By Village Missionary Movement
Monday, 06-Oct-2025ಧೈನಂದಿನ ಧ್ಯಾನ(Kannada) – 06.10.2025
ಕೃತಜ್ಞತೆ ಸಲ್ಲಿಸಿರಿ
"ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು" - ಕೀರ್ತನೆ 34:1
ಒಂದು ಅರಣ್ಯದಲ್ಲಿ ರೆಕ್ಕೆಯಿಲ್ಲದ ಪುಟ್ಟ ಗುಬ್ಬಚ್ಚಿಯೊಂದು ಆಹಾರ, ನೀರು ಏನೂ ಇಲ್ಲದೆ, ದಣಿದು ದುಃಖದಲ್ಲಿತ್ತು. ಒಂದು ದಿನ, ಆ ಮರುಭೂಮಿಯ ಮೂಲಕ ದೇವದೂತನೊಬ್ಬ ಹಾದುಹೋದರು. ಆ ಗುಬ್ಬಚ್ಚಿ ಅವರ ಬಳಿ, ಎಲ್ಲಿಗೆ ಹೋಗುತ್ತಿದ್ದೀರ ಎಂದು ಕೇಳಿತು. ಅದಕ್ಕೆ ಆ ದೇವದೂತನು, ನಾನು ಕರ್ತನನ್ನು ನೋಡಲು ಹೋಗುತ್ತಿದ್ದೇನೆ ಅಂದರು. ಕೂಡಲೇ ಆ ಗುಬ್ಬಚ್ಚಿ, ನೀವು ದೇವರ ಬಳಿ ನಾನು ಎಷ್ಟು ದಿನ ಹೀಗೆಯೇ ಇರಬೇಕು? ಈ ಜೀವನಕ್ಕೆ ಅಂತ್ಯವೇ ಇಲ್ಲವೇ? ಎಂದು ಕೇಳುವಂತೆ ಹೇಳಿತು. ದೇವದೂತನು ಸಹ ಪರಲೋಕಕ್ಕೆ ಹೋಗಿ ದೇವರ ಬಳಿ ಗುಬ್ಬಚ್ಚಿ ಹೇಳಿದ್ದನ್ನು ಕೇಳಿದರು. ಅದಕ್ಕೆ ದೇವರು, "ಹೌದು, ಗುಬ್ಬಚ್ಚಿಯ ಜೀವನವು ಕೊನೆಯವರೆಗೂ ಹೀಗೇ ಇರುತ್ತದೆ" ಎಂದು ನಗುತ್ತಾ ಹೇಳಿದರು. ದೇವದೂತನಿಗೆ ತುಂಬಾ ದುಃಖವಾಯಿತು. ದೇವರು ದೂತನ ಬಳಿ ನಾನು ಹೇಳುವ ಈ ಪ್ರಾರ್ಥನೆಯನ್ನು ಗುಬ್ಬಚ್ಚಿಗೆ ಪ್ರತಿದಿನವೂ ಹೇಳಲು ಹೇಳು ಎಂದರು. ಅದು ಏನು ಪ್ರಾರ್ಥನೆ ಗೊತ್ತಾ? "ಕರ್ತನೇ! ಎಲ್ಲದಕ್ಕೂ ಸ್ತೋತ್ರ" ಎಂದು. ದೇವದೂತನು ಸಹ ಗುಬ್ಬಚ್ಚಿಯ ಬಳಿಗೆ ಹೋಗಿ ಕರ್ತನು ಹೇಳಿದ್ದನ್ನು ಹೇಳಿಬಿಟ್ಟು ಹಾದುಹೋದರು. ಗುಬ್ಬಚ್ಚಿಯೂ ಸಹ ಪ್ರತಿದಿನ ಸಾಧ್ಯವಾದಷ್ಟು ಎತ್ತರಕ್ಕೆ ತನ್ನ ಧ್ವನಿಯನ್ನು ಎತ್ತಿ, "ಎಲ್ಲದಕ್ಕೂ ಸ್ತೋತ್ರ ಕರ್ತನೇ" ಎಂದು ಹೇಳಲು ಪ್ರಾರಂಭಿಸಿತು. ಯಾವುದೇ ಬದಲಾವಣೆಯಾಗಲಿಲ್ಲ. ಆದರೆ ಆ ಗುಬ್ಬಚ್ಚಿ ಒಂದು ದಿನವೂ ತಪ್ಪದೆ ಆ ಪ್ರಾರ್ಥನೆಯನ್ನು ಹೇಳುತ್ತಲೇ ಇತ್ತು.
ಒಂದು ದಿನ ಆ ಮರುಭೂಮಿಯಲ್ಲಿ ಮಳೆ ಸುರಿಯಿತು. ಸಸ್ಯಗಳು ಮೊಳಕೆಯೊಡೆಯಲು ಪ್ರಾರಂಭಿಸಿದವು. ಗುಬ್ಬಚ್ಚಿ ಒಂದು ಗಿಡದ ಕೆಳಗೆ ನಿಂತಿದ್ದ ನೀರಿನಲ್ಲಿ ತನ್ನ ಪ್ರತಿರೂಪವನ್ನು ನೋಡಿತು. ಅದರ ಮೇಲೆ ಸುಂದರವಾದ ಗರಿಗಳು ಮೊಳಕೆಯೊಡೆದಿದ್ದವು. ಅದಕ್ಕೆ ತುಂಬಾ ಸಂತೋಷವಾಗಿತ್ತು. ಈಗ ಅದಕ್ಕೆ ಪ್ರತಿದಿನ ಆಹಾರ ಸಿಕ್ಕಿತು. ಆದರೆ ಅದು ಎಲ್ಲವೂ ಇದೆಯಲ್ಲಾ ಇನ್ನೇನು ಅಂದುಕೊಂಡು ಆ ಪ್ರಾರ್ಥನೆಯನ್ನು ನಿಲ್ಲಿಸಲೇ ಇಲ್ಲ.
ಸತ್ಯವೇದದಲ್ಲಿ, ಅರಸನಾದ ದಾವೀದನ ಜೀವನವು ಐಷಾರಾಮಿ ಜೀವನವಾಗಿರಲಿಲ್ಲ. ಕೀರ್ತನೆ 34 ನ್ನು ಬರೆಯುವಾಗ, ತನ್ನ ಮಗ ಅಬೀಮೆಲೆಕನಿಂದ ಓಡಿಸಲ್ಪಟ್ಟಿದ್ದರು. ಹೌದು, ಚಿಕ್ಕವಯಸ್ಸಿನಿಂದಲೇ ಅವರು ಅನೇಕ ಕಷ್ಟಗಳನ್ನು ಅನುಭವಿಸಿದ್ದವರು. ಆದರೆ ಅವರು ಒಂದು ದಿನವೂ ಕರ್ತನಿಗೆ ಕೃತಜ್ಞತೆ ಸಲ್ಲಿಸದೇ ಇರುತ್ತಿರಲಿಲ್ಲ. ನಾವು ಕಷ್ಟದ ಸಮಯದಲ್ಲಿ ದೇವರನ್ನು ಸ್ತುತಿಸುತ್ತಿದ್ದೇವಾ? ಎಂದು ನಮ್ಮ ದೇವರು ನಮ್ಮನ್ನು ನೋಡುತ್ತಿದ್ದಾರೆ. "ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ (ಯೆಶಾಯ 43:21). ಕರ್ತನು ನಮ್ಮ ಸ್ತುತಿಯಲ್ಲಿ ಸಂತೋಷಪಡುತ್ತಾರೆ. ನಾವು ನಮ್ಮ ಜೀವನದಲ್ಲೂ, ಕೆಳಮಟ್ಟದಲ್ಲೂ ದೇವರನ್ನು ಕೃತಜ್ಞತೆಯಿಂದ ಸ್ತುತಿಸಿದರೆ, ನಮ್ಮ ಜೀವನವೇ ಬದಲಾಗುತ್ತದೆ. ಆ ಪುಟ್ಟ ಗುಬ್ಬಚ್ಚಿಗೆ ಕರ್ತನು ಹೇಳಿಕೊಟ್ಟ ಪ್ರಾರ್ಥನೆಯನ್ನು ನಾವು ಸಹ ಪ್ರತಿದಿನ ಮರೆಯದೇ ಮಾಡೋಣವಾ?
“Thank you lord Jesus for everything". Amen
- Mrs. ಶೀಲಾ ಜಾನ್
ಪ್ರಾರ್ಥನಾ ಅಂಶ:
ನಮ್ಮೊಂದಿಗೆ ಸೇರಿರುವ ದೆಬೋರಾಳ್ ಸೇವಕರುಗಳ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482