By Village Missionary Movement
Saturday, 11-Oct-2025ಧೈನಂದಿನ ಧ್ಯಾನ(Kannada) – 11.10.2025
ಪಿಲಾತನ ಹೆಂಡತಿ
"...ನೀನು ಆ ಸತ್ಪುರುಷನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಪಟ್ಟೆನು..." - ಮತ್ತಾಯ 27:19
ಪಿಲಾತನ ಹೆಂಡತಿ, ಯೇಸುವಿನ ವಿಚಾರಣೆಯ ಬಗ್ಗೆ ತಿಳಿದುಕೊಂಡು, ತನ್ನ ಗಂಡನಾದ ಪಿಲಾತನಿಗೆ ಸಂದೇಶವನ್ನು ಕಳುಹಿಸುತ್ತಾರೆ, ಯೇಸುವನ್ನು ತಪ್ಪಾಗಿ ನಿರ್ಣಯಿಸದಂತೆ ಎಚ್ಚರಿಸುತ್ತಾರೆ. ಪಿಲಾತನನ್ನು ರೋಮನ್ ಸಾಮ್ರಾಜ್ಯವು ಯೂದಾಯ ರಾಜ್ಯಪಾಲನನ್ನಾಗಿ ನೇಮಿಸಿತು. ಯೆಹೂದ್ಯರು ಅಸೂಯೆಯಿಂದ ಯೇಸುವನ್ನು ಮರಣದಂಡನೆಗೆ ಒಪ್ಪಿಸಲು ಬಯಸುತ್ತಿದ್ದಾರೆಂದು ಪಿಲಾತನು ಅರಿತುಕೊಂಡರು. ಇದಕ್ಕೆ ಕಾರಣ ಪಿಲಾತನ ಹೆಂಡತಿ ಕನಸಿನಲ್ಲಿ ಕಂಡ ವಿಷಯಗಳು ಮತ್ತು ಅವರು ಯೇಸುವಿನ ಬಗ್ಗೆ ಕೇಳಿದ ಸುದ್ದಿ! ಈ ಘಟನೆಯನ್ನು ಮತ್ತಾಯದಲ್ಲಿ ಮಾತ್ರ ಉಲ್ಲೇಖಿಸಲಾಗಿದೆ.
ಪಿಲಾತನ ಹೆಂಡತಿಯ ಹೆಸರನ್ನು ಸತ್ಯವೇದದಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ಅವರ ಹೆಸರು ಕ್ಲಾಡಿಯಾ ಪ್ರೊಕ್ಯುಲಾ (Claudia procula) ಎಂದು ಪಾರಂಪರ್ಯವಾಗಿ ನಂಬಲಾಗುತ್ತಿದೆ. ಇವರು ಯೆಹೂದ್ಯ ನಂಬಿಕೆಯುಳ್ಳವರಾಗಿದ್ದು ನಂತರ ಕ್ರೈಸ್ತರಾಗಿ ಮಾರ್ಪಟ್ಟರು ಎಂದು ಹೇಳಲಾಗುತ್ತದೆ. ಗ್ರೀಕ್ ಸಭೆ ಅವರಿಗೆ ಪರಿಶುದ್ಧರೆಂಬ ಬಿರುದು ಕೊಟ್ಟಿದೆ. ಅವರ ಕನಸು ಅವರನ್ನು ಬಹಳವಾಗಿ ತೊಂದರೆಗೊಳಿಸಿತು. ತನ್ನ ಗಂಡ ನ್ಯಾಯಸ್ಥಾನದಲ್ಲಿ ಕುಳಿತಿದ್ದಾಗ, ಅವರು ಸಂದೇಶವನ್ನು ಕಳುಹಿಸಿದರು. ಇದು ಅಸಾಮಾನ್ಯವಾಗಿದ್ದರೂ, ಯೇಸುವಿನ ಕುರಿತಾದ ಕನಸು ಅವರನ್ನು ಹೀಗೆ ಮಾಡಲು ಪ್ರೇರೇಪಿಸಿತು. ಬಹುಶಃ ಕ್ಲಾಡಿಯಸ್ ಬೀದಿಗಳಲ್ಲಿ ಯೇಸುವನ್ನು ನೋಡಿರಬಹುದು. ಅವರು ಆತನ ಅದ್ಭುತಗಳ ಬಗ್ಗೆ ಕೇಳಿರಬಹುದು. ಪಿಲಾತನೊಂದಿಗೆ ಮಾತನಾಡುವಾಗ ಅವರು ಯೇಸುವಿನ ಬಗ್ಗೆ ಹಂಚಿಕೊಂಡಿರಬಹುದು. ಆದರೆ ಒಂದು ವಿಷಯ ಖಚಿತ. ಅವರ ಕನಸು ಒಂದು ದೈವೀಕವಾದ ಪ್ರಕಟಣೆ. ಅದರ ಮೂಲಕ ಅವರು ಯೇಸು ನೀತಿವಂತರೆಂದು ಅರಿತುಕೊಂಡರು. ಯೇಸುವಿನ ಶಿಲುಬೆಯ ಮರಣದಲ್ಲಿ ಅವರು ನೀತಿವಂತನೆಂದು ಸಾಕ್ಷಿ ಹೇಳಿದವರುಗಳಲ್ಲಿ ಕ್ಲಾಡಿಯಸ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು. ಅವರು ತನ್ನ ಕನಸಿನಲ್ಲಿ ಯೇಸುವಿನಿಂದ ತುಂಬಾ ಪಾಡು ಪಟ್ಟರು ಎಂದು ಹೇಳುವಾಗ, ಅವರು ತನ್ನ ಕನಸಿನಲ್ಲಿ ಯೇಸುವಿನ ಪಾಡುಗಳನ್ನು ಸಹ ನೋಡಿರಬೇಕು. ಯೇಸುವಿನ ಪಾಡುಗಳನ್ನು ಅವರು ನೋಡುವಾಗ, ಅವರಿಂದ ಆ ದುಃಖವನ್ನು ಸಹಿಸಲಾಗಲಿಲ್ಲ.
ಯೇಸುವಿನ ಶಿಲುಬೆಗೇರಿಸುವಿಕೆಯಲ್ಲಿ ಪಿಲಾತನ ಹೆಂಡತಿಗೆ ಏನೂ ಮಾಡಲು ಸಾಧ್ಯವಾಗದಿದ್ದರೂ, ಒಬ್ಬ ಮಹಿಳೆ ಯಾವ ದೋಷವೂ ಇಲ್ಲದ ಯೇಸುವನ್ನು ಬಿಡುಗಡೆ ಮಾಡಲು ಪ್ರಯತ್ನಿಸಿದ್ದು ಗಮನಾರ್ಹ. ನಮ್ಮ ಸಾಕ್ಷಿಯನ್ನು ಸ್ವೀಕರಿಸಿದರೂ ಅಥವಾ ತಿರಸ್ಕರಿಸಿದರೂ, ಈ ಈ ಸ್ತ್ರೀಯಂತೆ ಕರ್ತನಾದ ಯೇಸುವಿಗಾಗಿ ಬದುಕೋಣ. ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. (2 ತಿಮೊಥೆ. 2:12)
-Rev. ಎಲಿಜಬೆತ್
ಪ್ರಾರ್ಥನಾ ಅಂಶ:
ಮಿಷನರಿಗಳು ಅಲ್ಲೇ ಉಳಿದು ತರಬೇತಿ ಪಡೆಯಲು ಮಿಷನರಿ ತರಬೇತಿ ಕಟ್ಟಡಕ್ಕಾಗಿ ಸರ್ಕಾರದ ಅನುಮೋದನೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482