By Village Missionary Movement
Sunday, 05-Oct-2025ಧೈನಂದಿನ ಧ್ಯಾನ(Kannada) – 05.10.2025
ಯೇಸು ಇದ್ದರೆ ಸಾಕು
"ಯೆಹೋವನು ನನಗೆ ಕುರುಬನು; ಕೊರತೆಪಡೆನು" - ಕೀರ್ತನೆ 23:1
ಪ್ರೀತಿಯ ಮಕ್ಕಳೇ ಸಂತೋಷವಾಗಿದ್ದೀರಾ? ಯೇಸಪ್ಪ ಕೊಟ್ಟಿರುವ ದಿನಗಳನ್ನು ವ್ಯರ್ಥವಾಗಿ ಕಳೆಯದೆ ಓದುವ ಸಮಯದಲ್ಲಿ ಚೆನ್ನಾಗಿ ಓದಬೇಕು. O.k. ನಾ ಪುಟಾಣಿಗಳೇ! ಈಗ ಕಥೆಯನ್ನು ಕೇಳೋಣ್ವಾ? ಉಷಾ ಮತ್ತು ನಿತ್ಯ ಎಂಬ ಇಬ್ಬರು ಸ್ನೇಹಿತರು ಒಂದೇ ಬೀದಿಯಲ್ಲಿ ವಾಸಿಸುತ್ತಿದ್ದರು. ಅವರು ಬಾಲ್ಯದಿಂದಲೂ ಒಟ್ಟಿಗೆ ಓದಿದವರು. ಇಬ್ಬರಿಗೂ ಒಳ್ಳೆಯ ಕೆಲಸಗಳು ಸಿಕ್ಕವು. ಉಷಾ ಅಕ್ಕ ಯಾವಾಗಲೂ ಸಕ್ರಿಯವಾಗಿ ಮತ್ತು ಉತ್ಸಾಹಭರಿತರಾಗಿ ತುಂಬಾ ಸಂತೋಷವಾಗಿ ಇರುತ್ತಿದ್ದರು. ಅವರು ಎಂದಿಗೂ ಯಾವುದರ ಬಗ್ಗೆಯೂ ಚಿಂತಿಸುತ್ತಿರಲಿಲ್ಲ. ಆದರೆ ನಿತ್ಯ ಅಕ್ಕ ಯಾವಾಗಲೂ ದುಃಖ ಮುಖದಿಂದ ಇರುತ್ತಿದ್ದರು. ಒಳ್ಳೆಯ ಕೆಲಸ ಮತ್ತು ಹಣವಿದ್ದರೂ, ಅವರು ಸಂತೋಷವಾಗಿರಲು ಸಾಧ್ಯವಾಗಲಿಲ್ಲ. ಉಷಾ ಅಕ್ಕನ ಮುಖದಲ್ಲಿ ಸಂತೋಷವನ್ನು ನೋಡಿದ ನಿತ್ಯ ಅಕ್ಕನಿಗೆ ತುಂಬಾ ಆಶ್ಚರ್ಯ. ಹೇಗಾದರೂ ಅವರ ಸಂತೋಷದ ರಹಸ್ಯವನ್ನು ತಿಳಿದುಕೊಳ್ಳಲು ಬಯಸಿದರು. ಏನು ಪುಟಾಣಿಗಳೇ! ಉಷಾ ಅಕ್ಕಳನ್ನು ನೋಡೋದಕ್ಕೆ ನಿಮಗೂ ಆಸೆನಾ? ಬನ್ನಿ ಹೋಗಿ ನೋಡೋಣ.
Hai ಉಷಾ! How are you? ಎಂದು ಕೇಳಿದ ನಿತ್ಯಾಳನ್ನು ಕಂಡು ನಗುತ್ತಾ ಬಂದರು. ಅವರಿಗೆ ಚಹಾ ಮತ್ತು ವಡೆ ನೀಡಿ ತುಂಬಾ ಚೆನ್ನಾಗಿ ಉಪಚರಿಸಿದರು. ಉಷಾ, ನಿನಗೆ ಚಿಂತೇನೇ ಇಲ್ವಾ? ನಮಗೆ ವಯಸ್ಸಾದಾಗ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ? ನಮಗೆ ಯಾರು ಸಹಾಯ ಮಾಡುತ್ತಾರೆ, ಹೀಗೆ ಯಾವುದರ ಬಗ್ಗೆಯೂ ಯೋಚಿಸೋದಿಲ್ವಾ ಎಂದು ನಿತ್ಯ ಅಕ್ಕ ಕೇಳಿದ ಕೂಡಲೇ ಉಷಾ ಅಕ್ಕ ಏನು ಹೇಳಿರುತ್ತಾರೆ ಎಂದು ಭಾವಿಸುತ್ತೀರ ಮಕ್ಕಳೇ! ನಾನೇ ಹೇಳಿಬಿಡ್ಲಾ? ಇಲ್ಲಿ ನೋಡು ನಿತ್ಯಾ, ನಾನು ಬೆಳಿಗ್ಗೆ ಎದ್ದ ಕೂಡಲೇ ಯೇಸಪ್ಪನಿಗೆ ಪ್ರಥಮ ಸ್ಥಾನ ಕೊಟ್ಟು ಪ್ರಾರ್ಥಿಸುತ್ತೇನೆ. ಅವರು ನನಗೆ ಕುರುಬನಾಗಿರುವುದರಿಂದ, ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ. ನಾನು ಯಾವುದೇ ಕಷ್ಟಗಳು ಅಥವಾ ನಷ್ಟಗಳನ್ನು ಎದುರಿಸಿದರೂ ಯೇಸಪ್ಪ ನನ್ನನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ, ಆದ್ದರಿಂದ ನಾನು ಯಾವಾಗಲೂ ಸಂತೋಷವಾಗಿರುತ್ತೇನೆ ಎಂದು ಹೇಳಿದ ಉಷಾ ಅಕ್ಕನನ್ನು ಕಣ್ಣು ಮಿಟುಕಿಸದೆ ನೋಡುತ್ತಲೇ ಇದ್ದರು... ಏನು ನಿತ್ಯಾ, ಭಯಾನಕ ಆಲೋಚನೆಗಳಲ್ಲಿ ಮುಳುಗಿದ್ದೀಯಾ ಎಂದು ಕೇಳಿದ ಕೂಡಲೇ, ನಿನ್ನ ಸಂತೋಷದ ರಹಸ್ಯವನ್ನು ನಾನು ತಿಳಿದುಕೊಂಡೆ ಎಂದು ಹೇಳಿದರು ನಿತ್ಯಾ ಅಕ್ಕ. ಯೇಸು ಇಲ್ಲದ ಜೀವನ ಬರಿದಾಗಿರುತ್ತದೆ ಎಂದು ನನಗೆ ಅರ್ಥವಾಯಿತು ಉಷಾ. O.k bye ಎಂದು ಹೊರಟ ನಿತ್ಯಾಳ ಮುಖದಲ್ಲಿ ನಗು ಅರಳಲು ಪ್ರಾರಂಭಿಸಿತು. ನನಗೂ ಯೇಸಪ್ಪ ಇದ್ದಾರೆ ಎಂಬ ನಂಬಿಕೆ ಬಂದುಬಿಟ್ಟಿತು ಎಂದು ಹೇಳಿದರು. ಪುಟಾಣಿಗಳೇ, ಈ ಲೋಕದಲ್ಲಿ ಬಹಳಷ್ಟು ಹಣ, ಖ್ಯಾತಿ ಮತ್ತು ಸೌಕರ್ಯ ಇದ್ದರೂ, ಯೇಸು ಇಲ್ಲದಿದ್ದರೆ, ಅಲ್ಲಿ ಸಂತೋಷವೇ ಇರುವುದಿಲ್ಲ. ಯೇಸಪ್ಪನಿಗೆ ಮೊದಲ ಆದ್ಯತೆ ನೀಡಿ ಅವರು ಕೊಡುವ ಆಶೀರ್ವಾದಗಳನ್ನು ಪಡೆದುಕೊಳ್ಳಿರಿ ಮುದ್ದು ಪುಟಾಣಿಗಳೇ.
- Sis .ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482