By Village Missionary Movement
Sunday, 19-Oct-2025ಧೈನಂದಿನ ಧ್ಯಾನ(Kannada) – 19.10.2025
ಪ್ರತಿಭೆಗಳನ್ನು ಉಪಯೋಗಿಸು
"...ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" - 2 ಕೊರಿಂಥ 9:7
ಷಾರ್ಲೆಟ್ ಎಲಿಯಟ್ ತುಂಬಾ ಸುಂದರ ಮಹಿಳೆ. ಅವರು ಪ್ರತಿಭಾನ್ವಿತ ಪಿಯಾನೋ ವಾದಕಿ. ಅವರು ನುಡಿಸುವುದನ್ನು ಕೇಳಲು ತುಂಬಾ ಇಂಪಾಗಿರುತ್ತದೆ. ಹೆಚ್ಚಿನ ಅಭ್ಯಾಸದೊಂದಿಗೆ ಅವರು ಪರಿಣಿತ ಪಿಯಾನೋ ವಾದಕಿಯಾಗಿ ಮಾರ್ಪಟ್ಟರು. ಸಣ್ಣ ಗುಂಪುಗಳಲ್ಲಿ ಪಿಯಾನೋ ನುಡಿಸುತ್ತಿದ್ದ ಎಲಿಯಟ್ ಬಹಳ ಪ್ರಸಿದ್ಧರಾದರು. ಆದ್ದರಿಂದ ಅವರನ್ನು ದೊಡ್ಡ ಗುಂಪುಗಳಲ್ಲಿ ನುಡಿಸಲು ಆಹ್ವಾನಿಸಲಾಯಿತು. ಆ ದಿನ, ಅಸಾಮಾನ್ಯ ಅಭಿನಂದನೆಗಳ ಸುರಿಮಳೆಯಾಯಿತು. ಆ ಸಮಯದಲ್ಲಿ, ಡಾ. ಮಿಲನ್ ಬಂದರು. ಎಲಿಯಟ್, ನಿನಗಿರುವ ಸೌಂದರ್ಯ ಮತ್ತು ಪ್ರತಿಭೆ ದೇವರು ಕೊಟ್ಟದ್ದು. ಅವುಗಳನ್ನು ದೇವರಿಗಾಗಿ ಉಪಯೋಗಿಸು. ಮೊದಲು, ಅವರನ್ನು ನಿನ್ನ ಹೃದಯದಲ್ಲಿ ಸ್ವೀಕರಿಸು. ಅಷ್ಟೇ ಅಲ್ಲ, ದೇವರು ನಿನಗೆ ನೀಡಿರುವ ಪ್ರತಿಭೆಯನ್ನು ಲೌಕಿಕ ಕಾರ್ಯಗಳಿಗಾಗಿ ಉಪಯೋಗಿಸಿ ಹಣ, ಹೆಸರು ಮತ್ತು ಖ್ಯಾತಿಯನ್ನು ಗಳಿಸುವುದು ಭಿಕ್ಷೆ ಬೇಡುವುದಕ್ಕೆ ಸಮಾನ ಎಂದು ಹೇಳಿದರು.
ಈ ಮಾತುಗಳು ಷಾರ್ಲೆಟ್ ಎಲಿಯಟ್‌ನ ಕಿವಿಗಳಲ್ಲಿ ರಿಂಗಣಿಸುತ್ತಲೇ ಇದ್ದವು. ಅದು ಅವರನ್ನು ಯೋಚಿಸುವಂತೆ ಮಾಡಿತು. ಇಷ್ಟು ಸಮಯ ಮತ್ತು ಹಣವನ್ನು ಹೀಗೆ ವ್ಯರ್ಥ ಮಾಡಿಬಿಟ್ಟೆನಲ್ಲಾ ದೇವರು ಕೊಟ್ಟಿರುವ ಪ್ರತಿಭೆಯನ್ನು ಅವರಿಗಾಗಿ ಬಳಸಿದರೆ ಅವರು ಎಷ್ಟು ಸಂತೋಷಪಡುತ್ತಾರೆ ಎಂದು ಭಾವಿಸಿ ಆ ದಿನದಿಂದ, ಅವರು ತನ್ನ ಪ್ರತಿಭೆಯನ್ನು ದೇವರಿಗಾಗಿ ಬಳಸಲು ಪ್ರಾರಂಭಿಸಿದರು. ಅವರು ಅನೇಕ ಹಾಡುಗಳನ್ನು ಸಹ ಬರೆದರು. ಅವರು ಬರೆದ ಹಾಡುಗಳಲ್ಲಿ ಒಂದು ಎಲ್ಲಾ ಕ್ರೈಸ್ತ ಸಭೆಗಳಲ್ಲಿ ಇಂದಿಗೂ ಹಾಡುವಂತಹ ಹಾಡು. ಅದು ಯಾವ ಹಾಡು ಎಂದು ತಾನೇ ಯೋಚಿಸುತ್ತಿದ್ದೀರ ಪುಟಾಣಿಗಳೇ.
"ನಾನು ಪಾಪಿಯೇ, ಆದರೂ ನೀನು ದೋಷವಿಲ್ಲದ ರಕ್ತವನ್ನು ಚೆಲ್ಲಿದೆ" ಎಂಬ ಹಾಡೇ.
ಇದನ್ನು ಬರೆಯುವಾಗಲೇ, ತಾನು ಎಷ್ಟು ದೊಡ್ಡ ಪಾಪಿ ಎಂದು ಅರಿತುಕೊಂಡರು. ದೇವರು ಅವರಿಗೆ ಕೊಟ್ಟ ಪ್ರತಿಭೆಯನ್ನು ಅವರಿಗಾಗಿಯೇ ಬಳಸುವುದನ್ನು ಯೋಚಿಸಿ ಸಂತೋಷಪಟ್ಟರು. ದೇವರು ಅವರನ್ನು ಅನೇಕರಿಗೆ ಆಶೀರ್ವಾದವಾಗಿ ಮಾರ್ಪಡಿಸಿದರು.
ಪುಟ್ಟ ಕಣ್ಮಣಿ ಮಕ್ಕಳೇ, ನೀವು ಚೆನ್ನಾಗಿ ಹಾಡಬಹುದು, ಚಿತ್ರ ಬಿಡಿಸಬಹುದು ಮತ್ತು ಚೆನ್ನಾಗಿ ಬರೆಯಬಹುದು. ನಿಮ್ಮಲ್ಲಿ ಯಾವುದೇ ಪ್ರತಿಭೆಗಳಿದ್ದರೂ, ನೀವು ಅವುಗಳನ್ನು ದೇವರಿಗಾಗಿ ಬಳಸುವಾಗ Jesus ಸಂತೋಷಪಡುತ್ತಾರೆ. ಅದಕ್ಕಾಗಿಯೇ ತಾನೇ ನಮ್ಮನ್ನು ಸೃಷ್ಟಿಸಿದ್ದಾರೆ ಪುಟಾಣಿಗಳೇ! ಏನು ಯೋಚಿಸುತ್ತಾ ಇದ್ದೀರ, ನನ್ನ ಎಲ್ಲಾ ಪ್ರತಿಭೆಗಳನ್ನು ಯೇಸುವಿಗಾಗಿಯೇ ಬಳಸುತ್ತೇನೆ ಎಂದು ನಿರ್ಧರಿಸುತ್ತೀರಾ? ಅದನ್ನು ಇಂದೇ ಈಗಲೇ ಮಾಡುತ್ತೀರಾ? Very good super.
- Mrs. ಅನ್ಬು ಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482