Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.10.2025
Share:

By Village Missionary Movement

Friday, 03-Oct-2025

ಧೈನಂದಿನ ಧ್ಯಾನ(Kannada) – 03.10.2025

 

ಕೊಲ್ಲುವ ಅಸೂಯೆ

 

"ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು; ಗೋಡೆಯೊಡೆಯುವವನನ್ನು ಹಾವು ಕಚ್ಚುವದು" - ಪ್ರಸಂಗಿ 10:8

 

ಕೆಲವರಿಗೆ ಬೇರೆಯವರು ಚೆನ್ನಾಗಿ ಇರುವುದನ್ನು ನೋಡೋದಕ್ಕೇ ಇಷ್ಟ ಆಗೋದಿಲ್ಲ. ಇತರರು ಏಳಿಗೆ ಹೊಂದಿದಾಗ ಅದನ್ನು ಸಹಿಸುವುದಕ್ಕೇ ಆಗೋದಿಲ್ಲ. ಇದನ್ನೇ ನಾವು ಅಸೂಯೆ ಎಂದು ಕರೆಯುತ್ತೇವೆ. ಅಸೂಯೆಯಿಂದ ತನ್ನನ್ನು ತಾನೇ ಕೊಂದುಕೊಂಡ ಒಬ್ಬ ವ್ಯಕ್ತಿಯ ಕಥೆ ಇದೆ. ಸುಧನ್ ಮತ್ತು ಆನಂದ್ ಕ್ರೀಡೆಗಳಲ್ಲಿ ನಿಪುಣರಾಗಿದ್ದರು. ಇಬ್ಬರೂ ಸ್ಪರ್ಧಿಸುತ್ತಿದ್ದರು. ಆದರೆ ಆನಂದ್ ಯಾವಾಗಲೂ ಸುಧನ್ ನನ್ನು ಸೋಲಿಸುತ್ತಿದ್ದನು. ಕ್ರೀಡೆಗಳಲ್ಲಿ ನಿಪುಣನಾಗಿದ್ದ ಆನಂದನ ಪ್ರತಿಮೆಯನ್ನು ಮಾಡಲು ಜನರು ನಿರ್ಧರಿಸಿದರು. ಆದ್ದರಿಂದ ಅವರು ಅವನ ಪ್ರತಿಮೆಯನ್ನು ನಿರ್ಮಿಸಿದರು. ಸುಧನ್ ಅಸೂಯೆಯಿಂದ ತುಂಬಿದ್ದನು. ಅವನ ಪ್ರತಿಮೆಯನ್ನು ಕೆಡವಲು ನಿರ್ಧರಿಸಿದನು. ಪ್ರತಿದಿನ ಕತ್ತಲಾದ ನಂತರ, ಅವನು ಹೊರಗೆ ಹೋಗಿ ಪ್ರತಿಮೆಯ ಬುಡವನ್ನು ಸ್ವಲ್ಪ ಸ್ವಲ್ಪವಾಗಿ ಕೆಡವಲು ಮತ್ತು ಪ್ರತಿಮೆಯನ್ನು ಬೀಳಿಸಲು ಪ್ರಯತ್ನಿಸುತ್ತಿದ್ದನು. ಕೊನೆಗೆ, ಪ್ರತಿಮೆ ಅವನ ಮೇಲೆ ಬಿದ್ದದ್ದರಿಂದ ಅವನು ಸತ್ತು ಹೋದನು. ಅವನ ಅಸೂಯೆ ಅವನನ್ನೇ ಕೊಂದಿತು.

 

ಪರಿಶುದ್ಧ ಗ್ರಂಥದಲ್ಲಿ, ಅರಸನಾದ ಸೌಲನು ಗೊಲ್ಯಾತನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಗೊಲ್ಯಾತನನ್ನು ದಾವೀದನೆಂಬ ಕುರಿ ಕಾಯುವ ಹುಡುಗ ಕೊಂದನು. ಇದನ್ನು ನೋಡಿದ ಜನರು ಹಾಡನ್ನು ಹಾಡಿ ನೃತ್ಯ ಮಾಡಿದರು, "ಸೌಲನು ಕೊಂದದ್ದು ಸಾವಿರಗಟ್ಟಲೆ, ದಾವೀದನು ಕೊಂದದ್ದು ಹತ್ತು ಸಾವಿರಗಟ್ಟಲೆ" ಎಂದು. ತಕ್ಷಣ, ಅರಸನಾದ ಸೌಲನಿಗೆ ಅಸೂಯೆ ಬಂದು ತನಗಾಗಿಯೂ ಮತ್ತು ತನ್ನ ಜನರಿಗಾಗಿಯೂ ಜಯ ತಂದುಕೊಟ್ಟ ದಾವೀದನನ್ನು ಕೊಲ್ಲಲು ಪ್ರಯತ್ನಿಸಿದನು. ಕಾರಣ ಅಸೂಯೆಯೇ!

 

ನನ್ನ ಪ್ರೀತಿಯ ದೇವಜನರೇ, ನೀವು ನಿಜವಾಗಿಯೂ ಇತರರನ್ನು ಪ್ರೀತಿಸುವುದಾದರೆ, ಅವರು ಅಭಿವೃದ್ಧಿಯಾಗುವಾಗ ನೀವು ಅಸೂಯೆಪಡುವುದಿಲ್ಲ. ಅವರೊಂದಿಗೆ ಸಂತೋಷಪಡತ್ತೀರಿ. ಇತ್ತೀಚಿನ ದಿನಗಳಲ್ಲಿ, ವ್ಯಾಪಾರದಲ್ಲಿ, ವೃತ್ತಿಯಲ್ಲಿ, ಕೆಲಸದ ಸ್ಥಳದಲ್ಲಿ, ವಿದ್ಯಾಭ್ಯಾಸದಲ್ಲಿ ಮತ್ತು ಕ್ರೀಡೆಗಳಲ್ಲಿ, ಅಸೂಯೆ ಎಂಬ ಆಮೆ ಅನೇಕ ಜನರನ್ನು ಕೊಲ್ಲುತ್ತಿದೆ. ಹೀಗೆ ಒಂದು ಗಾದೆ ಇದೆ, "ಆಮೆ ಪ್ರವೇಶಿಸುವ ಮನೆ ಉದ್ಧಾರ ಆಗೋದಿಲ್ಲ". ಎಂದು. ಅದೇ ರೀತಿ, ಅಸೂಯೆ ಕೂಡ ಒಂದು ಭಯಾನಕ ವಿಷಯ!

 

ಆದ್ದರಿಂದ, ಪ್ರೀತಿಯ ದೇವಜನರೇ, ಅಸೂಯೆ ಸೈತಾನನ ಗುಣಲಕ್ಷಣಗಳಲ್ಲಿ ಒಂದಾಗಿದೆ. ನಾವು ಪ್ರತಿದಿನ ಅದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಅದನ್ನು ಮಾಡಲು ಏಕೈಕ ಮಾರ್ಗವೆಂದರೆ ಯೇಸುವನ್ನು ನಿಜವಾಗಿಯೂ ಪ್ರೀತಿಸುವುದು. ಆಗ ಮಾತ್ರವೇ ನಾವು ಇತರರನ್ನು ಪ್ರೀತಿಸಲು ಸಾಧ್ಯ. ಅಸೂಯೆ ನಮ್ಮನ್ನು ಕೊಲ್ಲುವ ಸಾಧನವಾಗಿದೆ. ನಮ್ಮಲ್ಲಿ ಅದು ಎಂದಿಗೂ ಇರಬಾರದು. ಹಲ್ಲೇಲೂಯಾ! ಕರ್ತನು ನಿಮ್ಮನ್ನು ಆಶೀರ್ವದಿಸಲಿ.

- Rev.S.A.ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

ದೇವರು ನಮ್ಮ ಜೊತೆಸೇವಕರುಗಳನ್ನು ಅವರ ಸೇವಾ ಕ್ಷೇತ್ರಗಳಲ್ಲಿ ಶಕ್ತಿಯುತವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin