Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.10.2025 (Kids Special)
Share:

By Village Missionary Movement

Sunday, 12-Oct-2025

ಧೈನಂದಿನ ಧ್ಯಾನ(Kannada) – 12.10.2025 (Kids Special)

 

Power ಆದ ಮಾತು

 

"ನಿನ್ನ ಧರ್ಮಶಾಸ್ತ್ರವನ್ನು ಸದಾ ತಪ್ಪದೆ ಕೈಕೊಳ್ಳುವೆನು." - ಕೀರ್ತನೆ 119:44

 

ಹಲೋ ಮುದ್ದು ಮಕ್ಕಳೇ! How are you? ಪ್ರತಿ ವಾರ ಕಥೆಯನ್ನು ಕೇಳುತ್ತೀರಲ್ಲಾ... ಕೇಳುವುದು ಮಾತ್ರವಲ್ಲ ಅದರಂತೆ ಬದುಕಲು ಸಹ ಪ್ರಯತ್ನಿಸುತ್ತಲೇ ಇರಬೇಕು o.k ನಾ ಪುಟಾಣಿಗಳೇ.

 

ಇಂಗ್ಲೆಂಡ್‌ನಲ್ಲಿ ಒಬ್ಬ ರೈತನಿಗೆ ಕುದುರೆಗಳಿದ್ದವು. ಅವುಗಳಿಗೆ 'ಪ್ಯಾಟಿ', 'ಕೇಸಿ' ಮತ್ತು 'ಬೈಲಿ' ಎಂದು ಹೆಸರಿಟ್ಟದ್ದರು. ನಿಮಗೂ ಕೂಡ, 'ಅಮ್ಮು' 'ಪಟ್ಟು' ಎಂದೆಲ್ಲಾ ಮುದ್ದು ಹೆಸರು ಇಟ್ಟಿರ್ತಾರಲ್ಲಾ ಅದೇ ರೀತಿ. ಸಂಜೆ, ರೈತ ತನ್ನ ಮನೆಯ ಬಾಗಿಲಲ್ಲಿ ಕುಳಿತಿದ್ದ. ಒಬ್ಬ ವ್ಯಕ್ತಿ ದೂರದಿಂದ ಆತಂಕದಿಂದ ಓಡಿ ಬಂದರು. ರೈತ ಅವರನ್ನು ಕೂರಿಸಿ ಬಿಸಿ ಚಹಾ ಕೊಟ್ಟರು. ಹೇಳಿ, ಏನು ವಿಷಯ ಬಂದದ್ದು? ತುಂಬಾ ಆತಂಕಗೊಂಡಿದ್ದೀರಲ್ಲಾ ಎಂದು ಕೇಳಿದರು.

 

ಲಂಡನ್‌ನಿಂದ ಬರುವಾಗ, ನನ್ನ ಕಾರು ಸಣ್ಣ ಹಳ್ಳದಲ್ಲಿ ಬಿದ್ದುಬಿಟ್ಟಿತು. ನಿಮ್ಮ ಬಳಿ ಕುದುರೆ ಇದೆ ಎಂದು ತಿಳಿಯಿತು. ದಯವಿಟ್ಟು ನನಗೆ ಸಹಾಯ ಮಾಡಿ, ಎಂದು ಕೇಳಿದರು. ತಕ್ಷಣ ವೇಗ ವೇಗವಾಗಿ ಹಗ್ಗ ಮತ್ತು ಅಗತ್ಯ ಉಪಕರಣಗಳನ್ನು ತೆಗೆದುಕೊಂಡು ಹೋದರು. ಸಹಾಯ ಮಾಡಲು ಎಷ್ಟು ಬೇಗ ಬೇಗ ಹೋದರೆಂದು ನೋಡುದ್ರಾ ಪುಟಾಣಿಗಳೇ. ನೀವು ಕೂಡ ಹೀಗೆಯೇ ಇತರರಿಗೆ ಸಹಾಯ ಮಾಡಬೇಕು. ರೈತ ಕಾರನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿ ಕುದುರೆಯನ್ನು ಇನ್ನೊಂದು ತುದಿಗೆ ಕಟ್ಟಿದರು. ನಂತರ ಕೇಸಿ, ವೇಗವಾಗಿ ಎಳಿ ಎಂದು ಹೇಳಿದರು. ಬೈಲಿ ಜೋರಾಗಿ, "ಮ್...ಮ್ ನೀನೂ speed ಆಗಿ ಮ್...ಮ್... ಎಂದು ಶಬ್ದವಾಗಿ ಹೇಳಿದರು. ಪ್ಯಾಟಿ ನನ್ನ ಮುದ್ದು ನೀನು ಕೂಡ ಎಳೆದುಬಿಡು ನೋಡೋಣ ಎಂದು ಹೇಳಿದ ಕೂಡಲೇ ಕಾರು ಮೇಲೆ ಬಂದು ಬಿಟ್ಟಿತು. ಕಾರು ಚಾಲಕನಿಗೆ ಏನೂ ಅರ್ಥವಾಗಲಿಲ್ಲ. ಒಂದೇ ಒಂದು ಕುದುರೆ ಇದೆ ಮೂರು ಹೆಸರು ಹೇಳುದ್ರಲ್ಲಾ ಎಂದು ಕೇಳಿದರು. ನನ್ನ ಪ್ಯಾಟಿಗೆ ಕಣ್ಣು ಕಾಣೋದಿಲ್ಲ ಪಕ್ಕದಲ್ಲಿ ಎರಡು ಕುದುರೆಗಳು ಇರುವ ಹಾಗೆ ಹೇಳಿ ಅದಕ್ಕೆ ಧೈರ್ಯ ಬರುವಂತೆ ಮಾಡಿದೆ ಎಂದು ಹೇಳಿದರು. ನೀವು ಮಾಡಿದ ಸಹಾಯಕ್ಕೆ ತುಂಬಾ ಧನ್ಯವಾದ ಎಂದು ಹೇಳಿದರು. ನಂತರ ಪ್ಯಾಟಿಯನ್ನು ತಟ್ಟಿ very good ನಿನ್ನ ಯಜಮಾನನಿಗೆ ಉಪಯುಕ್ತವಾದ ಕುದುರೆಯಾಗಿದ್ದೀಯಲ್ಲಾ!" ಎಂದು ಹೇಳಿದ ಕೂಡಲೇ, ಕುದುರೆ ಎಲ್ಲಾ ಅರ್ಥವಾದಂತೆ ತಲೆಯಾಡಿಸಿತು. 

 

ಮುದ್ದು ಮಕ್ಕಳೇ, ತನ್ನ ಯಜಮಾನನಿಗೆ ವಿಧೇಯತೆ ತೋರಿದ ಕುದುರೆಗೆ ನಂಬಿಕೆ ಮತ್ತು ಶಕ್ತಿ ಬಂದ ಹಾಗೆ, ಸತ್ಯವೇದದ ವಾಕ್ಯಗಳಿಗೆ ಹಲವು ಪಟ್ಟು power ಇದೆ. ನೀವು ಅದನ್ನು ಓದಿ, ಧ್ಯಾನಿಸಿ, ಪ್ರೀತಿಸಿ ಅದರ ಪ್ರಕಾರ ಜೀವಿಸಿದರೆ, ನಿನ್ನ life ತುಂಬಾ Bright ಆಗಿ ಮಾರ್ಪಡುತ್ತದೆ.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş