Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.10.2025
Share:

By Village Missionary Movement

Tuesday, 21-Oct-2025

ಧೈನಂದಿನ ಧ್ಯಾನ(Kannada) – 21.10.2025

 

ಸರಳವಾದ ಸತ್ಯ 

 

"...ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು..." - ಅಪೊಸ್ತಲ. 16:31

 

ಒಬ್ಬರು ತಾನು ಸೈಕಲ್ ಓಡಿಸುವಾಗ ಎಷ್ಟು ಮೈಲುಗಳು ಓಡಿಸುತ್ತೇನೆ ಎಂಬುದನ್ನು ತಿಳಿಯಲು ಬಯಸಿದರು. ಆದ್ದರಿಂದ ದೂರವನ್ನು ಅಳೆಯಲು ಒಂದು ಸಾಧನವನ್ನು ಖರೀದಿಸಿದರು. ಆದರೆ ಅದನ್ನು ತನ್ನ ಸೈಕಲ್‌ಗೆ ಜೋಡಿಸುವುದು ಬಹಳ ಕಷ್ಟಕರವಾಗಿತ್ತು. ಆದ್ದರಿಂದ ಅವರು ಅದನ್ನು ಖರೀದಿಸಿದ ಅಂಗಡಿಗೆ ಹಿಂತಿರುಗಿಸಿದರು. ಅಂಗಡಿಯವನು ಆ ಸಾಧನವನ್ನು ತನ್ನ ಸೈಕಲ್‌ಗೆ ಜೋಡಿಸಿ ಅದನ್ನು ಕಾರ್ಯರೂಪಕ್ಕೆ ತಂದನು. ಸರಿಯಾದ ಜನರು ಅದನ್ನು ಮಾಡಿದರೆ ತಾನು ಕಷ್ಟಕರವಾದ ಕೆಲಸವೆಂದು ಭಾವಿಸಿದ್ದು ಕಷ್ಟವಲ್ಲ ಎಂಬುದನ್ನು ಅರಿತುಕೊಂಡರು. 

 

ನಾವು ಸಹ ನಮ್ಮ ಪಾಪಗಳಿಂದ ಬಿಡುಗಡೆಯಾಗಿ, ದೇವರ ಮಗುವಾಗಿ ಮಾರ್ಪಡುವುದು ಕಷ್ಟ ಎಂದು ಭಾವಿಸುತ್ತೇವೆ. ಆದರೆ ಅಪೊಸ್ತಲರ ಕೃತ್ಯಗಳು 16:31 ರಲ್ಲಿ, "ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು" ಎಂದು ಹೇಳಲ್ಪಟ್ಟಿದೆ. ಇದು ಸರಳವಾದ ಸತ್ಯ.

 

ನಾವೆಲ್ಲರೂ ಪಾಪ ಮಾಡಿ, ದೇವರಿಂದ ಬೇರ್ಪಟ್ಟಿದ್ದೇವೆ. ಆದರೆ ನಮ್ಮನ್ನು ಸೃಷ್ಟಿಸಿದ ದೇವರು "ಯೇಸು" ಎಂಬ ಹೆಸರಿನಲ್ಲಿ ಈ ಭೂಮಿಗೆ ಬಂದರು. (ಮತ್ತಾಯ 1:21) ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಎಂದು ಹೇಳಲ್ಪಟ್ಟಿದೆ. ಆತನು ನಮ್ಮ ಪಾಪಗಳನ್ನು ಶಿಲುಬೆಯ ಮೇಲೆ ಹೊತ್ತುಕೊಂಡು ತೀರಿಸಿದರೆಂದೂ, ಸತ್ತವರೊಳಗಿಂದ ಎದ್ದರೆಂದೂ ಸತ್ಯವೇದವು ಹೇಳುತ್ತದೆ. ಈ ರೀತಿಯಾಗಿ ಯೇಸು ಕ್ರಿಸ್ತನು ನಮಗಾಗಿ ಮಾಡಿದ್ದನ್ನು ನಾವು ನಂಬುವುದರ ಮೂಲಕ, ನಾವು ನಾಶವಾಗದೆ ನಿತ್ಯ ಜೀವವನ್ನು ಹೊಂದುವಂತೆ ಆತನನ್ನು ನಮಗಾಗಿ ಕೊಟ್ಟು, ಇಷ್ಟರ ಮಟ್ಟಿಗೆ ಲೋಕವನ್ನು ಪ್ರೀತಿಸಿದರು .

 

ಪ್ರಿಯರೇ! ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವುದು ನಮಗೆ ಎಷ್ಟು ಸುಲಭ ಎಂದು ಯೋಚಿಸಿ ನೋಡಿ. ನಮ್ಮನ್ನು ಪ್ರೀತಿಸಿದ್ದಕ್ಕಾಗಿ ಮತ್ತು ತನ್ನ ರಕ್ತದಿಂದ ನಮ್ಮ ಪಾಪಗಳು ನೀಗುವಂತೆ ನಮ್ಮನ್ನು ತೊಳೆದು, ನಮ್ಮನ್ನು ರಾಜರನ್ನಾಗಿಯೂ ರಾಣಿಯರನ್ನಾಗಿಯೂ ಮಾರ್ಪಡಿಸಿದ ಯೇಸು ಕ್ರಿಸ್ತನಿಗೆ ಕೃತಜ್ಞತೆ ಹೇಳೋಣವಾ? ಆದ್ದರಿಂದ ನಾವು ಈ ರೀತಿಯಾಗಿ ಅರಿಕೆ ಮಾಡೋಣ. ದೇವರೇ, ನಾನು ಪಾಪಿ ಎಂದು ನನಗೆ ತಿಳಿದಿದೆ. ನಾನು ನಿನ್ನ ದೃಷ್ಟಿಯಲ್ಲಿ ತಪ್ಪಾಗಿರುವ ಕೆಲಸಗಳನ್ನು ಮಾಡಿದ್ದೇನೆ. ನನ್ನ ಪಾಪಗಳಿಗಾಗಿ ಶಿಲುಬೆಯ ಮೇಲೆ ಸಾಯಲು ನೀವು ಯೇಸುವನ್ನು ಭೂಮಿಗೆ ಕಳುಹಿಸಿದ್ದೀರೆಂದು ನಾನು ನಂಬುತ್ತೇನೆ. ಆತನು ಮಾತ್ರವೇ ನನ್ನ ಪಾಪಗಳನ್ನು ಕ್ಷಮಿಸಲು ಸಾಧ್ಯ ಎಂದು ನಂಬುತ್ತೇನೆ! ಎಂದು ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡಾಗ, ಯೇಸು ಕ್ರಿಸ್ತನ ರಕ್ತವು ನಮ್ಮ ಎಲ್ಲಾ ಪಾಪಗಳನ್ನು ನೀಗಿಸಿ ನಮ್ಮನ್ನು ಶುದ್ಧೀಕರಿಸಿ ಬಿಡುತ್ತದೆ. ನಾವು ಪಾಪದಿಂದ ಮುಕ್ತರಾಗಿ ರಕ್ಷಣೆಯ ಸಂತೋಷವನ್ನು ಪಡೆದುಕೊಳ್ಳುತ್ತೇವೆ. ಆಮೆನ್.

- A. ಬ್ಯೂಲಾ

 

ಪ್ರಾರ್ಥನಾ ಅಂಶ:

ನಾಲ್ಕು ದಿನಗಳ ಕಾಲ ಅಲ್ಲಿಯೇ ಇದ್ದು ಸೇವೆಮಾಡಲು, ತಮ್ಮ ಮನೆಗಳು ಮತ್ತು ಚರ್ಚುಗಳನ್ನು ತೆರೆದು ಕೊಡುವವರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş