Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.10.2025
Share:

By Village Missionary Movement

Thursday, 02-Oct-2025

ಧೈನಂದಿನ ಧ್ಯಾನ(Kannada) – 02.10.2025

 

ಒರಿಜಿನಲ್ ಅನ್ನು ಹುಡುಕುತ್ತಾ... 

 

"ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು;..." - ಜ್ಞಾನೋಕ್ತಿ 28:20

 

ಒಂದು ದಿನ ಬೆಳಿಗ್ಗೆ ಎದ್ದು, ಪ್ರಾರ್ಥಿಸಿ ಸತ್ಯವೇದವನ್ನು ಧ್ಯಾನಿಸುತ್ತಿದ್ದಾಗ, ದೇವರು ನನ್ನೊಂದಿಗೆ ಮಾತನಾಡಿದರು. ನೀನು ಒರಿಜಿನಲ್ಲಾ ಅಥವಾ ಡೂಪ್ಲಿಕೇಟಾ? ಎಂದು! ನಾನು ಇದರ ಬಗ್ಗೆ ಯೋಚಿಸುತ್ತಿರುವಾಗ, ದೇವರು ನನಗೆ, "ನೀನು ಮೊಟ್ಟ ಮೊದಲು ರಕ್ಷಿಸಲ್ಪಟ್ಟಾಗ, ನನ್ನ ಮೇಲಿನ ಪ್ರೀತಿಯಿಂದಾಗಿ ನೀನು ಎದುರಿಸಿದ ಅವಮಾನಗಳು ಮತ್ತು ನಿಂದೆಗಳನ್ನು ಲೆಕ್ಕಿಸದೆ ನನ್ನ ಸೇವೆ ಮಾಡಲು ಓಡಿಹೋದೆ. ಆದರೆ ಇಂದು, ಯಾರಾದರೂ ನಿನ್ನನ್ನು ಬೈದರೆ ನೀನು ಕಳವಳಗೊಳ್ಳುತ್ತೀಯ. ಮೊದಲು ನನಗೆ ಆತ್ಮಗಳನ್ನು ಕೊಡಿ ಎಂದು ಕೇಳುತ್ತಿದ್ದೆ. ಇಂದು, ನಿನ್ನ ಅಗತ್ಯಗಳಿಗಾಗಿ ಹಲವು ಗಂಟೆಗಳ ಕಾಲ ಪ್ರಾರ್ಥಿಸುತ್ತಿದ್ದೀಯ. ನಾನು ಮೊದಲಿದ್ದ ಒರಿಜಿನಲ್ ಗಣೇಶನನ್ನು ಹುಡುಕುತ್ತಿದ್ದೇನೆ. ನೀನು ಒರಿಜಿನಲ್ ಗಣೇಶನಾಗಿ ನನ್ನ ಬಳಿಗೆ ಬಾ ಎಂದು ಹೇಳಿದರು. ಆ ದಿನ ನಾನು ಅತ್ತು ನನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡೆ.

 

ಅದೇ ರೀತಿ, ಬೈಬಲ್‌ನಲ್ಲಿಯೂ ಸಹ, ಏದೇನ್ ತೋಟದಲ್ಲಿ ದೇವರು ತನ್ನ ಸ್ವಾರೂಪ್ಯದಲ್ಲಿಯೂ, ತನ್ನ ಹೋಲಿಕೆಯಲ್ಲಿಯೂ ಸೃಷ್ಟಿಸಿದ ಆದಾಮನನ್ನು ಹುಡುಕಿದರು. ಹಗಲಿನ ತಂಪಾದ ಸಮಯದಲ್ಲಿ ತೋಟದಲ್ಲಿ ನಡೆಯುತ್ತಿದ್ದ ಕರ್ತನು ಆದಾಮನನ್ನು ಹುಡುಕಿದರು. ಹಾಗಾದರೆ, ಆದಾಮನು ತೋಟದಲ್ಲಿ ಇರಲಿಲ್ಲವೋ... ಇಲ್ಲ, ಎಲ್ಲ ತೋಟದಲ್ಲೇ ಇದ್ದರು. ಆದರೆ ದೇವರು ಹುಡುಕಿದ್ದು ಒರಿಜಿನಲ್ ಆದಾಮನನ್ನು! ದೇವರ ಶಬ್ದವನ್ನು ಕೇಳಿ ಓಡಿ ಬಂದು ಅವರೊಂದಿಗೆ ನಡೆದ ಆದಾಮನು ಅಲ್ಲಿರಲಿಲ್ಲ. ಬದಲಿಗೆ, ಆತನ ಸನ್ನಿಧಿಯನ್ನು ಬಿಟ್ಟು ಹೋಗಿ ಬಚ್ಚಿಟ್ಟುಕೊಂಡ ಪಾಪ ಮಾಡಿದ ಆದಾಮನು ಅಲ್ಲಿದ್ದನು. ದೇವರು ಒರಿಜಿನಲ್ ಅನ್ನು ಪ್ರೀತಿಸುವವರು ಆದ್ದರಿಂದ ಆದಾಮನೇ, ನೀನು ಎಲ್ಲಿದ್ದೀಯ? ಎಂದು ಹುಡುಕಿದರು. 

 

ಅದೇ ರೀತಿಯಲ್ಲಿ, ದೇವರು ನಮ್ಮನ್ನು ರಕ್ಷಿಸಿದ ದಿನದಂದು, ನಾವು ದೇವರ ವಾಕ್ಯ ಮತ್ತು ಅವರ ಪ್ರಸನ್ನತೆಯನ್ನು ಹುಡುಕಿದೆವು, ಅವರನ್ನು ಅಪ್ಪಿಕೊಂಡೆವು ಮತ್ತು ಅವರ ಮೇಲೆ ಅವಲಂಬಿತವಾಗಿ ಬದುಕಿದೆವು. ಅವರ ಮೇಲಿಟ್ಟಿರುವ ಪ್ರೀತಿಯ ನಿಮಿತ್ತವಾಗಿ ನಾವು ಏನನ್ನೂ ಎದುರುನೋಡದೇ ಅವರಿಗಾಗಿ ಕಾರ್ಯ ಮಾಡಿದ್ದೇ ನಮ್ಮ ಒರಿಜಿನಲ್ ಸ್ವಭಾವವಾಗಿತ್ತು. ದೇವರು ಆ ಒರಿಜಿನಲ್ ಅನ್ನು ನೋಡಿಯೇ ನಮ್ಮನ್ನು ಆರಿಸಿಕೊಂಡು ನಮ್ಮ ಮೇಲೆ ತನ್ನ ಪ್ರೀತಿಯನ್ನು ಅಪಾರವಾಗಿ ಸುರಿಸಿದ್ದಾರೆ. 

 

ಪ್ರಿಯರೇ, ದೇವರು ಇಂದಿಗೂ ನಮ್ಮ ಒರಿಜಿನಲ್ ಅನ್ನು ಹುಡುಕುತ್ತಾ ನಮ್ಮ ಹತ್ತಿರದಲ್ಲಿದ್ದಾರೆ, ನಾವು ಒರಿಜಿನಲ್ ಆಗಿ ಇದ್ದೇವಾ? ಅಥವಾ ಡೂಪ್ಲಿಕೇಟ್ ಆಗಿ ಇದ್ದೇವಾ? ಕಾಲ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ನಮ್ಮನ್ನು ಬದಲಾಯಿಸಿಕೊಂಡು ಲೋಕಕ್ಕೆ ಸರಿಹೊಂದುವ ರೀತಿಯಲ್ಲಿ ಬದುಕುತ್ತಿದ್ದೇವಾ ಎಂದು ಯೋಚಿಸಿ ನಮ್ಮನ್ನು ಸರಿಪಡಿಸಿಕೊಳ್ಳೋಣ. ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ ಎಂದು ಹೇಳಿದ ದೇವರು ನಿಮ್ಮೊಂದಿಗಿದ್ದು ಭಯಂಕರವಾದ ಕಾರ್ಯಗಳನ್ನು ಮಾಡುತ್ತಾರೆ ಎಂಬುದು ಬಹಳ ಖಚಿತ.

- Bro.ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ನಮ್ಮ ಸಹ ಸೇವಕರುಗಳ ಸೌಖ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş