Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.10.2025
Share:

By Village Missionary Movement

Saturday, 18-Oct-2025

ಧೈನಂದಿನ ಧ್ಯಾನ(Kannada) – 18.10.2025

 

ಪ್ರಯೋಜಕನು

 

"ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು, ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ" - ಫಿಲೆಮೋನ 1:11

 

ಅಮೆರಿಕದಲ್ಲಿ, ಜಾನ್ ಎಂಬ ಒಬ್ಬ ಚಿಕ್ಕ ಹುಡುಗ ತನ್ನ ಕುಟುಂಬ ಮತ್ತು ಸಂಬಂಧಿಕರಿಂದ ತಳ್ಳಲ್ಪಟ್ಟು ಕೈಬಿಡಲ್ಪಟ್ಟ ಸ್ಥಿತಿಯಲ್ಲಿದ್ದನು. ಅವನು ಬೀದಿಯ ಬದಿಯಲ್ಲಿ ಬಿದ್ದಿದ್ದ ಕಬ್ಬಿಣದ ತುಣುಕುಗಳನ್ನು ಎತ್ತಿಕೊಂಡು ಕಮ್ಮಾರ ಅಂಗಡಿಗೆ ತೆಗೆದುಕೊಂಡು ಹೋಗಿ, ಅವುಗಳನ್ನು ಹರಿತಗೊಳಿಸಿ, ಚಾಕುಗಳನ್ನು ಮಾಡಿದನು. ಮೊದಲ ಬಾರಿಗೆ ಅವನು ಎರಡು ಚಾಕುಗಳನ್ನು ಮಾಡಿ ಕಡಿಮೆ ಬೆಲೆಗೆ ಒಂದು ಮನೆಗೆ ಮಾರಿದನು. ಆ ಮನೆಯ ತಾಯಿ, "ಈ ಚಾಕು ಚೆನ್ನಾಗಿದೆ, ನೀನು ಇನ್ನೂ ಹೆಚ್ಚಿನ ಚಾಕುಗಳನ್ನು ಮಾಡಬಹುದಲ್ಲಾ" ಎಂದು ಹೇಳಿದರು. ಅವನು ಸಹ ಅದನ್ನು ಒಳ್ಳೆಯ ಸಲಹೆಯಾಗಿ ಸ್ವೀಕರಿಸಿ ಕಷ್ಟಪಟ್ಟು ಕೆಲಸ ಮಾಡಿ ಅನೇಕ ಚಾಕುಗಳನ್ನು ಮಾಡಿದನು. ಕಾಲಾನಂತರದಲ್ಲಿ, ಅವನು ಉತ್ತಮ ಬೆಲೆಗೆ ಕಬ್ಬಿಣವನ್ನು ಖರೀದಿಸಿ ಗುಣಮಟ್ಟದ ಚಾಕುಗಳನ್ನು ತಯಾರಿಸಿದನು ಮತ್ತು ಅಂಗಡಿಯನ್ನು ತೆರೆದನು, ಅಂಗಡಿಗೆ "ಜಾನ್ ನೈಫ್" ಎಂದು ಹೆಸರಿಸಿಟ್ಟನು. ವ್ಯವಹಾರವು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ಅವನು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದನು. ಅವನ ಕುಟುಂಬವೂ ಅವನೊಂದಿಗೆ ಸೇರಿಕೊಂಡಿತು. 

 

ಆದಿಕಾಂಡದಲ್ಲಿ, ಯೋಸೇಫನೆಂಬ ಒಬ್ಬ ಯುವಕನನ್ನು ನೋಡುತ್ತೇವೆ. ಅವನ ಸಹೋದರರು ಅವನನ್ನು ತುಂಬಾ ದ್ವೇಷಿಸುತ್ತಿದ್ದರು. ಅವರು ಅವನನ್ನು ಕೊಲ್ಲಲು ನೆನೆಸಿ ಒಂದು ಗುಂಡಿಗೆ ಹಾಕಿದರು. ನಂತರ ಅವರು ಅವನನ್ನು ಅನ್ಯದೇಶಕ್ಕೆ ಗುಲಾಮನಾಗಿ ಮಾರಿದರು. ಯೋಸೇಫನು ಎಲ್ಲಾ ರೀತಿಯಲ್ಲೂ ಬಹಳ ದಬ್ಬಾಳಿಕೆಗೆ ಒಳಗಾದನು. ಆದರೆ, ಕರ್ತನು ಅವನೊಂದಿಗಿದ್ದರು ಮತ್ತು ಅವನು ಮಾಡಿದ ಎಲ್ಲವನ್ನೂ ಯಶಸ್ವಿಗೊಳಿಸಿದರು. ಅವನು ಕಾರ್ಯಸಿದ್ಧಿ ಉಳ್ಳವನಾಗಿದ್ದನು. ನಂತರ, ಮಾಡದ ಅಪರಾಧಕ್ಕಾಗಿ ಅವನನ್ನು ಸೆರೆಮನೆಗೆ ಹಾಕಲ್ಪಟ್ಟರೂ, ಅಲ್ಲಿಯೂ ನಾಯಕನ ಸ್ಥಾನಕ್ಕೆ ಹೆಚ್ಚಿಸಲ್ಪಟ್ಟನು. ನಂತರ ಐಗುಪ್ತಕ್ಕೆ ಅಧಿಪತಿಯನ್ನಾಗಿ ಮಾಡಲಾಯಿತು. ಪರಿಸ್ಥಿತಿ ಹೇಗಿತ್ತೆಂದರೆ, ಅವನ ಸಹೋದರರು ಐಗುಪ್ತದಲ್ಲಿ ಉನ್ನತ ಸ್ಥಾನದಲ್ಲಿದ್ದ ಯೋಸೇಫನನ್ನು ಹುಡುಕಿ ಬಂದರು. ಎಲ್ಲೆಡೆಯಿದ್ದ ಬರಗಾಲವೇ ಇದಕ್ಕೆ ಕಾರಣವಾಗಿತ್ತು. ಸಹೋದರರನ್ನು ಕ್ಷಮಿಸಿ ಸೇರಿಸಿಕೊಂಡ ಯೋಸೇಫನು ಆಶೀರ್ವದಿಸಲ್ಪಟ್ಟರು.

 

ಪ್ರಿಯರೇ! ನಿಮ್ಮ ಕುಟುಂಬ ಮತ್ತು ಸಂಬಂಧಿಕರಿಂದ ನೀವು ಸಹ ನಿಷ್ಪ್ರಯೋಜಕರೆಂದು ಪರಿಗಣಿಸಲ್ಪಡುತ್ತಿದ್ದೀರಾ? ಯಾರನ್ನಾದರೂ ಉನ್ನತೀಕರಿಸುವುದು ಮತ್ತು ಬಲಪಡಿಸುವುದು ಆತನ ಕೈಯಿಂದ ಸಾಧ್ಯವಾಗುತ್ತದೆ. ಈ ವಚನದ ಪ್ರಕಾರ ಕರ್ತನು ನಿಮ್ಮನ್ನು ಆಶೀರ್ವದಿಸಲಿ. ಮೇಲಿನ ವಚನದಲ್ಲಿ, ಫಿಲೆಮೋನನೆಂಬ ಯಜಮಾನನಿಗಿದ್ದ ಗುಲಾಮನಾದ ಒನೇಸಿಮನು, ಅಪರಾಧ ಮಾಡಿದ್ದಕ್ಕಾಗಿ ಸೆರೆಮನೆಗೆ ಹಾಕಲ್ಪಟ್ಟಿದ್ದನು. ಅಲ್ಲಿ ಅವನು ಅಪೊಸ್ತಲನಾದ ಪೌಲನನ್ನು ಭೇಟಿಯಾಗಿ, ಕರ್ತನ ವಾಕ್ಯವನ್ನು ಸ್ವೀಕರಿಸಿ ಪುನಃ ತನ್ನ ಯಜಮಾನನ ಬಳಿಗೆ ಕಳುಹಿಸಲ್ಪಡುತ್ತಾನೆ. ಹೌದು, ಲೋಕದಿಂದ ನಿಷ್ಪ್ರಯೋಜಕರೆಂದು ಪರಿಗಣಿಸಲ್ಪಟ್ಟ ನಮ್ಮನ್ನು ಉಪಯುಕ್ತರನ್ನಾಗಿ ಪರಿವರ್ತಿಸುವುದು ದೇವರಿಗೆ ಸುಲಭ. ನಿಮ್ಮನ್ನು ತಿರಸ್ಕರಿಸಿ ಹೊರಗೆ ಹಾಕಿದವರ ನಡುವೆಯೇ ದೇವರು ನಿಮ್ಮನ್ನು ಮತ್ತೆ ಮೇಲಕ್ಕೆತ್ತಲು ಸಮರ್ಥನೆಂದು ನಂಬಿರಿ.

- B.ಸುಭಾಷ್

 

ಪ್ರಾರ್ಥನಾ ಅಂಶ:

ನಾಲ್ಕು ಸುವಾರ್ತೆ ಟ್ರಕ್‌ಗಳು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino perabet perabet giriş meritking meritking giriş meritking meritking giriş matbet matbet giriş superbetin superbetin giriş