By Village Missionary Movement
Saturday, 04-Oct-2025ಧೈನಂದಿನ ಧ್ಯಾನ(Kannada) – 04.10.2025
ತೆಗೆದುಕೊಳ್ಳದ ಹಸು ಮತ್ತು ವ್ಯರ್ಥ ಜಗಳ
"...ವಾಗ್ವಾದಗಳಿಗೂ ದೂರವಾಗಿರು; ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ" - ತೀತ 3:9
ಒಂದು ಊರಿನಲ್ಲಿ ಗಂಡ ಹೆಂಡತಿ ವಾಸಿಸುತ್ತಿದ್ದರು. ಗಂಡ ಕೆಲಸಕ್ಕೆ ಹೋಗುವುದೇ ಇಲ್ಲ. ಆದ್ದರಿಂದ ಹೆಂಡತಿ ತನ್ನ ಗಂಡನನ್ನು ನೋಡಿ, ಏನಾದರೂ ಒಂದು ಕೆಲಸ ಮಾಡಿ ಸಂಪಾದನೆ ಮಾಡಬಾರದಾ ಎಂದರು. ಗಂಡ ತಕ್ಷಣ ತನ್ನ ಹೆಂಡತಿಯ ಬಳಿ, ನಾವು ಒಂದು ಮೇಕೆ ತೆಗೆದುಕೊಳ್ಳೋಣ. ಅದಕ್ಕೆ ನಿನ್ನ ತಂದೆಯ ಬಳಿ ಹಣ ತೆಗೆದುಕೊಂಡು ಬಾ. ಅಲ್ಲದೆ, ಆ ಮೇಕೆ ಮರಿ ಹಾಕುತ್ತದೆ. ಮರಿಗಳು ಬೆಳೆಯುತ್ತಾ ಬೆಳೆಯುತ್ತಾ ಅನೇಕ ಮೇಕೆಗಳಾಗುತ್ತವೆ. ನಾವು ಮೇಕೆಗಳನ್ನು ಮಾರಿ ಹಸುವನ್ನು ಖರೀದಿಸಬಹುದು. ಆ ಹಸು ಹಾಲು ನೀಡುತ್ತದೆ. ನಾವು ಆ ಹಾಲನ್ನು ಮಾರಿ ಸಾಕಷ್ಟು ಹಣ ಗಳಿಸಬಹುದು. ನಾವು ಕಾಫಿ ಕೂಡ ಕುಡಿಯಬಹುದು. ಅಸ್ವಸ್ಥನಾಗಿರುವ ನನ್ನ ತಂದೆಗೂ ಸಹ ಪ್ರತಿದಿನ ಒಂದು ಲೋಟ ಹಾಲು ಕೊಡಬಹುದು. ಹೆಂಡತಿ ಕೂಡ, "ಹೌದು, ಹೌದು, ಪಕ್ಕದ ಬೀದಿಯಲ್ಲಿ ಇರುವ ನನ್ನ ತಾಯಿಗೂ ಕೊಡಬಹುದು ಎಂದಳು. ಇದನ್ನು ಕೇಳಿದ ಗಂಡನಿಗೆ ಕೋಪ ಬಂತು, ನಿನ್ನ ತಾಯಿಗೆ ಏಕೆ ಕೊಡಬೇಕು? ಎಂದು ಗಂಡ ಕೂಗಾಡಲು ಪ್ರಾರಂಭಿಸಿದರು. ಹೀಗೆ ಅವರ ನಡುವೆ ಜಗಳ ಶುರುವಾಯಿತು. ಗದ್ದಲ ಕೇಳಿದ ಪಕ್ಕದ ಮನೆಯವರು ಅಲ್ಲಿಗೆ ಬಂದು ವಿಷಯ ತಿಳಿದುಕೊಂಡು, ಗಂಡನನ್ನು ನೋಡಿ, ಏನಪ್ಪಾ, ನಿಮ್ಮ ಹಸು ನನ್ನ ತೋಟದಲ್ಲಿ ಮೇಯುತ್ತಾ ಎಲ್ಲಾ ಬೆಳೆಗಳನ್ನು ನಾಶಮಾಡಿಬಿಟ್ಟಿತು. ನೀನು ನನಗೆ ನಷ್ಟವನ್ನು ತುಂಬಿಕೊಡಬೇಕು ಎಂದರು. ಅದಕ್ಕೆ ಗಂಡ, ನಾನು ಖರೀದಿಸದ ಹಸು ನೀನು ಖರೀದಿಸದ ತೋಟವನ್ನು ಹೇಗೆ ಮೇಯಲು ಸಾಧ್ಯ ಎಂದರು. ಪಕ್ಕದ ಮನೆಯವರು ತಕ್ಷಣ ನೀವು ಖರೀದಿಸದ ಹಸುವಿನಿಂದ ನಿನ್ನ ಹೆಂಡತಿ ತನ್ನ ತಾಯಿಗೆ ಹೇಗೆ ಹಾಲು ಕೊಡುತ್ತಾಳೆ ಎಂದರು. ತಮ್ಮ ತಪ್ಪನ್ನು ಅರಿತುಕೊಂಡ ಇಬ್ಬರೂ ನಾಚಿಕೆಯಿಂದ ತಲೆ ಬಾಗಿದರು.
ತೀತ 3:9 ಹೇಳುವುದು ಇದನ್ನೇ, "ವಾಗ್ವಾದಗಳಿಗೆ ದೂರವಾಗಿರಬೇಕು." ವಾಗ್ವಾದಗಳನ್ನು ಬಿಟ್ಟುಬಿಡದಿದ್ದರೆ, ಅದು ನಮ್ಮ ಎಲ್ಲಾ ಸಮಯವನ್ನು ವ್ಯರ್ಥ ಮಾಡುತ್ತದೆ. ಇವರು ಹಸುವನ್ನು ಖರೀದಿಸಲು ಬಯಸಿದ್ದು ಒಳ್ಳೆಯದೇ ಆಗಿತ್ತು. ಆದರೆ ಇದರಿಂದಾಗಿ, ಅವರು ತುಂಬಾ ಕಲ್ಪಿಸಿಕೊಂಡು, ಮಾತು ಬೆಳೆಸಿ ಗಂಡ ಹೆಂಡತಿ ಇಬ್ಬರೂ ಜಗಳವಾಡಿ, ಮತ್ತೊಬ್ಬರ ಮುಂದೆ ನಾಚಿಕೆಪಡಬೇಕಾದ ಪರಿಸ್ಥಿತಿ ಏರ್ಪಟ್ಟಿತು.
ದೇವರ ಮಕ್ಕಳೇ, ನಮ್ಮ ಮನೆಯಲ್ಲಿ ಅನಗತ್ಯ ವಾಗ್ವಾದಗಳನ್ನು ಉಂಟುಮಾಡಬಾರದು. ಅದರಲ್ಲೂ ಇತರರು ಬಂದು ನಮ್ಮನ್ನು ಸಮನ್ವಯಗೊಳಿಸುವ ಮಟ್ಟಿಗೆ ನಾವು ಹೋಗಬಾರದು. ನಾವು ಹಾಗೆ ಮಾಡಿದರೆ, ದೇವರ ನಾಮಕ್ಕೆ ದೂಷಣೆಯಾಗುತ್ತದೆ. ದೇವರ ನಾಮ ಮಹಿಮೆ ಹೊಂದಬೇಕೇ ಹೊರತು ದೂಷಿಸಲ್ಪಡಬಾರದು. ವಾಗ್ವಾದಗಳು ನಮ್ಮ ಶಾಂತಿಯನ್ನು ಹಾಳುಮಾಡುತ್ತದೆ. ಆದ್ದರಿಂದ, ನಾವು ನಿಷ್ಪ್ರಯೋಜಕ ವಾಗ್ವಾದಗಳನ್ನು ತಪ್ಪಿಸಿ ಶಾಂತಿಯನ್ನು ಕಾಪಾಡಿಕೊಳ್ಳೋಣ. ಖರೀದಿಸದ ಹಸುವಿನ ವಾಗ್ವಾದಗಳಂತೆ ನಮ್ಮ ಭವಿಷ್ಯದ ಜೀವನಕ್ಕಾಗಿ ವಾಗ್ವಾದಗಳನ್ನು ತಪ್ಪಿಸಿ ಕರ್ತನ ನಾಮವನ್ನು ಮಹಿಮೆಪಡಿಸೋಣ. ಕರ್ತನು ನಮ್ಮನ್ನು ಆಶೀರ್ವದಿಸಲಿ! ಆಮೆನ್!
- Mrs.ಹೆಪ್ಸಿಬಾ ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ನಮ್ಮ ಜೊತೆ ಸೇವಕರುಗಳ ಸೇವೆಯ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482