Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.10.2025
Share:

By Village Missionary Movement

Monday, 13-Oct-2025

ಧೈನಂದಿನ ಧ್ಯಾನ(Kannada) – 13.10.2025

 

ಮೊದಲು ದೇವರಿಗೆ ಕೊಡು

 

"...ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು ಅಂದನು." - ಮಾರ್ಕ 12:44

 

ಇಬ್ಬರು ಸೇವಕರು ಉತ್ತರ ಭಾರತದ ಪರ್ವತಗಳಲ್ಲಿರುವ ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಕುಟುಂಬವನ್ನು ಭೇಟಿಯಾಗಿ ಅವರಿಗಾಗಿ ಪ್ರಾರ್ಥಿಸಲು ಹೋದರು. ಆ ಕುಟುಂಬವು ಸೇವಕರನ್ನು ನೋಡಿದ ನಂತರ, ಅವರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿ ಅವರನ್ನು ಚೆನ್ನಾಗಿ ಉಪಚರಿಸಿದರು. ಅವರು ಹೊರಡುವ ಮೊದಲು ಅವರಿಗೆ ಬೈಬಲ್ ಓದಿ, ಪ್ರಾರ್ಥಿಸಿ ಕರ್ತನ ಒಳ್ಳೆಯ ಮಾತುಗಳನ್ನು ಹಂಚಿಕೊಂಡರು.

 

ತಮ್ಮ ಮನೆಗೆ ಬಂದ ಸೇವಕರನ್ನು ಬರಿಗೈಯಲ್ಲಿ ಕಳುಹಿಸಲು ಬಯಸದೆ, ಆ ಮನೆಯ ಮಹಿಳೆ ತಮ್ಮ ಮುಂದಿನ ಊಟಕ್ಕೆ ಮೀಸಲಿಟ್ಟಿದ್ದ ಸ್ವಲ್ಪ ರೊಟ್ಟಿ ಮತ್ತು ಹಣ್ಣುಗಳನ್ನು ತಂದು ಸೇವಕರಿಗೆ ಕೊಟ್ಟಳು. ಆ ಆಹಾರವನ್ನು ಹೊರತುಪಡಿಸಿ ತಿನ್ನಲು ಅವರಿಗೆ ಬೇರೇನೂ ಇಲ್ಲ ಎಂದು ತಿಳಿದ ಸೇವಕರು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಆದಾಗ್ಯೂ, ಅವರನ್ನು ಬರಿಗೈಯಲ್ಲಿ ಕಳುಹಿಸುವುದು ಸರಿಯಲ್ಲ ಎಂದು ಭಾವಿಸಿದ ಮಹಿಳೆ ಅದನ್ನು ಅವರಿಗೆ ಕೊಟ್ಟಳು. ಸೇವಕರು ಆ ಬಡ ಬುಡಕಟ್ಟು ಕುಟುಂಬಕ್ಕಾಗಿ ಭಾರವಾಗಿ ಪ್ರಾರ್ಥಿಸಿ ಹಿಂತಿರುಗಿದರು.

 

ಎಂತಹ ಆಶ್ಚರ್ಯ! ಮರುದಿನ, ಕೆಲವು ಸರ್ಕಾರಿ ಅಧಿಕಾರಿಗಳು ಹಳ್ಳಿಗೆ ಬಂದು ಬುಡಕಟ್ಟು ಜನಾಂಗದವರಿಗೆ ಸರ್ಕಾರದಿಂದ ನೀಡಲಾಗುವ ಭತ್ಯೆಯನ್ನು ನೀಡಿ ಹೊರಟುಹೋದರು. ಕರ್ತನು ಅವರನ್ನು ಕೈಬಿಡಲಿಲ್ಲ. ನಾವು ದೇವರಿಗೆ ಮತ್ತು ಆತನ ಸೇವಕರಿಗೆ ನಮ್ಮಿಂದ ಸಾಧ್ಯವಾದದ್ದನ್ನು ನೀಡಿದರೆ, ದೇವರು ನಮ್ಮ ಅಗತ್ಯಗಳನ್ನು ಪೂರೈಸುತ್ತಾರೆ ಮತ್ತು ನಮ್ಮನ್ನು ನೂರು ಪಟ್ಟು ಆಶೀರ್ವದಿಸುತ್ತಾರೆ. ದೇವರ ಮಕ್ಕಳ ತ್ಯಾಗ, ಸೇವೆಯ ಮೇಲಿನ ಅವರ ಉತ್ಸಾಹ ಮತ್ತು ಸೇವಕರ ಮೇಲಿನ ಅವರ ಪ್ರೀತಿಯನ್ನು ಕರ್ತನು ನೋಡುತ್ತಾರೆ. 

 

ಸತ್ಯವೇದದಲ್ಲಿ, ಆಲಯದಲ್ಲಿ ಕಾಣಿಕೆ ಪೆಟ್ಟಿಗೆಯಲ್ಲಿ ಎರಡು ಕಾಸನ್ನು ಕಾಣಿಕೆಯಾಗಿ ಹಾಕಿದ ಆ ಬಡ ತಾಯಿಯ ಹೃದಯವನ್ನು ದೇವರು ನೋಡಿದರು. ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು ಅಂದನು. ಅವಳು ಎಷ್ಟು ಕೊಟ್ಟಳು ಎಂಬುದನ್ನು ಅವರು ನೋಡಲಿಲ್ಲ, ಆದರೆ ಅವಳು ಯಾವ ಸ್ಥಿತಿಯಲ್ಲಿ ಕೊಟ್ಟಳು ಎಂಬುದನ್ನು ನೋಡಿದರು. "ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ" (ಕೀರ್ತನೆ 34:10). 

 

ಹೌದು, ನನಗೆ ಪ್ರಿಯವಾದವರೇ, ಉದಾರವಾಗಿ ದೇವರಿಗೆ ಕೊಡುವ ಮಕ್ಕಳಿಗೆ ಅವರು ಬಹಳ ಪ್ರಬಲವಾದ ವಾಗ್ದಾನಗಳನ್ನು ಮತ್ತು ಮಹಿಮೆಯಾದ ಪ್ರತಿಫಲಗಳನ್ನು ಇಟ್ಟಿದ್ದಾರೆ. ನಮ್ಮ ಹೃದಯಗಳನ್ನು ಶೋಧಿಸಿ ತಿಳಿದಿರುವ ದೇವರ ಸೇವೆಗಳನ್ನು, ಸೇವಕರನ್ನು ಗೌರವಿಸಲು ಹೃತ್ಪೂರ್ವಕ ಕಾಣಿಕೆಗಳನ್ನು ನೀಡಲು ದೇವರು ನಮಗೆ ಕೃಪೆಯನ್ನು ನೀಡಲಿ!

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ಮಿಷನರಿ ತರಬೇತಿ ಕಟ್ಟಡದ ಆರ್ಥಿಕ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al