃಷ್ಟಿಯಲ್ಲಿ ಪಾಪವಾಗಿತ್ತು. ದೇವರು ಅವನನ್ನು ಶಪಿಸಿದರು. ಆದರೆ ನೋಹನ ಇನ್ನೊಬ್ಬ ಮಗನು ತನ್ನ ತಂದೆಯ ಬೆತ್ತಲೆಯನ್ನು ಮುಚ್ಚಿದನು. ಕರ್ತನು ಅವನನ್ನು ಆಶೀರ್ವದಿಸಿದರು. ನಾವೂ ನಮ್ಮ ಹೆತ್ತವರನ್ನು ಶಪಿಸಬಾರದು. ನಾವು ಅವರನ್ನು ಗೌರವಿಸಬೇಕು. ನಮ್ಮ ಹೆತ್ತವರು ಜೀವಂತವಾಗಿರುವಾಗ ಅವರ ಆಸ್ತಿಯನ್ನು ಬರೆದುಕೊಡುವಂತೆ ಕೇಳುವ ಮೂಲಕ ನಾವು ಅವರನ್ನು ಪೀಡಿಸುವ ಮಕ್ಕಳಾಗಬಾರದು. (ಜ್ಞಾನೋಕ್ತಿ 28:24) ರಲ್ಲಿ "ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು ಕೇಡಿಗನಿಗೆ ಜೊತೆಗಾರನು" ಎಂದು ನಾವು ನೆನಪಿನಲ್ಲಿಡಬೇಕು. ನಮ್ಮ ಹೆತ್ತವರು ನಮಗೆ ಸಹಾಯ ಮಾಡದಿದ್ದರೂ, ಕರ್ತನು ತಕ್ಕ ಸಮಯದಲ್ಲಿ ನಮ್ಮನ್ನು ಹೆಚ್ಚಿಸುತ್ತಾರೆ. ನಾವು ನಂಬಿಕೆಯೊಂದಿಗೆ ಇರೋಣ. "ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು." (ಕೀರ್ತನೆ 27:10)
ಪ್ರಿಯ ಮಕ್ಕಳೇ! ಕರ್ತನು ನಮಗೆ ಕೊಟ್ಟಿರುವ 10 ಆಜ್ಞೆಗಳಲ್ಲಿ, ಕೇವಲ ಒಂದು ಆಜ್ಞೆ ಮಾತ್ರ ಆಶೀರ್ವಾದದೊಂದಿಗೆ ಕೂಡಿದೆ. ಹೌದು, ಭೂಮಿಯಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು. ಹೌದು, ಹೆತ್ತವರನ್ನು ಗೌರವಿಸಿ ಆಶೀರ್ವದಿಸಲ್ಪಟ್ಟ ಸಂತತಿಯಾಗಿ ಬಾಳಲು ಹರಸುತ್ತೇವೆ.
- B.ಮಲ್ಲಿಕಾ ಸಾರಾಳ್
ಪ್ರಾರ್ಥನಾ ಅಂಶ:
ಒಂದು ಹಳ್ಳಿಗೆ ಒಂದು ಸಂಪೂರ್ಣವಾದ ಬೈಬಲ್ ನೀಡಲು, 50,000 ಬೈಬಲ್‌ಗಳು ಸಿಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482